ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಪ್ರತಿಭಟನಾಕಾರರು, ಕಾರ್‌ ಕೀಗೆ ಹುಡುಕಾಟ, ಹಿಂಸಾತ್ಮಕ ಘರ್ಷಣೆ!

ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಪ್ರತಿಭಟನಾಕಾರರು, ಕಾರ್‌ ಕೀಗೆ ಹುಡುಕಾಟ, ಹಿಂಸಾತ್ಮಕ ಘರ್ಷಣೆ!

Published : Jul 09, 2022, 04:45 PM IST

ಲಭ್ಯವಾದ ವೀಡಿಯೋ ತುಣುಕಿನಲ್ಲಿ ಪ್ರತಿಭಟನಾಕಾರರು ಶ್ರೀಲಂಕಾದ ಧ್ವಜಗಳು ಮತ್ತು ಹೆಲ್ಮೆಟ್‌ಗಳನ್ನು ಹಿಡಿದು ರಾಷ್ಟ್ರಪತಿ ಭವನಕ್ಕೆ ಪ್ರವೇಶಿಸುವುದನ್ನು ತೋರಿಸಲಾಗಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ನೂರಾರು ಪ್ರತಿಭಟನಾಕಾರರು ಶ್ರೀಲಂಕಾದ ರಾಷ್ಟ್ರಪತಿ ಭವನದೊಳಗೆ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು.

ಕೊಲಂಬೋ(ಜು.09): ಗಂಭೀರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಪ್ರತಿಭಟನಾಕಾರರು ದೇಶದ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಅವರ ನಿವಾಸವನ್ನು ಸುತ್ತುವರೆದಿರುವ ವರದಿಗಳು ಬರುತ್ತಿವೆ. ರಾಜಪಕ್ಸೆ ಮನೆಯಿಂದ ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ಸಮಯದ ಹಿಂದೆ, ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಭಾರೀ ಕೋಲಾಹಲದ ನಡುವೆ ರಾಜೀನಾಮೆ ನೀಡಿದಾಗ, ಹಿಂಸಾತ್ಮಕ ಪ್ರತಿಭಟನಾಕಾರರಿಂದ ಪಾರಾಗಲು ತಮ್ಮ ಕುಟುಂಬದೊಂದಿಗೆ ಮನೆಯಿಂದ ಓಡಿಹೋಗಿದ್ದರು. 

ವರದಿಗಳನ್ವಯ ಪ್ರತಿಭಟನಾಕಾರರು ರಾಷ್ಟ್ರಪತಿ ಭವನಕ್ಕೆ ನುಗ್ಗಿ ಅದನ್ನು ಆಕ್ರಮಿಸಿಕೊಂಡಿದ್ದಾರೆ. ಇನ್ನು ಲಭ್ಯವಾದ ವೀಡಿಯೋ ತುಣುಕಿನಲ್ಲಿ ಪ್ರತಿಭಟನಾಕಾರರು ಶ್ರೀಲಂಕಾದ ಧ್ವಜಗಳು ಮತ್ತು ಹೆಲ್ಮೆಟ್‌ಗಳನ್ನು ಹಿಡಿದು ರಾಷ್ಟ್ರಪತಿ ಭವನಕ್ಕೆ ಪ್ರವೇಶಿಸುವುದನ್ನು ತೋರಿಸಲಾಗಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ನೂರಾರು ಪ್ರತಿಭಟನಾಕಾರರು ಶ್ರೀಲಂಕಾದ ರಾಷ್ಟ್ರಪತಿ ಭವನದೊಳಗೆ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು.

ರಾಷ್ಟ್ರಪತಿ ಭವನವನ್ನು ಸುತ್ತುವರಿದ ಉದ್ರಿಕ್ತ ಗುಂಪನ್ನು ತಡೆಯಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಹೀಗಿದ್ದರೂ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. "ಸಾವಿರಾರು ಪ್ರತಿಭಟನಾಕಾರರು ನಿವಾಸದ ಮುಖ್ಯ ದ್ವಾರಕ್ಕೆ ನುಗ್ಗಿ, ಬ್ಯಾರಿಕೇಡ್‌ಗಳನ್ನು ಮುರಿದಿದ್ದಾಋಎ. ಹೀಗಿರುವಾಗ ಪೊಲೀಸರು ಆ ಪ್ರದೇಶದಿಂದ ಹಿಂದೆ ಸರಿಯುತ್ತಿರುವುದು ಕಂಡುಬಂದಿದೆ" ಎಂದು ವರದಿ ತಿಳಿಸಿದೆ. 

26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
52:21ಮುಗಿಯಲ್ವಾ ಗಲ್ಫ್ ಯುದ್ಧ? ಕೈಜೋಡಿಸದ ಮಿತ್ರರು, ಗೊಂದಲದಲ್ಲಿ ಟ್ರಂಪ್! ತೈಲಬೆಲೆಯೇರಿಕೆ, ಮಾರುಕಟ್ಟೆಯಲ್ಲಿ ಕಂಪನ!
21:07ಇರಾನಿಗೆ ಸಹಾಯ ಮಾಡಿತಾ ಟ್ರಂಪ್ ಸಸ್ಪೆನ್ಸ್ ಗೇಮ್? ದೊಡ್ಡಣ್ಣ ಕೈಬಿಟ್ಟರೆ ಏನು ಮಾಡಲಿದೆ ನೆತನ್ಯಾಹು ಪಡೆ?
46:25ಯುದ್ಧ ನಿಲ್ಲಿಸೋ ಒತ್ತಡದಲ್ಲಿ ಅಮೆರಿಕ; ಇರಾನ್ ಯುದ್ಧದಿಂದ ದೊಡ್ಡಣ್ಣನಿಗೆ 35 ಬಿಲಿಯನ್ ಹೊರೆ
20:35Suvarna Focus: ಅಮೆರಿಕದಲ್ಲಿ 'ನೋ ಕಿಂಗ್ಸ್' ಆರ್ಭಟ, ಟ್ರಂಪ್‌ ಯುದ್ಧದಾಹದ ವಿರುದ್ಧ 90 ಲಕ್ಷ ಜನರ ಮಹಾ ಸಮರ
Read more