vuukle one pixel image

ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?

Govindaraj S  | Updated: Mar 20, 2025, 4:56 PM IST

ಇವತ್ತಿನ ಫೋಕಸ್ ಸ್ಟೋರಿ ಶುರುಮಾಡೋ ಮುಂಚೆ, ಮೊದ್ಲು ಈ ಸ್ಟೋರಿನಾ ಇಮ್ಯಾಜಿನ್ ಮಾಡ್ಕೊಳಿ.. ನಾವೊಂದು ಟೂರು ಟ್ರಿಪ್ಪು ಅಂತ ಎಲ್ಲಿಗೋ ಪ್ಲಾನ್ ಮಾಡ್ಕೊಳ್ತೀವಿ.. ಒಂದ್ ಮೂರ್ ದಿನಕ್ ಹೋಗ್ಬರದು ಅಂತ ರೆಡಿ ಆಗ್ತೀವಿ.. ಬಟ್ ಗೊತ್ತು ಗುರಿ ಇಲ್ಲದ್ ಜಾಗದಲ್ಲಿ, ವಾರಗಟ್ಟಲೆ ಇರೋ ಹಾಗಾದ್ರೆ ನಮ್ ಪರಿಸ್ಥಿತಿ ಏನು.. ಒಂದ್ ವೇಳೆ, ಅಲ್ಲಿಂದ ವಾಪಾಸ್ ಬರ್ತಿವೋ ಇಲ್ವೋ ಅನ್ನೋ ಡೌಟ್ ಶುರುವಾದ್ರೆ, ನಮ್ ಫಜೀತಿ ಏನಾಗ್ಬೋದು? ಇದನ್ ಕಲ್ಪನೆ ಮಾಡ್ಕೊಂಡ್ರೆನೇ ಭಯ ಆಗುತ್ತೆ ಅಲ್ವಾ? ಬಟ್, ಸುನೀತಾ ವಿಲಿಯಮ್ಸ್, ಅಂಥಾ ಅಂತರಿಕ್ಷದಲ್ಲಿ ಬರೋಬ್ಬರಿ 9 ತಿಂಗಳಿದ್ರು.. ಈಗ ಮರಳಿ ಬಂದಿದಾರೆ.. ಅವರಿಗೆ ಹಾರ್ಟ್ಲಿ ವೆಲ್​ಕಮ್..

ಆ 45 ದಿನಗಳಲ್ಲಿ ಏನಾಗಲಿದೆ? ಸುನೀತಾ ಬದುಕನ್ನೇ ಬದಲಿಸೋ ಆ 45 ದಿನಗಳ ರಹಸ್ಯವೇನು? ಅಗ್ನಿಪರೀಕ್ಷೆ ನಿಜಾರ್ಥವೇನು? ಅಂತರಿಕ್ಷದಲ್ಲಿ ಜೀವನ ಮಾಡೋದು ಅಂದ್ರೆ, ಸವಾಲಿನ ಚಕ್ರವ್ಯೂಹದಲ್ಲಿ ಸೆಣೆಸಾಡೋದು.. ಆ ಹೋರಾಟವನ್ನೇ ಗೆದ್ದುಬಂದಿರೋ ಸುನೀತಾ, ಈ ಅಗ್ನಿಪರೀಕ್ಷೆ ಗೆಲ್ಲೋದು ಯಾವ ಲೆಕ್ಕ. ಅಂತೂ ಆ ನವಮಾಸದ ವನವಾಸ ಮುಗಿದಿದೆ.,. ಇಲ್ಲಿಂದ ಮುಂದೇನಾಗಲಿದೆ ಅನ್ನೋ ಕುತೂಹಲವಂತು ಇದೆ. ಸುನೀತಾ ವಿಲಿಯಮ್ಸ್ ಅಂತರಿಕ್ಷದಿಂದ ಭೂಮಿಗೆ ಬಂದಿದ್ದಾರೆ.. ಇನ್ನೇನಿದ್ರೂ ಅಮೆರಿಕಾದಿಂದ ಭಾರತಕ್ಕೆ ಬರೋದಷ್ಟೇ ಬಾಕಿ. ಒಟ್ಟಾರೆ,  ಸಾಧನೆ ಮೆರೆದ ಸುನೀತಾ ವಿಲಿಯಮ್ಸ್ ಹೆಸರು ಶಾಶ್ವತವಾಗಲಿ.