Feb 5, 2022, 8:42 PM IST
ಬೆಂಗಳೂರು (ಫೆ. 5): ಪ್ರಪಂಚದಲ್ಲಿ ದಿನಕ್ಕೊಂದರಂತೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇರುತ್ತವೆ. ಆದರೆ, ಎಲ್ಲಾ ಆವಿಷ್ಕಾರಗಳು ಜನರ ಗಮನ ಸೆಳೆಯೋದಿಲ್ಲ. ಆದರೆ, ಜಪಾನ್ ನಲ್ಲಿ ವಿಜ್ಞಾನಿಗಳು ಮಾಡಿರುವ ಈ ಸಂಶೋಧನೆಗೆ ನೀವು ಬೆರಗಾಗೋದು ಖಂಡಿತ. ಬಹುಶಃ ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಈ ಆವಿಷ್ಕಾರದಲ್ಲಿ ಕಂಡಿವೆ.
Take A Break: ಸಾಮಾಜಿಕ ಜಾಲತಾಣದಿಂದ ವಿರಾಮ ತೆಗೆದುಕೊಳ್ಳಲು ಇನ್ಸ್ಟಾಗ್ರಾಮ್ ನೋಟಿಫಿಕೆಶನ್!
ಟೋಕಿಯೊದ ಮೆಯಿಜಿ ವಿಶ್ವವಿದ್ಯಾನಿಲಯದ (Meiji University )ಪ್ರೊಫೆಸರ್ ಹೋಮಿ ಮಿಯಾಶಿತಾ (Professor Homei Miyashita) ಅವರು ಪ್ರೋಟೋಟೈಪ್ ಟಿವಿಯನ್ನು ನಿರ್ಮಿಸಿದ್ದಾರೆ. ಆದರೆ, ಇದು ಸಾಮಾನ್ಯ ಟಿವಿ ಅಲ್ಲ. ಟಿವಿ ಮೇಲೆ ಬರುವ ಆಹಾರ ಪದಾರ್ಥಗಳನ್ನು ನಾವು ನೆಕ್ಕುವ ಮೂಲಕ ಅದರ ಸವಿಯನ್ನು ಅನುಭವಿಸಬಹುದಾಗಿದೆಯಂತೆ. ಮಿಯಾಶಿತಾ ಮತ್ತು 30 ವಿದ್ಯಾರ್ಥಿಗಳ ತಂಡವು ಕಳೆದ ವರ್ಷದ “ಟೇಸ್ಟ್ ದಿ ಟಿವಿ” (ಟಿಟಿಟಿವಿ) ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಇನ್ಮುಂದೆ ಫುಡ್ ಆರ್ಡರ್ ಮಾಡುವ ಮುನ್ನ ಟಿವಿಯಲ್ಲಿ ಆ ಫುಡ್ ನ ಟೇಸ್ಟ್ ನೋಡಿಯೇ ಬುಕ್ ಮಾಡ್ಬಹುದು.. ಏನಂತಿರಾ?