BBMP ಕಂಟೈನ್ಮೆಂಟ್ ವಾರ್ಡ್‌ಗಳ ಸಂಖ್ಯೆ 25 ಕ್ಕೆ ಏರಿಕೆ

May 2, 2020, 12:02 PM IST

ಬೆಂಗಳೂರು (ಮೇ. 02): ಬಿಬಿಎಂಪಿ ಕಂಟೈನ್ಮೆಂಟ್‌ ವಾರ್ಡ್‌ಗಳ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ. ದೀಪಾಂಜಲಿ ನಗರ,  ಬಿಳೇಕಳ್ಳಹಳ್ಳಿ ಕಂಟೈನ್ಮೆಂಟ್ ವ್ಯಾಪ್ತಿಗೆ ಬಂದಿದೆ. ಈ ಪ್ರದೇಶದಲ್ಲಿ ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ತೀವ್ರ ನಿಗಾ ವಹಿಸಲಾಗಿದೆ. ಕಂಟೈನ್ಮೆಂಟ್ ವ್ಯಾಪ್ತಿಗೆ ಒಳಪಟ್ಟಿರುವ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳನ್ನು ತೆರೆಯುವಂತಿಲ್ಲ. ಮೆಡಿಕಲ್ ಎಮರ್ಜೆನ್ಸಿ ಇದ್ದರೆ ಅನುಮತಿ ಪಡೆದು ಹೋಗಬಹುದಾಗಿದೆ. ಯಾವ್ಯಾವ ಪ್ರದೇಶ ಕಂಟೈನ್ಮೆಂಟ್ ವ್ಯಾಪ್ತಿಗೆ ಬರುತ್ತದೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

ಕೊರೋನಾ ಸೋಂಕಿತ ಬಾಲಕನನ್ನ ಹಿಡಿದಿಟ್ಟುಕೊಳ್ಳುವುದೇ ವೈದ್ಯರಿಗೆ ಸವಾಲಿನ ಕೆಲಸ..!