ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಬಿ.ಎಸ್. ರಾಜು ಅಧಿಕಾರ ಸ್ವೀಕಾರ, ಹುಟ್ಟೂರು ಬಗ್ಗವಳ್ಳಿಯಲ್ಲಿ ಸಂಭ್ರಮ

ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಬಿ.ಎಸ್. ರಾಜು ಅಧಿಕಾರ ಸ್ವೀಕಾರ, ಹುಟ್ಟೂರು ಬಗ್ಗವಳ್ಳಿಯಲ್ಲಿ ಸಂಭ್ರಮ

Published : May 03, 2022, 11:32 AM ISTUpdated : May 03, 2022, 11:36 AM IST

ನೂತನ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿರುವ ಬಿ ಎಸ್ ರಾಜು ಮೂಲತಃ ಚಿಕ್ಕಮಗಳೂರು (Chikkamagaluru) ಜಿಲ್ಲೆಯಯ ಬಗ್ಗವಳ್ಳಿಯವರು. ಇವರ ಹುಟ್ಟೂರಿನಲ್ಲಿ ಸಡಗರ ಇದೀಗ ಮನೆಮಾಡಿದೆ. ಮೇ 1 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಸೇನಾ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ (Lt Manoj Pnde) ಅವರು ನೂತನ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ ಹಿನ್ನೆಲೆ ಅವರಿಂದ ತೆರವಾದ ಸ್ಥಾನಕ್ಕೆ ರಾಜು ಅವರನ್ನು ನೇಮಕ ಮಾಡಲಾಗಿದೆ.  

ಮೂಲತಃ ಚಿಕ್ಕಮಗಳೂರು (Chikkamagaluru) ಜಿಲ್ಲೆಯಯವರು ಆಗಿರುವ ಇವರ ಹುಟ್ಟೂರಿನಲ್ಲಿ ಸಂಭ್ರಮ ಸಡಗರ ಇದೀಗ ಮನೆಮಾಡಿದೆ. ಮೇ 1 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ತವರು ಜಿಲ್ಲೆ ಚಿಕ್ಕಮಗಳೂರು ಜಿಲ್ಲೆಯ ಹುಟ್ಟೂರಿನಲ್ಲಿ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದರು. ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಬಗ್ಗವಳ್ಳಿ ಗ್ರಾಮದವರು. ಲೆಫ್ಟಿನೆಂಟ್ ಜನರಲ್ ರಾಜು ಶಾಲಾ ಶಿಕ್ಷಕರಾಗಿದ್ದ ಬಿ.ಎಸ್ ಸೋಮಶೇಖರ್ , ವಿಮಲಾ ದಂಪತಿ ಪುತ್ರರಾಗಿ ಬಗ್ಗವಳ್ಳಿ ಗ್ರಾಮದದಲ್ಲಿ 1963ರ ಅಕ್ಟೋಬರ್ 19ರಂದು ಜನಿಸಿದರು. 

ಐವರು ಮಕ್ಕಳಲ್ಲಿ ಮೂರನೇ ಮಗನೇ ಬಿ ಎಸ್ ರಾಜು. ದಾವಣಗೆರೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿರುವ ಇವರು, ಬಿಜಾಪುರದ ಸೈನಿಕ ಶಾಲೆ ಮತ್ತು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಪಡೆದು ಸೇನಾ ಜೀವನ ಆರಂಭಿಸಿದರು.  ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್, ವೆಲ್ಲಿಂಗ್ಟನ್ ಮತ್ತು ಯುನೈಟೆಡ್ ಕಿಂಗ್‌ಡಂನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನಲ್ಲಿ ಪದವಿ ಪಡೆದಿದ್ದಾರೆ. ಕ್ಯಾಲಿಫೋರ್ನಿಯಾದ ಮಾಂಟೆರೆಯಲ್ಲಿ ನೌಕಾಪಡೆಯ ಸ್ನಾತಕೋತ್ತರ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಭಯೋತ್ಪಾದನೆ ನಿಗ್ರಹದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ.

