ರಾಜ್ಯ ವಿಧಾನಸಭಾ ಚುನಾವಣೆಗೆ (Assembly Election) ಇನ್ನು ಉಳಿದಿರೋದು ಕೇವಲ ಹನ್ನೊಂದು ತಿಂಗಳು. ಈ 11 ತಿಂಗಳಲ್ಲಿ ಯಾರು ಯಾವ ಅಸ್ತ್ರ ಹೂಡ್ತಾರೋ, ಯಾರ ಬತ್ತಳಿಕೆಯಿಂದ ಅದ್ಯಾವ ಶಸ್ತ್ರ ಸಿಡಿಯುತ್ತೋ ಅಂತ ಜನ ಕುತೂಹಲದಿಂದ ಕಾಯ್ತಾ ಇದ್ದಾರೆ. ಆಡಳಿತಾರೂಢ ಬಿಜೆಪಿ ಈಗಾಗ್ಲೇ ಧರ್ಮಾಸ್ತ್ರ ಪ್ರಯೋಗಿಸಿ ಒಂದು ಸುತ್ತಿನ ತಾಲೀಮು ಮುಗಿಸಿ ಬಿಟ್ಟಿದೆ.

ರಾಜ್ಯ ಬಿಜೆಪಿ ಪಾಳೆಯದಲ್ಲಿ ಸಂಚಲನ ಸೃಷ್ಟಿಸಿದ, ಹಲವರ ಎದೆಯಲ್ಲಿ ನಡುಕ ಹುಟ್ಟಿಸಿರೋ ಬಿ.ಎಲ್ ಸಂತೋಷ್ (BL Santosh) ಅವರ ಸಿಡಿಗುಂಡಿನಂಥ ಮಾತು ಒಂದು ಕಡೆಯಾದ್ರೆ, ಇದ್ರ ಬೆನ್ನಲ್ಲೇ ರಾಜ್ಯಕ್ಕೆ ಬಂದಿದ್ದಾರೆ ಕೇಸರಿ ಚಾಣಕ್ಯ ಅಮಿತ್ ಶಾ. ಸದ್ಯದ ಮಟ್ಟಿಗೆ ಬಿಜೆಪಿಯಲ್ಲಿ ಡಿಸಿಷನ್ ಮೇಕರ್ ಅಂದ್ರೆ ಅದು ಕೇಂದ್ರ ಗೃಹ ಸಚಿವ ಅಮಿತ್ ಶಾ. ರಾಷ್ಟ್ರೀಯ ಬಿಜೆಪಿಯಲ್ಲಿ ನಂ.2 ಆಗಿರೋ ಅಮಿತ್ ಶಾ, ಮಂಗಳವಾರ ರಾಜ್ಯ ಬಿಜೆಪಿ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. 2023ರ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ನೀಲ ನಕ್ಷೆ ರೆಡಿ ಮಾಡಲಿದ್ದಾರೆ. ಕರ್ನಾಟಕದ ಕೇಸರಿ ಕೋಟೆಯನ್ನು ಭದ್ರ ಪಡಿಸಿಕೊಳ್ಳಲು ಬಿಜೆಪಿ ಬತ್ತಳಿಕೆಯಲ್ಲಿ ರೆಡಿಯಾಗಿರೋ ಆ ಅಸ್ತ್ರ ಯಾವುದು..?