'ಟಾಕ್ಸಿಕ್' ಶೂಟಿಂಗ್ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್..! ಶೂಟಿಂಗ್ ಅಖಾಡಕ್ಕೆ ಇಳಿದ ಗೀತು ಮೋಹನ್ ದಾಸ್!

'ಟಾಕ್ಸಿಕ್' ಶೂಟಿಂಗ್ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್..! ಶೂಟಿಂಗ್ ಅಖಾಡಕ್ಕೆ ಇಳಿದ ಗೀತು ಮೋಹನ್ ದಾಸ್!

Published : May 05, 2024, 11:39 AM ISTUpdated : May 05, 2024, 11:40 AM IST

ಟಾಕ್ಸಿಕ್‌, ರಾಕಿಂಗ್‌ಸ್ಟಾರ್‌ ಯಶ್‌ ಭತ್ತಳಿಕೆಯ ಹೈ ವೋಲ್ಟೇಜ್‌ ಸಿನಿಮಾ ಅನ್ನೋದು ನಿಮ್ಮೆಲ್ಲರಿಗೂ ಗೊತ್ತೆ ಇದೆ. ಈ ಚಿತ್ರಕ್ಕಾಗಿ ಬರೀ ಪ್ಯಾನ್‌ಇಂಡಿಯಾ ಮಾತ್ರವಲ್ಲ ಪ್ಯಾನ್‌ವರ್ಲ್ಡ್‌ಪ್ರೇಕ್ಷಕರು ಚಾತಕ ಪಕ್ಷಗಳಂತೆ ಕಾಯ್ತಿದ್ದಾರೆ. ಟೈಟಲ್‌, ಟೀಸರ್‌,ಹೊರ ಬಂದ್ಮೇಲಂತೂ ನೂರೆಂಟು ನಿರೀಕ್ಷೆ ಇಟ್ಕೊಂಡು ಎದುರು ನೋಡ್ತಿದ್ದಾರೆ.

ಟಾಕ್ಸಿಕ್ ಶೂಟಿಂಗ್ ಶುರುವಾಗಿದಿಯೋ ಇಲ್ವೋ? ಶುರುವಾಗದಿದ್ರೆ ಆಗೋದು ಯಾವಾಗ ಎಂಬ ಪ್ರಶ್ನೆ ಯಶ್ ಭಕ್ತಗಣವನ್ನು ಕಾಡುತ್ತಿತ್ತು. ಇತ್ತೀಚೆಗಷ್ಟೇ ಗೋವಾ(Goa) ಕಡಲಡಿಯಲ್ಲಿ ತಂಡದ ಜೊತೆ ಕಾಣಿಸಿಕೊಂಡಿದ್ದ ಯಶ್(Yash)ತಮ್ಮ ಇಷ್ಟದ ಜಾಗದಲ್ಲಿ ಚಿತ್ರೀಕರಣಕ್ಕೆ ಚಾಲು ಕೊಟ್ಟಿದ್ದಾರೆ ಎನ್ನಲಾಗಿತ್ತು. ಅಸಲಿಗೆ ಗೋವಾದಲ್ಲಿ ಅಲ್ಲ ಬೆಂಗಳೂರಿನಲ್ಲಿಯೇ ಟಾಕ್ಸಿಕ್(Toxic movie) ಶೂಟಿಂಗ್ ಶುರುವಾಗಿದೆ ಅನ್ನೋದು ವಿಶೇಷ. ಆಗಾಗ ಫಾರಿನ್ ಸುತ್ತುತ್ತಿದ್ದ ಕೆಜಿಎಫ್ ಕಿಂಗ್‌ನ ನೋಡಿ ವಿದೇಶದಲ್ಲಿ ಚಿತ್ರೀಕರಣ ಚಾಲುವಾಗಿದೆ ಎಂಬ ಲೆಕ್ಕಚಾರ ಸಿನಿ ಸರ್ಕಲ್ ಹರಿದಾಡಿತ್ತು. ಬಟ್ ನಮ್ಮ ಸಿಲಿಕಾನ್ ಸಿಟಿಯಲ್ಲಿಯೇ ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ ತಂಡ ಕಟ್ಟಿಕೊಂಡು ಟಾಕ್ಸಿಕ್ ಅಖಾಡಕ್ಕೆ ಇಳಿದಿದ್ದಾರೆ. ಮೇ 3 ತಾರೀಖು ಮಧ್ಯರಾತ್ರಿಯಿಂದಲೇ ಚಿತ್ರೀಕರಣ(Shooting) ಶುಭಾರಂಭವಾಗಿದೆ. ಯಶ್ ಮೇ 3ನೇ ತಾರೀಖು ಮಧ್ಯ ರಾತ್ರಿ ಟಾಕ್ಸಿಕ್ ಶೂಟಿಂಗ್ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ರಾತ್ರೋ ರಾತ್ರಿ ಅದು ಮೇ 3ಕ್ಕೇ ಟಾಕ್ಸಿಕ್ ಶೂಟಿಂಗ್ ಶುರು ಮಾಡಿದ್ಯಾಕೆ ಗೊತ್ತಾ.? ಕೆಜಿಎಫ್ ಚಾಪ್ಟರ್ 1 ಫಸ್ಟ್ ಲುಕ್ ರಿಲೀಸ್ ಆಗಿದ್ದು ಇದೇ ದಿನದಂದು. ಹೀಗಾಗಿ ಈ ವಿಶೇಷ ದಿನದಂದೇ ಯಶ್ ತಮ್ಮ ಜಗದಲಗದ ಕನಸಿಗೆ ಚಾಲನೆ ಕೊಟ್ಟಿದ್ದಾರಂತೆ. ಏಳು ವರ್ಷದ ಹಿಂದೆ ಶುರುವಾದ ರಾಕಿ ಹೊಸ ಬೇಟೆ ಇವತ್ತು ಇಲ್ಲಿಗೆ ಬಂದು ತಲುಪಿದೆ. ಹೀಗಾಗಿ ಈ ದಿನವನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗ್ತಿದೆ. ಅಪ್ ಡೇಟ್ ಅಪ್ ಡೇಟ್ ಅನ್ನುತ್ತಿದ್ದ ಫ್ಯಾನ್ಸ್ ಕಿವಿ ಮೇಲೆ ಶೂಟಿಂಗ್ ಶುರುವಾಗಿರುವ ಮ್ಯಾಟರ್ ಬೀಳ್ತಿದ್ದಂತೆ ಸುಲ್ತಾನನ ಬೊಂಬಾಟ್ ಲುಕ್ ಹೇಗಿರುಬಹುದು ಅಂತಾ ಪ್ರಿಡಕ್ಷನ್ ಕೂಡ ಶುರು ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  Ilayaraja: ರಜನಿಯ 'ಕೂಲಿ'ಗೆ ಇಳಯರಾಜ ಕೃತಿಚೌರ್ಯ ನೋಟಿಸ್ ಕಳುಹಿಸಿದ್ದೇಕೆ..?

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more