Yash: ಟಾಕ್ಸಿಕ್ ಟೈಟಲ್ ಕಿಕ್ ಬಳಿಕ ಯಶ್ ಫ್ಯಾನ್ಸ್‌ಗೆ ಶಾಕ್..! ಜ. 8ಕ್ಕೆ ಅಭಿಮಾನಿಗಳ ಕೈಗೆ ಸಿಗಲ್ಲ ನಟ..!

Jan 6, 2024, 10:13 AM IST

ಯಶ್ ಟಾಕ್ಸಿಕ್ ಕಿಟ್ ಕೊಟ್ಟಿದ್ದಾರೆ. ಜೆಸ್ಟ್ ಟಾಕ್ಸಿಕ್ (Toxic movie) ಟೈಟಲ್ ಟೀಸರ್‌ ವರ್ಲ್ಡ್ ವೈಡ್ ಸೌಂಡ್ ಮಾಡಿದೆ. ಈ ಖುಷಿ ಯಶ್ ಫ್ಯಾನ್ಸ್ ಗಿದೆ. ಆದ್ರೆ ಟಾಕ್ಸಿಕ್ ಕಿಕ್ ಜೊತೆ ಯಶ್ ಹುಟ್ಟುಹಬ್ಬದಲ್ಲಿ ಮಿಂದೇಳಬೇಕು ಅಂತ ಯಶ್(Yash) ಫ್ಯಾನ್ಸ್  ಕಾಯುತ್ತಿದ್ರು. ಜನವರಿ 8ಕ್ಕೆ ನಟ ಯಶ್ ಹುಟ್ಟು ಹಬ್ಬ ಇದೆ. ಈ ಭಾರಿಯ ಹುಟ್ಟುಹಬ್ಬದ(Birthday) ಬಗ್ಗೆ ಯಶ್ ಪತ್ರ ಬರೆದಿದ್ದು, ಯಶ್ ಫ್ಯಾನ್ಸ್ ಬೇಸರದಲ್ಲಿರುವಂತೆ ಮಾಡಿದೆ. ಯಶ್ ಜನವರಿ 8 ಕ್ಕೆ ತನ್ನ ಅಭಿಮಾನಿಗಳನ್ನ ಬೇಟಿ ಮಾಡೋ ಪ್ಲಾನ್ ನಲ್ಲಿದ್ರು. ಅದಕ್ಕಾಗಿ ತಯಾರಿ‌ ಕೂಡ ನಡೆದಿತ್ತು. ಆದ್ರೆ ಕೊನೆ‌‌ ಕ್ಷಣದಲ್ಲಿ ಆ ಪ್ಲ್ಯಾನ್ ಬದಲಾಗಿದೆ. ನಾನು ನಿಮ್ಮನ್ನ ಬೇಟಿಯಾಗುತ್ತಿಲ್ಲ ಅಂತ ಯಶ್ ಫ್ಯಾನ್ಸ್ ಗೆ ಸಂದೇಶ ಕಳುಹಿಸಿದ್ದಾರೆ.ಈ ಪತ್ರದಲ್ಲಿ(Letter) ಯಶ್ ಕೊಟ್ಟಿರೋ ಕಾರಣ ಟಾಕ್ಸಿಕ್ ಸಿನಿಮಾದ ವರ್ಕ್.. ಈ ಮೂಲಕ ಯಶ್ ತನ್ನ ಫ್ಯಾನ್ಸ್ ಮೇಲಿರೋ ಪ್ರೀತಿ ತೋರಿಸಿದ್ದಾರೆ. 'ಜನವರಿ 8, ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನು ನನ್ನ ಜೊತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ. ನನಗೂ ಅಷ್ಟೇ, ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ, ಆದರೆ ಸಿನಿಮಾದ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ, ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ 8 ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ, ನನ್ನ ಅನುಪಸ್ಥಿತಿಯನ್ನು, ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು. ಸದಾಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ’. ಹುಟ್ಟುಹಬ್ಬದ ದಿನ ನಟ ಯಶ್ ಹಾಗೂ ಫ್ಯಾನ್ಸ್ ಭೇಟಿಯಾಗಿ ಮೂರು ವರ್ಷ ಆಗಿದೆ. ಮೂರು ವರ್ಷಗಳ ಹಿಂದೆ ಬೆಂಗಳೂರಿನ ನಂದಿ‌ ಲಿಂಕ್ಸ್ ಗ್ರೌಂಡ್ ನಲ್ಲಿ ರಾಕಿ ಅದ್ಧೂರಿ ಬರ್ತ್ಡೇ ಆಚರಿಸಿಕೊಂಡಿದ್ರು. ಡೈ ಹಾರ್ಡ್ ಅಭಿಮಾನಿಗಳನ್ನ ಭೇಟಿ ಮಾಡಿದ್ರು.

ಇದನ್ನೂ ವೀಕ್ಷಿಸಿ:  ಧ್ರುವ ಸರ್ಜಾಗೆ ವಿಲನ್ ಆದ್ರಾ ವಿಜಯ್ ಸೇತುಪತಿ ? 'ಕೆಡಿ ದಿ ಡೇವಿಲ್'ಗೆ ತಮಿಳು ನಟನ ಸೇರ್ಪಡೆ?