ಮಾ.7ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 6ಕ್ಕೆ 'ಮದುಮಗಳು' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಹುಟ್ಟಿದ ಕೂಡಲೇ ಅಮ್ಮನಿಂದ ಬೇರಾದ ಹುಡುಗಿ, ಅಮ್ಮ ಸಾಕಿದ್ದ ಹುಡುಗನ ಪ್ರೇಯಸಿಯಾಗುತ್ತಾಳೆ.
ಮಾ.7ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 6ಕ್ಕೆ ‘ಮದುಮಗಳು’ (Madumagalu) ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಹುಟ್ಟಿದ ಕೂಡಲೇ ಅಮ್ಮನಿಂದ ಬೇರಾದ ಹುಡುಗಿ, ಅಮ್ಮ ಸಾಕಿದ್ದ ಹುಡುಗನ ಪ್ರೇಯಸಿಯಾಗುತ್ತಾಳೆ. ಇವಳು ಮಗಳೆಂಬ ಅರಿವಿಲ್ಲದೇ ಇವಳನ್ನು ದ್ವೇಷಿಸುವ ಅಮ್ಮ ಹಾಗೂ ಸೊಸೆಯಾಗಿ ಮನೆ ಸೇರುವ ಮಗಳ ಕತೆ ಈ ಸೀರಿಯಲ್‌ನದು. ಕಿರುತೆರೆಯ ಜನಪ್ರಿಯ ನಟಿ ಸಿರಿಜಾ, ರಕ್ಷಿತಾ, ಭವೀಶ್ ಮುಖ್ಯಪಾತ್ರಗಳಲ್ಲಿದ್ದಾರೆ. ಆದರ್ಶ್ ಹೆಗ್ಡೆ ನಿರ್ದೇಶಕರು. ಶಂಕರ್ ವೆಂಕಟರಮಣ್ ನಿರ್ಮಾಪಕರು. ಹಿಂದೆ ‘ಕಾವ್ಯಾಂಜಲಿ’ ಎಂಬ ಜನಪ್ರಿಯ ಸೀರಿಯಲ್ ಮಾಡಿದ್ದ ತಂಡವೇ ಈ ಧಾರವಾಹಿಯ ಉಸ್ತುವಾರಿ ವಹಿಸಿಕೊಂಡಿದೆ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies