Dec 11, 2023, 10:03 AM IST
ಯಶ್ ಟಾಕ್ಸಿಕ್ ಎಂದು ತಮ್ಮ ಸಿನಿಮಾಗೆ ಟೈಟಲ್ ಇಡೋಕೆ ಕಾರಣವೇನು? ಈ ಟೈಟಲ್ ಹಿಂದಿನ ರಹಸ್ಯವಾದರೂ ಏನು..? ಈ ಪದದ ನಿಖರವಾದ ಅರ್ಥವೇನು ಅಂತ ಜನ ಇಂಟರ್‌ನೆಟ್‌ನಲ್ಲಿ ಹುಡುಕುತ್ತಿದ್ದಾರೆ. ಟಾಕ್ಸಿಕ್(Toxic) ಅಂದ್ರೆ ವಿಷಕಾರಿ ಅಂತ ಅರ್ಥ. ಯಶ್ ಸಿನಿಮಾಗೆ ಈ ಟೈಟಲ್ ಇಟ್ಟಿದ್ದಾರೆ ಅಂದ್ರೆ ಈ ಸಿನಿಮಾ ಯಾವ ರೇಂಜ್‌ನಲ್ಲಿ ಇರುತ್ತೆ ಅನ್ನೋದನ್ನು ನೀವೇ ಊಹಿಸಿಕೊಳ್ಳಿ. ವಿಷಕಾರಿ ಪ್ರಪಂಚದಲ್ಲಿ ವಿಷ ಮನಸುಗಳ ನಡುವೆ ಫೈಟ್ ಮಾಡೊ ಡಾನ್ ಆಗಿ ಯಶ್(Yash) ಕಾಣಿಸಿಕೊಳ್ಳಲಿದ್ದಾರೆ. ಟಾಕ್ಸಿಕ್ ಎನ್ನುವ ಕ್ರೇಜಿ ಟೈಟಲ್ ಇಟ್ಟಿರೋ ಯಶ್ ಗೋವಾ ಡ್ರಗ್ಸ್ ಮಾಫಿಯಾದಲ್ಲಿ(Goa Drugs Mafia) ಡಾನ್ ಆಗಿರ್ತಾರೆ ಅನ್ನೋದಕ್ಕೆ ಟೈಟಲ್ ಮತ್ತು ಟೀಸರ್ ಸೂಕ್ಷ್ಮ ಸುಳಿವನ್ನು ನೀಡಿದೆ. ಯಶ್ ಹಾಲಿವುಡ್(Hollywood) ರೇಂಜ್‌ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಭರ್ಜರಿ ಥ್ರಿಲ್ ನೀಡಿದೆ. ಆಧುನಿಕ ಜಗದೋದ್ದಾರನ ಅವತಾರದಲ್ಲಿ ಯಶ್ ಅಬ್ಬರಿಸಿದ್ದಾರೆ. ರಾಕಿಭಾಯ್ ಈಗ ಪ್ಯಾನ್ ವರ್ಲ್ಡ್ ಫೋಕಸ್ ಮಾಡಿ ಗೋವಾ ಡ್ರಗ್ಸ್ ಮಾಫಿಯಾದಂತ ಯೂನಿವರ್ಸಲ್ ಸಬ್ಜೆಕ್ಟ್‌ನನ್ನೇ ತೆಗೆದುಕೊಂಡಿದ್ದಾರೆ. 70 ದಶಕದ ಬ್ಯಾಕ್ರಾಡ್ರಾಪಲ್ಲಿ ಕತೆ ನಡೆಯಲಿದೆ. ಯಶ್ ಸಿನಿಮಾ ಟಾಕ್ಸಿಕ್‌ನಲ್ಲಿ ಹಾಲಿವುಡ್ ಟೆಕ್ನೀಷಿಯನ್ಸ್ ತಂಡ ವರ್ಕ್ ಮಾಡುತ್ತಿದೆ. ಅನ್ನೋದು ಈ ಸಿನಿಮಾ ಯಾವ್ ರೇಂಜಿಗೆ ಇರುತ್ತೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ. ಚರಣ್ ರಾಜ್ ಈ ಸಿನಿಮಾದ ಮ್ಯೂಸ್ ಡೈರೆಕ್ಟರ್ಸ್ನಲ್ಲಿ ಒಬ್ಬರಾಗಿರ್ತಾರೆ ಅನ್ನೋದು ಅಷ್ಟೆ ಸತ್ಯ.
ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಪಕ್ಷದಲ್ಲಿ ಹೆಂಡ್ತಿ ಮಕ್ಕಳಿಗಾಗಿ ಟಿಕೆಟ್ ಸರ್ಕಸ್: ಜೆಡಿಎಸ್‌ನಲ್ಲಿ ಈ ಬಾರಿ ಯಾರಿಗೆ..ಯಾವ ಕ್ಷೇತ್ರದ ಟಿಕೆಟ್..?