'ಯಶ್19'ಗಾಗಿ ರಾಕಿ ಭಾಯ್ ತಾಲೀಮು: ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ KGF ಕಿಂಗ್!

'ಯಶ್19'ಗಾಗಿ ರಾಕಿ ಭಾಯ್ ತಾಲೀಮು: ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ KGF ಕಿಂಗ್!

Published : Oct 19, 2023, 09:52 AM IST

ಯಶ್19 ಸಿದ್ಧತೆಗಳು ಜೋರಾಗಿವೆ. ಯಶ್ ಹೊಸ ಸಿನಿಮಾ ಅನೌನ್ಸ್ ಯಾವಾಗ ಅಂತ ಉತ್ತರ ಸಿಕ್ಕಲ್ಲ. ಆದ್ರೆ ಯಶ್19ಗಾಗಿ ತೆರೆ ಮರೆಯ ಸಿದ್ಧತೆಗಳಂತೂ ನಡೀತಿವೆ. 
 

ಇದು ರಾಕಿಂಗ್ ಸ್ಟಾರ್ ಯಶ್ ಜಿಮ್‌ನಲ್ಲಿ ಬೆವರು ಹರಿಸುತ್ತಿರೋ ಲೆಟೆಸ್ಟ್ ವಿಡಿಯೋ.. ರಾಕಿ ತನ್ನ ಪರ್ಸನಲ್ ಟ್ರೈನರ್ ಪಾನಿಪುರಿ ಕಿಟ್ಟಿಯ ಜಿಮ್‌ನಲ್ಲಿ ತನ್ನ ಮುಂದಿನ ಸಿನಿಮಾಗಾಗಿ ಕಟ್ಟುಮಸ್ತು ದೇಹವನ್ನ ಹುರಿಗೊಳಿಸುತ್ತಿದ್ದಾರೆ. ರಾಕಿ ಫಿಟ್‌ನೆಸ್ ಫ್ರೀಕ್. ಕೆಜಿಎಫ್ ಚಾಪ್ಟರ್2(KGF Chapter 2) ಬಂದ ಮೇಲೆ ಫ್ಯಾಮಿಲಿ ಕಡೆ ಟೈಂ ಕೊಟ್ಟಿದ್ದ ಯಶ್ ಸ್ವಲ್ಪ ದಪ್ಪಗಾಗಿದ್ರು. ಈಗ ಯಶ್19ಗೆ (Yash 19) ಸಿದ್ಧರಾಗ್ತಿರೋ ಈ ಮಾಸ್ಟರ್ ಪೀಸ್, ಮತ್ತೆ ಹಳೆ ಲುಕ್‌ಗೆ ಮರಳಬೇಕಿದೆ. ಜಿಮ್‌ನಲ್ಲಿ(Gym) ಬೆವರು ಹರಿಸುತ್ತಿರೋ ರಾಕಿಂಗ್ ಸ್ಟಾರ್ ಈಗ 90 ಕೆಜಿ ತೂಕ ಇದ್ದಾರಂತೆ. ಇದನ್ನ 80ಕ್ಕೆ ಇಳಿಸಬೇಕಂತೆ. ಹೀಗಾಗಿ ಯಶ್ ಕಟ್ಟುನಿಟ್ಟಾಗಿ ಡಯೆಟ್ ಮಾಡ್ತಿದ್ದಾರೆ. ದಿನವೊಂದಕ್ಕೆ ಮೂರು ಗಂಟೆ ಜಿಮ್‌ನಲ್ಲೇ ಇರೋ ಈ ರಾಮಾಚಾರಿ ಮಸಾಲ, ಫ್ಯಾಟ್ ಫುಡ್ ಮುಟ್ಟೋ ಹಾಗಿಲ್ವಂತೆ. ಯಶ್ ತನ್ನ ನೆಕ್ಟ್ಸ್ ವೆಂಚರ್ನ ಅನೌನ್ಸ್ಗಾಗಿ ಫ್ಯಾನ್ಸ್ ಕಾದಿದ್ದೇ ಬಂತು. ಇದುವರೆಗು ಆನ್ಸರ್ ಮಾತ್ರ ಸಿಕ್ಕಿಲ್ಲ. ಆದ್ರೆ ಈ ಸಿನಿಮಾ ಬಗ್ಗೆ ಬಗೆ ಬಗೆಯ ಕತೆ ಕಾದಂಬರಿಗಳು ಹರಿದಾಡ್ತಾನೆ ಇವೆ. ಯಶ್19ಗೆ ಕನ್ನಡದ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಮ್ಯೂಸಿಕ್ ಮಾಡ್ತಾರೆ ಅಂತ ಒಂದಿಷ್ಟು ಗುಲ್ಲೆದ್ದಿದೆ. ಗೋವಾದಲ್ಲಿ ಯಶ್19 ಟೈಟಲ್ ಟೀಸರ್ ಶೂಟಿಂಗ್ ಆಗಿದೆ ಅಂತ ಸುದ್ದಿ ಆಗಿತ್ತು. ಇದರ ಜೊತೆಗೆ ರಾಕಿ ಫಾರಿನ್ನಲ್ಲಿ ಲೊಕೇಷನ್ ಹಂಟಿಂಗ್ ಮಾಡ್ತಿದ್ದಾರೆ ಅಂತ ಹೇಳಲಾಯ್ತು. ಅಷ್ಟೆ ಅ್ಲ ಗೌರಿ ಗಣೇಶ ಹಬ್ಬಕ್ಕೆ ಯಶ್ 19ನೇ ಸಿನಿಮಾ ಅನೌನ್ಸ್ ಮಾಡೇ ಮಾಡ್ತಾರೆ ಅಂತ ರಾಕಿ ಆಪ್ತರೇ ಹೇಳಿದ್ರು. ಆದ್ರೆ ಅದೆಲ್ಲಾ ಸುಳ್ಳಾಯ್ತು. ಟೋಟಲ್ಲಾಗಿ ಯಶ್ ಏನ್ ಮಾಡ್ತಾರೆ ಅನ್ನೋ ಸಸ್ಪೆನ್ಸ್ ಸಸ್ಪೆನ್ಸ್ ಆಗೇ ಉಳಿದಿದೆ.

ಇದನ್ನೂ ವೀಕ್ಷಿಸಿ:  ನೆಗೆಟಿವ್‌ ರೋಲ್‌ ಮಾಡುವಾಗ ನಮಗೆ ಸ್ವಲ್ಪ ಆ್ಯಟಿಟ್ಯೂಡ್‌ ಇರುತ್ತೆ: ಶಿವರಾಜ್‌ ಕುಮಾರ್‌

04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
Read more