1984ರಲ್ಲಿ ಜಾಟ್ ರೆಜಿಮೆಂಟ್‌ನ 11ನೇ ಬೆಟಾಲಿಯನ್‌ಗೆ ನಿಯೋಜಿನೆಗೊಂಡು ಸೇವೆ ಸಲ್ಲಿಸಿದ್ದಾರೆ. ನಂತರ ಜಾಟ್ ರೆಜಿಮೆಂಟ್‌ನ 15ನೇ ಬೆಟಾಲಿಯನ್‌ಗೆ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಐದು ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರಿಂದ ಆ ಭಾಗದ ಬಗ್ಗೆ ಸಾಕಷ್ಟು ಅನುಭವ ಹೊಂದಿದ್ದಾರೆ. ಚಿನಾರ್ ಕಾರ್ಪ್ಸ್‌ನ 49ನೇ ಕಮಾಂಡರ್ ಆಗಿ 2021ರ ಮಾರ್ಚ್ 17ರವರೆಗೆ ಸೇವೆ ಸಲ್ಲಿಸಿದ್ದರು. 15ನೇ ಚಿನಾರ್ ಕೋರ್‌ನ ಜನರಲ್ ಕಮಾಂಡಿಂಗ್ ಅಫೀಸರ್ ಆಗಿ ಸಹ ಸೇವೆ ಸಲ್ಲಿಸಿದ್ದಾರೆ.

ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಬಿ.ಎಸ್. ರಾಜು ನೇಮಕ ಹಿನ್ನೆಲೆ ಬಿ.ಎಸ್ ರಾಜುರವರ ಹುಟ್ಟೂರು ಬಗ್ಗವಳ್ಳಿಯಲ್ಲಿ ಸಂಭ್ರಮ ಮನೆಮಾಡಿದೆ. ಸೇನೆಯ ಎರಡನೇ ಅತ್ಯುನ್ನತ  ಸ್ಥಾನಕ್ಕೇರಿದ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಸಂತಸ ಎಲ್ಲೆ ಮೀರಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬ್ಯಾನರ್ ಕಟ್ಟಿ ಶುಭಾಶಯವನ್ನು ಕೋರಿದ್ದಾರೆ. ಬಿ.ಎಸ್ ರಾಜುರವರ ಕುಟುಂಬಸ್ಥರು, ಗ್ರಾಮಸ್ಥರಿಂದ  ಸಿಹಿ ಹಂಚಿ, ದೇಶಕ್ಕೆ, ಬಿ.ಎಸ್ ರಾಜು ಅವರಿಗೆ ಜಯಘೋಷಣೆಗಳನ್ನು ಕೂಗಿದರು. ದೇಶಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂದು ಗ್ರಾಮಸ್ಥರು ಶುಭಾಶಯವನ್ನು ಕೋರಿದ್ದಾರೆ. 

ಹತ್ತು ಹಲವು ಪ್ರಶಸ್ತಿಗಳು ಬಿ ಎಸ್ ರಾಜು ಅವರಿಗೆ ಲಭಿಸಿದ್ದು, ಅದರಲ್ಲಿ ಪ್ರಮುಖವಾಗಿ ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ, ಜನರಲ್ ಆಫೀಸರ್, ಕಮಾಂಡಿಂಗ್-ಇನ್-ಚೀಫ್, ಸೌತ್ ವೆಸ್ಟರ್ನ್ ಕಮಾಂಡ್ ಕಮೆಂಡೇಶನ್ ಕಾರ್ಡ್ನಂತಹ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಒಟ್ಟಾರೆ ಸೇನೆಯ ಎರಡನೇ ಅತ್ಯುನ್ನತ ಸ್ಥಾನಕ್ಕೆ ಕನ್ನಡಿಗ ಬಿ ಎಸ್ ರಾಜು  ನೇಮಕವಾಗಿರುವುದು ಹೆಮ್ಮೆಯ ವಿಚಾರವಾಗಿದೆ.

 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more