Transformer Blast: ಬೇಜವಾಬ್ದಾರಿ ಬೆಸ್ಕಾಂ ವಿರುದ್ಧ ಆಕ್ರೋಶ, ಉಲ್ಲಾಳದಲ್ಲಿ ಬಿಗುವಿನ ವಾತಾವರಣ

Transformer Blast: ಬೇಜವಾಬ್ದಾರಿ ಬೆಸ್ಕಾಂ ವಿರುದ್ಧ ಆಕ್ರೋಶ, ಉಲ್ಲಾಳದಲ್ಲಿ ಬಿಗುವಿನ ವಾತಾವರಣ

Published : Mar 24, 2022, 05:13 PM ISTUpdated : Mar 24, 2022, 05:21 PM IST

ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ರಸ್ತೆ ಬದಿಯ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು ಸ್ಕೂಟರ್‌ನಲ್ಲಿ ಹೋಗುತ್ತಿದ್ದವರಿಗೆ ಬೆಂಕಿ ತಾಕಿದ ಪರಿಣಾಮ ತಂದೆ - ಮಗಳು ಮೃತಪಟ್ಟಿರುವ ದಾರುಣ ಘಟನೆ ನಗರದ ಉಲ್ಲಾಳ ಬಳಿಯ ಮಂಗನಹಳ್ಳಿ ಕ್ರಾಸ್‌ ಸಮೀಪ ನಡೆದಿದೆ.
 

ಬೆಂಗಳೂರು (ಮಾ. 24): ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ರಸ್ತೆ ಬದಿಯ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು ಸ್ಕೂಟರ್‌ನಲ್ಲಿ ಹೋಗುತ್ತಿದ್ದವರಿಗೆ ಬೆಂಕಿ ತಾಕಿದ ಪರಿಣಾಮ ತಂದೆ - ಮಗಳು ಮೃತಪಟ್ಟಿರುವ ದಾರುಣ ಘಟನೆ ನಗರದ ಉಲ್ಲಾಳ ಬಳಿಯ ಮಂಗನಹಳ್ಳಿ ಕ್ರಾಸ್‌ ಸಮೀಪ ನಡೆದಿದೆ.

ಮಂಗನಹಳ್ಳಿ ನಿವಾಸಿ ಶಿವರಾಜ್‌(55), ಪುತ್ರಿ ಚೈತನ್ಯ(19) ಮೃತ ದುರ್ದೈವಿ. ನಿಶ್ಚಿತಾರ್ಥಕ್ಕೆ ಕಲ್ಯಾಣ ಮಂಟಪ ಬುಕ್‌ ಮಾಡಿ ಮಗಳ ಜತೆ ಶಿವರಾಜ್‌ ಮನೆಗೆ ಮರಳುವಾಗ ಈ ಘಟನೆ ನಡೆದಿದೆ. ಟ್ರಾನ್ಸ್‌ಫಾರ್ಮರ್ ಕೆಟ್ಟು ಹೋಗಿರುವ ಬಗ್ಗೆ ಸ್ಥಳೀಯರು ಈ ಮೊದಲೇ ಬೆಸ್ಕಾಂಗೆ ದೂರು ನೀಡಿದ್ದರು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ನಿರ್ಲಕ್ಷ್ಯಕ್ಕೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಮೃತದೇಹ ಹೊತ್ತು ತಂದ ಆಂಬುಲೆನ್ಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದಾರೆ. ಸಚಿವ ಸೋಮಶೇಖರ್ ಸಾರ್ವಜನಿಕರ ಮನವೊಲಿಸಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರವನ್ನೂ ಘೋಷಿಸಿದ್ದಾರೆ. 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more