ಭಾರತಕ್ಕೆ 5ಜಿ ಲಗ್ಗೆ ಇಟ್ಟಿದೆ.. ಆದ್ರೆ, ಈ 5ಜಿ ಸೇವೆ, ನಮಗೂ ನಿಮಗೂ ಸಿಗೋದು ಯಾವಾಗ.? ಅಸಲಿಗೆ ಈ 5ಜಿಗೂ 4ಜಿಗೂ ಏನ್ ಮಹಾ ವ್ಯತ್ಯಾಸ ಅನ್ನೋ ಬಗ್ಗೆ ನಿಮಗೆ ಗೊಂದಲವಿದ್ಯಾ..? ಈ ವಿಡಿಯೋದಲ್ಲಿದೆ ಫುಲ್ ಡೀಟೇಲ್ಸ್.
ಅಕ್ಟೋಬರ್ 1, 2022 ರಂದು ಪ್ರಧಾನಿ ಮೋದಿ ಭಾರತದಲ್ಲಿ 5ಜಿ ಸೇವೆಗೆ ಚಾಲನೆ ನೀಡಿದರು. ಸದ್ಯ, ದೇಶದ 13 ನಗರಗಳಲ್ಲಿ ಈ ಸೇವೆ ಲಭ್ಯವಾಗುತ್ತಿದ್ದರೂ, ಮುಂದಿನ ರ್ವದ ವೇಳೆಗೆ ಭಾರತದಾದ್ಯಂತ ಈ ಸೇವೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಎದುರು ನೋಡುತ್ತಿದೆ. ಟೆಲಿಕಾಂ ಕಂಪನಿಗಳು ಸಹ 5ಜಿ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಿವೆ. ಇನ್ನು, ದೇಶದಲ್ಲಿ 5ಜಿ ರೋಡ್‌ಮ್ಯಾಪ್ 2017 ರಲ್ಲೇ ಪ್ರಾರಂಭವಾಗಿತ್ತು. ಹಾಗೂ 2019 ರಲ್ಲಿ ಸ್ಪೆಕ್ಟ್ರಂ ಮಾರಾಟವಾಗಿತ್ತು. ಹಾಗೂ, 5ಜಿ ಸೇವೆಯನ್ನು ಮೋದಿ ಯುಗದ ಮತ್ತೊಂದು ಮೈಲಿಗಲ್ಲು ಎಂದೇ ಹೇಳಲಾಗುತ್ತಿದೆ.