Jun 8, 2023, 11:44 AM IST
ತುಮಕೂರು: ಇಲ್ಲಿನ ಮಹಾನಗರ ಪಾಲಿಕೆ ವತಿಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದ್ದು ಇದರಲ್ಲಿ ಭಾರಿ ಗೋಲ್ಮಾಲ್ ಮಾಡಿದ ಆರೋಪ ಕೇಳಿ ಬಂದಿದೆ. ಇಲ್ಲಿ ಪುರುಷ ಪೌರ ಕಾರ್ಮಿಕರಿಗೂ ಗರ್ಭಕೋಶ ಹಾಗೂ ಸ್ತನ ಪರೀಕ್ಷೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಆರೋಗ್ಯ ತಪಾಸಣೆ ಹೆಸರಿನಲ್ಲಿ ಅಧಿಕಾರಿಗಳು ಲಕ್ಷ ಲಕ್ಷ ಗುಳುಂ ಮಾಡಿದ್ದಾರೆ ಎಂಬ ಆರೋಪವಿದೆ. ಶ್ರೀದೇವಿ ಚಾರಿಟೇಬಲ್ ಟ್ರಸ್ಟ್ ಈ ಆರೋಗ್ಯ ತಪಾಸಣೆಯ ಟೆಂಡರ್ ಪಡೆದಿತ್ತು. ಇದರಡಿ ಪಾಲಿಕೆಯ 470 ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಆದರೆ ಇಲ್ಲಿ ಸ್ತ್ರೀಯರಿಗೆ ಮಾತ್ರ ನಡೆಸುವಂತಹ ತಪಾಸಣೆಯನ್ನು ಪುರುಷರಿಗೂ ನಡೆಸಲಾಗಿದೆ ಎಂದು ಬಿಲ್ ಮಾಡಲಾಗಿದು, ಅಕ್ರಮದ ವಾಸನೆ ಬಡಿಯುತ್ತಿದೆ. ಈ ಬಗ್ಗೆ ವರದಿ ಇಲ್ಲಿದೆ. ವೀಕ್ಷಿಸಿ.