PSI Recruitment Scam  ಕಲಬುರಗಿಯ ಮತ್ತೊಂದು ಸೆಂಟರ್‌ನಲ್ಲೂ ಅಕ್ರಮ!

PSI Recruitment Scam ಕಲಬುರಗಿಯ ಮತ್ತೊಂದು ಸೆಂಟರ್‌ನಲ್ಲೂ ಅಕ್ರಮ!

Published : May 03, 2022, 11:00 AM IST

ಕಲಬುರಗಿಯ ಇನ್ನೊಂದು ಪ್ರತಿಷ್ಠಿತ ಎಂ.ಎಸ್.ಐ ಕಾಲೇಜು ಪರೀಕ್ಷಾ ಕೇಂದ್ರದಲ್ಲೂ ಪಿ.ಎಸ್.ಐ ಪರೀಕ್ಷೆಯ ಅಕ್ರಮ ನಡೆದಿದೆ. ಈ ಬಗ್ಗೆ ನಡೆಯುತ್ತಿರುವ ಸಿಐಡಿ  ಇಬ್ಬರನ್ನು ಬಂಧಿಸಿದ್ದಾರೆ. 

ಕಲಬುರಗಿ(ಮೇ.3): ಪಿಎಸ್ಐ ನೇಮಕಾತಿ ಅಕ್ರಮ (PSI Recruitment Scam) ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ (CID) ಬಗೆದಷ್ಟು ಹೊಸ ಹೊಸ ಹಗರಣಗಳು ಹೊರಬರುತ್ತಲೇ ಇವೆ. ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರ ಮಾತ್ರವಲ್ಲದೇ ಇನ್ನೊಂದು ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮ ಸಿಐಡಿ ತನಿಖೆ ವೇಳೆ ಅನಾವರಣಗೊಂಡಿದೆ. ಇದರಿಂದಾಗಿ ಪ್ರಕರಣದ ತನಿಖೆಗೆ ಹೊಸ ಆಯಾಮ ಸಿಕ್ಕಂತಾಗಿದೆ. 

SAI RECRUITMENT 2022: ಕ್ರೀಡಾ ಪ್ರಾಧಿಕಾರದಿಂದ ಯುವ ವೃತ್ತಿಪರರ ನೇಮಕಾತಿ

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಲಬುರಗಿ (Kalaburagi) ಜಿಲ್ಲೆಯೊಂದರಲ್ಲಿ ನಿನ್ನೆವರೆಗೆ 26 ಜನ ಸಿಕ್ಕು ಬಿದ್ದಿದ್ದು ಸಿಐಡಿಯಿಂದ ಬಂಧನಕ್ಕೆ ಒಳಗಾಗಿದ್ದಾರೆ. ಎಲ್ಲಾ ಇಪ್ಪತ್ತಾರು ಜನ ಆರೋಪಿಗಳು (Accused) ಬಂಧಿತರಾಗಿರುವುದು (Arrest) ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮದ ಪಾಲುದಾರಿಕೆಯ ಕಾರಣಕ್ಕಾಗಿ.‌ ಇದೀಗ ಕಲಬುರಗಿಯ ಇನ್ನೊಂದು ಪ್ರತಿಷ್ಠಿತ ಎಂ.ಎಸ್.ಐ ಕಾಲೇಜು ಪರೀಕ್ಷಾ (MSI college center) ಕೇಂದ್ರದಲ್ಲೂ ಪಿ.ಎಸ್.ಐ ಪರೀಕ್ಷೆಯ ಅಕ್ರಮ ನಡೆದಿದೆ. ಈ ಬಗ್ಗೆ ನಡೆಯುತ್ತಿರುವ ಸಿಐಡಿ ತನಿಖೆಯಲ್ಲಿ (Investigation) ಈ ಮಹತ್ವದ ಮಾಹಿತಿ ಬಯಲಾಗಿದೆ. ಈ ಸುಳಿವು ಸಿಕ್ಕಿದ್ದೇ ತಡ ಸಿಐಡಿ ಆ ಬಗೆಗಿನ ತನಿಖೆ ತೀವ್ರಗೊಳಿಸಿ ಇಬ್ಬರನ್ನು ಬಂಧಿಸಿದ್ದಾರೆ. 

04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
04:38ಹತ್ತಾರು ಕೃಷಿ ಅಧಿಕಾರಿಗಳ ಅಮಾನತು ಮಾಡಿದ ಸಚಿವ ಕೆ.ಎನ್. ರಾಜಣ್ಣ: ಕಾರಣ ಕೇಳಿದ್ರೆ ನೀವೂ ಬೆರಗಾಗ್ತೀರ!
08:31ಸರ್ಕಾರಿ ಕಚೇರಿಗಳಲ್ಲಿ ಕೆಲಸಕ್ಕೆ ಅಧಿಕಾರಿಗಳೇ ಇಲ್ಲ: 2.58 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ, ಭರ್ತಿ ಯಾವಾಗ ?
02:57ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಗೊಂದಲ ಸೃಷ್ಟಿಸಿದ್ದಾರೆ: ಡಿ.ಕೆ.ಶಿವಕುಮಾರ್
02:57ಇದು ನನ್ನ ಕೊನೆಯ ಅಧಿವೇಶನ, ಮತ್ತೆ ಬರಲ್ಲ: ಬಿಎಸ್‌ವೈ ಭಾವುಕ
01:16Rojgar Mela: ಆಯ್ಕೆಯಾದ ಅಭ್ಯರ್ಥಿಗಳಿಗೆ ಸಚಿವ ರಾಜೀವ್ ಚಂದ್ರಶೇಖರ್ ನೇಮಕಾತಿ ಪತ್ರ ವಿತರಣೆ
01:51ರಾಜ್ಯದ ಯುವಕರಿಗೆ ರಾಜ್ಯೋತ್ಸವ ಗಿಫ್ಟ್ ; ಖಾಲಿ ಇರೋ 2.5 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ
104:19News Hour Special With CT Ravi: ಹಿಂದೂ ಕಾರ್ಯಕರ್ತರ ರಕ್ಷಿಸುವಲ್ಲಿ ಬಿಜೆಪಿ ವಿಫಲವಾಗಿದೆ?
22:29Sniffer Dog Tunga: ರೇಪ್ & ಮರ್ಡರ್ ಕೇಸ್ ಬೇಧಿಸಿದ ಲೇಡಿ ಸಿಂಗಂ: ಚಾರ್ಲಿ ಸಿನಿಮಾದ ಚಾರ್ಲಿಯನ್ನೇ ಮೀರಿಸುತ್ತಾಳೆ ತುಂಗಾ!
52:19ದಲಿತರು, ಹಿಂದುಳಿದವರನ್ನು ದೂರವಿಟ್ಟಿದೆಯಾ RSS.? ಡಾ. ಜಿಬಿ ಹರೀಶ್
Read more