ಜಕ್ಕೂರು ಫ್ಲೈಯಿಂಗ್‌ ಶಾಲೆಗಾಗಿ ಮೈಸೂರು ಮಹರಾಜರು ಕೊಟ್ಟ ಜಾಗವನ್ನು ಖಾಸಗಿ ಕಂಪನಿಗೆ?

ಜಕ್ಕೂರು ಫ್ಲೈಯಿಂಗ್‌ ಶಾಲೆಗಾಗಿ ಮೈಸೂರು ಮಹರಾಜರು ಕೊಟ್ಟ ಜಾಗವನ್ನು ಖಾಸಗಿ ಕಂಪನಿಗೆ?

Published : Sep 17, 2022, 09:45 PM IST

ಜಕ್ಕೂರು ಪ್ಲೈಯಿಂಗ್ ಶಾಲೆಗಾಗಿ ಮೈಸೂರು ಮಹರಾಜರು ಕೊಟ್ಟ   ಜಾಗವನ್ನು ಖಾಸಗಿ ಕಂಪನಿಗೆ ನೀಡಲು ಕ್ರೀಡಾ ಇಲಾಖೆ ಸಜ್ಜು..!? 1500 ಕೋಟಿ ಮೌಲ್ಯದ 75 ಎಕರೆ ಜಾಗವನ್ನು  ಖಾಸಗಿಯವರಿಗೆ ನೀಡುವ ಹುನ್ನಾರದ ಬಗ್ಗೆ ಆರೋಪ..! ಈ ವಿಚಾರದಲ್ಲಿ ತನಿಖೆ ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯಿಂದ ರಾಜ್ಯಪಾಲ ಹಾಗೂ ಲೋಕಾಯುಕ್ತಕ್ಕೆ ದೂರು.!
 

ಬೆಂಗಳೂರು (ಸೆ. 17): ಮೈಸೂರಿನ ಮಹಾರಾಜರು ಜಕ್ಕೂರಿನಲ್ಲಿ ಫ್ಲೈಯಿಂಗ್‌ ಶಾಲೆ ನಿರ್ಮಾಣ ಮಾಡುವ ಕುರಿತಾಗಿ ನೀಡಿದ್ದ ಜಾಗವನ್ನು ಖಾಸಗಿಯವರಿಗೆ ಕ್ರೀಡಾ ಇಲಾಖೆ ನೀಡಲು ಸಜ್ಜಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. 1500 ಕೋಟಿ ರೂಪಾಯಿ ಮೌಲ್ಯದ 75 ಎಕರೆ ಜಾಗ ಇದಾಗಿದ್ದು, ಈ ಕುರಿತಾಗಿ ಅಮೂಲಾಗ್ರ ತನಿಖೆ ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ, ರಾಜ್ಯಪಾವ ಥಾವರ್‌ ಚಂದ್‌ ಗೆಹ್ಲೋಟ್‌ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದೆ.

ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡ, ಜಮೀನನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಈ ಪ್ರಸ್ತಾವನೆಯನ್ನು ಸಾರ್ವಜನಿಕರ ಮುಂದೆ ಸಂಪೂರ್ಣವಾಗಿ ತೆರೆದಿಡಲಾಗುವುದು. ಅವರ ಅಭಿಪ್ರಾಯ ಸಿಕ್ಕ ಬಳಿಕ ಮುಂದುವರಿಯಲಾಗುವುದು ಎಂದು ತಿಳಿಸಿದ್ದಾರೆ.

ಜಕ್ಕೂರು ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆಗೆ ಚಾಲನೆ

ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಅಲ್ಲಿ ಜಾಗ ಮೀಸಲಿಡಲಾಗಿದೆ ಎನ್ನುವುದು ಸುಳ್ಳು ಸುದ್ದಿ . ಮೈಸೂರಿನ ಮಹಾರಾಜರು ನೀಡಿದ್ದ ಜಾಗವನ್ನು ಒಂದಿಂಚು ಕೂಡ ಬೇರೆಯವರಿಗೆ ನೀಡುವುದಿಲ್ಲ ಎಂದು ಈ ವೇಳೆ ಹೇಳಿದ್ದಾರೆ.

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!