ತನ್ನ ಕೆಣಕಿದವರ ಜಾಗ ಖಾಲಿ ಮಾಡಿಸಿದ ಇಸ್ರೇಲ್‌, ಗಾಜಾ ಪ್ರಜೆಗಳಿಗೆ ಊರುಬಿಡಲು ಐಡಿಎಫ್‌ ಆರ್ಡರ್‌!

Oct 13, 2023, 11:13 PM IST

ಬೆಂಗಳೂರು (ಅ.13): ತನ್ನ ಕೆಣಕಿದವರನ್ನೇ ಇಸ್ರೇಲ್‌ ಜಾಗ ಖಾಲಿ ಮಾಡಿಸಿದೆ. ಹಮಾಸ್‌ ಉಗ್ರರು ಹಾಗೂ ಅವರು ಇಲ್ಲಿಯವರೆಗೂ ಬಳಸುತ್ತಿದ್ದ ವ್ಯವಸ್ಥೆಗಳನ್ನು ನಾಶ ಮಾಡುವ ಗುರಿಯಲ್ಲಿರುವ ಇಸ್ರೇಲ್‌, ತನ್ನ ಮಹಾಬಲಿಷ್ಠ ಸೇನೆಯನ್ನು ಗಾಜಾಪಟ್ಟಿಗೆ ನುಗ್ಗಿಸಲು ಸಜ್ಜಾಗಿದೆ. ಇದರ ನಡುವೆ ಗಾಜಾದ ಪ್ರದೇಶದ ನಾಗರೀಕರಿಗೆ 24 ಗಂಟೆಯ ಸಮಯಾವಕಾಶ ನೀಡಿದ್ದು, ಅಷ್ಟರ ಒಳಗಾಗಿ ಪ್ರದೇಶವನ್ನು ತೊರೆದು ದಕ್ಷಿಣ ಗಾಜಾಗೆ ಶಿಫ್ಟ್‌ ಆಗುವಂತೆ ಸೂಚನೆ ನೀಡಿದೆ. 

'ಗಾಜಾ ಸಿಟಿ ನಿವಾಸಿಗಳು ತಮ್ಮ ರಕ್ಷಣೆಗಾಗಿ ದಕ್ಷಿಣದತ್ತ ಸಾಗಬೇಕು. ವಾಡಿ ಗಾಜಾವರೆಗಿನ ಎಲ್ಲಾ ನಿವಾಸಿಗಳು ಸ್ಥಳಾಂತರವಾಗಬೇಕು. ಹಮಾಸ್ ಉಗ್ರರು ಇಸ್ರೇಲ್ ಸರ್ಕಾರದ ವಿರುದ್ಧ ಸಮರ ಸಾರಿದೆ. ಗಾಜಾ ಸಿಟಿಯಲ್ಲಿ ಶೀಘ್ರ ರಕ್ಷಣಾ ಕಾರ್ಯಚರಣೆ ನಡೆಯಬಹುದು. ನಾವು ಸೂಚನೆ ನೀಡಿದ ಬಳಿಕ ನೀವು ನಿಮ್ಮ ಜಾಗಕ್ಕೆ ಮರಳಬಹುದು' ಎಂದು ಇಸ್ರೇಲ್‌ ಹೇಳಿದೆ.

'ಒತ್ತೆಯಾಳಾಗಿ ನರಳೋದಕ್ಕಿಂತ ಸತ್ತಿದ್ದೆ ಒಳ್ಳೆಯದಾಯ್ತ..' 8 ವರ್ಷದ ಮಗಳ ಸಾವನ್ನು ಸ್ವಾಗತಿಸಿದ ಇಸ್ರೇಲ್‌ ಪ್ರಜೆ!

'ಯಾರೂ ಕೂಡ ಇಸ್ರೇಲ್ ಗಡಿಯ ಬಳಿ ಆಶ್ರಯ ಪಡೆಯಬೇಡಿ. ಹಮಾಸ್ ಉಗ್ರರು ಗಾಜಾ ಸಿಟಿ ಮನೆಗಳ ನೆಲ ಮಾಳಿಗೆಯಲ್ಲಿರಬಹುದು. ಕಾರ್ಯಾಚರಣೆ ವೇಳೆ ನಿಮ್ಮನ್ನ ಮಾನವ ಗುರಾಣಿ ರೀತಿ ಬಳಸಬಹುದು. ಹೀಗಾಗಿ ನೀವು, ನಿಮ್ಮ ಕುಟುಂಬ 24 ಗಂಟೆಯಲ್ಲಿ ದಕ್ಷಿಣ ಭಾಗಕ್ಕೆ ತೆರಳಿ. ಮುಂದಿನ ದಿನಗಳಲ್ಲಿ ಹಮಾಸ್ ಉಗ್ರರ ವಿರುದ್ಧ ದೊಡ್ಡ ಕಾರ್ಯಾಚರಣೆ ನಡೆಯಲಿದೆ ಎಂದು ಇಸ್ರೇಲ್‌ ತಿಳಿಸಿದೆ.