Jan 10, 2022, 11:24 AM IST
ಬೆಂಗಳೂರು (ಜ. 10): ಬೊಮ್ಮಾಯಿ (CM Bommai) ಸರ್ಕಾರಕ್ಕೆ 5 ತಿಂಗಳು ತುಂಬಿದ ಸಂಭ್ರಮ. 5 ತಿಂಗಳು ಕಳೆದರೂ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರೇ ಇಲ್ಲ. ಪಕ್ಷದ ವೇದಿಕೆಯಲ್ಲೂ ಈ ಬಗ್ಗೆ ಚರ್ಚೆಯಾಗಿದ್ದರೂ ಸಿಎಂ ಮನಸ್ಸು ಮಾಡುತ್ತಿಲ್ಲ. ಜಿಲ್ಲೆಗಳ ಅಭಿವೃದ್ಧಿ ಕುರಿತು ಕೆಡಿಪಿ ಸಭೆಯನ್ನೂ ಮಾಡಲಾಗುತ್ತಿಲ್ಲ. ಉಸ್ತುವಾರಿ ಕೊಡದೇ, ಸಚಿವರನ್ನೂ ನಿರಾಸಕ್ತಿ ಮೂಡಿದೆ.