Dec 16, 2021, 10:29 AM IST
ಬೆಂಗಳೂರು (ಡಿ. 16): ಮತಾಂತರ ನಿಷೇಧ ಕಾಯ್ದೆಯನ್ನು (Anti Conversion Bill) ಮುಂಬರುವ ಬುಧವಾರ ಇಲ್ಲವೇ ಗುರುವಾರ (ಡಿ.22 ಅಥವಾ 23) ಮಂಡಿಸುವ ಕುರಿತು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದ್ದು, ಪ್ರತಿಪಕ್ಷಗಳ ದಾಳಿಯನ್ನು ಸಮರ್ಥ ಎದುರಿಸಲು ಎಲ್ಲರೂ ಸನ್ನದ್ಧರಾಗುವಂತೆ ಸಚಿವರು, ಶಾಸಕರಿಗೆ ಸಂದೇಶ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಲವ್ ಜಿಹಾದ್‌ಗೆ ಪ್ರತ್ಯೇಕ ಬಿಲ್ ಮಂಡನೆಯಿಲ್ಲ, ಮತಾಂತರ ನಿಷೇಧ ಮಸೂದೆಯಲ್ಲೇ ಲವ್ ಜಿಹಾದ್‌ನ್ನು (Love Jihad) ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಎರಡು ಅಂಶಗಳನ್ನು ಸೇರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.