Aug 6, 2021, 12:33 PM IST
ಬೆಂಗಳೂರು (ಆ. 06): ಐಎಂಎ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪ ಎದುರಿಸುತ್ತಿರುವ ಶಾಸಕ ಮನೆ ಮೇಲೆ ದಾಳಿ ನಡೆಸಿದ ವೇಳೆ, ಮನೆಯೊಳಗಿನ ವೈಭವ ನೋಡಿ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
90 ಕೋಟಿಯ ಜಾಗ, 9 ಕೋಟಿಗೆ ಮಾರಾಟ ಮಾಡಿ ಇಡಿ ಸುಳಿಯಲ್ಲಿ ತಗಲಾಕ್ಕೊಂಡ್ರಾ ಜಮೀರ್ ಅಹ್ಮದ್..?
10 ಗುಂಟೆ ಜಾಗದಲ್ಲಿ ಜಮೀರ್ ಮನೆ ಕಟ್ಟಿದ್ದಾರೆ. ಮನೆಗೆ ಬಳಸಿರುವ ಇಟಾಲಿಯನ್ ಮಾರ್ಬಲ್ಸ್ ಮೌಲ್ಯ ಕನಿಷ್ಠ 50 ಕೋಟಿ ಎಂದು ಅಂದಾಜಿಸಲಾಗಿದೆ. ಫರ್ನಿಚರ್ಗಳ ಮೌಲ್ಯ 4-5 ಕೋಟಿ ರೂ ದಾಟಬಹುದು. ಇನ್ನು ಕಿಟಕಿ ಬಾಗಿಲುಗಳನ್ನು ವಿದೇಶದಿಂದ ತರಿಸಲಾಗಿದ್ದು, ಅವುಗಳ ಮೌಲ್ಯ ಕೂಡಾ ಕೋಟ್ಯಾಂತರ ರೂ ದಾಟುತ್ತದೆ. ಇನ್ನು ಮನೆ ಸದಸ್ಯರ ಬಳಕೆಗೆ ಐಷಾರಾಮಿ ಕಾರುಗಳು, ಕೆಜಿಗಟ್ಟಲೇ ಚಿನ್ನಾಭರಣಗಳಿವೆ. ಇವುಗಳನ್ನು ನೋಡಿ ಅಧಿಕಾರಿಗಳು ಶಾಕ್ ಆಗಿದ್ರಲ್ಲಿ ಆಶ್ಚರ್ಯವೇನೂ ಇಲ್ಲ ಬಿಡಿ!