Mar 26, 2021, 2:04 PM IST
ಬೆಂಗಳೂರು (ಮಾ. 26): ಸೀಡಿ ಲೇಡಿ ದೂರಿನಲ್ಲಿ ಏನಿದೆ ಎಂದು ನೋಡುವುದಾದರೆ, 'ಕೆಲಸ ಕೊಡಿಸುವುದಾಗಿ ನನ್ನನ್ನು ನಂಬಿಸಿದ್ದರು. ಬೆಂಗಳೂರಿನ ಅಪಾರ್ಟ್ಮೆಂಟ್ಗೆ 4 ಬಾರಿ ಕರೆಸಿಕೊಂಡಿದ್ದರು. ಕೆಲಸದ ಆಮೀಷವೊಡ್ಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡ್ರು. ದೆಹಲಿಯಿಂದ ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದರು. ಕೆಲಸದ ಬಗ್ಗೆ ಕೇಳಿದ್ರೆ ನಿನ್ನಂಥವಳಿಗೆ ಕೆಲಸ ಕೊಡಿಸಲು ಆಗಲ್ಲ ಎನ್ನುತ್ತಿದ್ದರು' ಎಂದು ದೂರಿನಲ್ಲಿ ಬರೆಯಲಾಗಿದೆ. ಇದು ಜಾರಕಿಹೊಳಿಗೆ ಮುಳುವಾಗುವ ಸಾಧ್ಯತೆ ಇದೆ.