Nov 7, 2023, 9:50 AM IST
ವರನಟ ಡಾಕ್ಟರ್ ರಾಜ್ ಕುಮಾರ್ ಯಂಗ್ ಹೀರೋಗಳು ಸಿಕ್ಕಾಗೆಲ್ಲಾ ಒಂದ್ ಮಾತು ಹೇಳ್ತಿದ್ರು, ನಾವ್ ಸಿನಿಮಾದವರು, ನಾವ್ ಇರೋದೇ ಅಭಿಮಾನಿಗಳ ದೇವರುಗಳನ್ನ ರಂಜಿಸೋದಕ್ಕೆ. ವರ್ಷಕ್ಕೂ ಮೂರ್ನಾಲ್ಕು ಸಿನಿಮಾ ಮಾಡಿ ಎಲ್ಲರನ್ನ ರಂಜಿಸುತ್ತಾ ಇರಬೇಕು ಅಂತಿದ್ರಂತೆ. ಆದ್ರೆ ಈಗ ಹೀರೋಗಳು ವರ್ಷಕ್ಕೆ ಮೂರ್ನಾಕಿರಲಿ ಒಂದ್ ಸಿನಿಮಾ ಮಾಡಿದ್ರೆ ಸಾಕು ಅನ್ನೋ ಹಾಗಾಗಿದೆ. ಈ ಸಾಲಿನಲ್ಲಿ ಈಗ ಮೊದಲು ಸಿಕ್ತಿರೋದೆ ನಟ ಯಶ್(Yash) ಅಂತಿದೆ ಗಾಂಧೀನಗರ. ರಾಕಿಂಗ್ ಸ್ಟಾರ್ ಯಶ್ರನ್ನ ಸ್ಯಾಂಡಲ್ವುಡ್ನ(Sandalwood) ಚಿನ್ನ ಅಂತ ಕೆಜಿಎಫ್ ಸಿನಿಮಾ ಬಂದಾಗ ಅವ್ರ ಫ್ಯಾನ್ಸ್ ಅಟ್ಟಕ್ಕೇರಿಸಿದ್ರು. ಅದು ನಿಜ ಕೂಡ. ಯಶ್ ಅಂತಹ ಅದ್ಭತವನ್ನೇ ಸೃಷ್ಟಿಸಿದ್ರು. ಕೆಜಿಎಫ್ನಿಂದ ಇಂಡಿಯನ್ ಸಿನಿಮಾ ಜಗತ್ತಿಗೆ ಕನ್ನಡ ಚಿತ್ರರಂಗದ ಶಕ್ತಿಯನ್ನ ತೆರೆದಿಟ್ಟಿದ್ರು. ಆದ್ರೆ ಆ ಸಿನಿಮಾ ಆದ್ಮೇಲೆ ಯಶ್ ಮುಂದಿನ ದಾರಿ ಏನು..? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಬರೋಬ್ಬರಿ ಎರಡು ವರ್ಷ ಕಳದೇ ಹೋಗಿದೆ. ರಾಕಿ ಫ್ಯಾನ್ಸ್‌ಗೆ(Fans) ರಾತ್ರಿ ಹಗಲು ಕಾಡುತ್ತಿರೋ ಪ್ರಶ್ನೆ ಯಶ್ 19 ಸಿನಿಮಾ(Yash 19 movie) ಅನೌನ್ಸ್ ಯಾವಾಗ ಅನ್ನೋದು. ಆದ್ರೆ ಅದಕ್ಕೆ ಉತ್ತರ ಹುಡುಕ್ತಾ ಹೋದ್ರೋ ಆ ಆಸೆಗೆ ಯಶ್ ತಣ್ಣೀರೆರಚಿದ್ರಾ ಅನ್ನೋ ಡೌಟ್ ಬರುತ್ತೆ. ಯಾಕಂದ್ರೆ ಎಲ್ಲಾ ಹಬ್ಬಗಳು ಮುಗಿದ್ರು ಯಶ್ 19 ಹಬ್ಬ ಮಾತ್ರ ಶುರುವಾಗಲಿಲ್ಲ. ಯಶ್ ಸಿನಿಮಾ ಅನೌನ್ಸ್ ಮಾಡಿಲ್ಲ ಅನ್ನೋದು. ಯಾರ್ ಏನ್ ಹೇಳಿದ್ರು ಅಭಿಮಾನಿಗಳು ಎಷ್ಟೇ ಬೇಡಿಕೆ ಇಟ್ರು ರಾಕಿ ಮಾತ್ರ ತನ್ನ 19ನೇ ಸಿನಿಮಾ ಗುಟ್ಟನ್ನ ರಟ್ಟು ಮಾಡ್ತಿಲ್ಲ. ಆದ್ರೆ ಯಶ್ ಅಲ್ಲಿ ಇಲ್ಲಿ ಅಂತ ಸುತ್ತುತ್ತಿದ್ದಾರೆ. ಆಗಾಗ ಯಶ್ರ ಹೊಸ ಹೊಸ ಫೋಟೋಗಳು ವೈರಲ್ ಆಗುತ್ತಿವೆ. ಯಶ್ ರಾಮಾಯಣದಲ್ಲಿ ರಾವಣ ಆಗ್ತಾರೆ ಅಂತ ಸುದ್ದಿ ಹಬ್ಬಿತ್ತು. ಇಲ್ಲ ಇಲ್ಲ ರಾಕಿ ಗೋವಾ ಡ್ರಗ್ಸ್ ಮಾಫಿಯಾ ಬಗ್ಗೆ ಸಿನಿಮಾ ಮಾಡ್ತಾರೆ ಅಂತ ಹೇಳಿದ್ರು. ಆದ್ರೆ ಅದ್ಯಾವುದೂ ಕನ್ಫರ್ಮ್ ಮಾತ್ರ ಆಗಿಲ್ಲ. ಯಶ್ ಎರಡು ವರ್ಷ ಸಿನಿಮಾ ಮಾಡದೇ ಸೈಲೆಂಟ್ ಆಗಿ ಕೂರೋ ವ್ಯಕ್ತಿ ಅಲ್ಲ ಅನ್ನೋದು ಅಷ್ಟೇ ಸತ್ಯ. ಆ ಸತ್ಯಕ್ಕೆ ಉತ್ತರ ಹುಡುಕ್ತಾ ಹೋದ್ರೆ ಒಳಗೊಳಗೆ ನಡೀತಿದೆಯಾ ಯಶ್19 ಸಿನಿಮಾ ಶೂಟಿಂಗ್ ಅನ್ನೋ ಅನುಮಾನ ಕಾಡುತ್ತೆ.
ಇದನ್ನೂ ವೀಕ್ಷಿಸಿ: ನೋಡುಗರ ಕಣ್ಣಿಗೆ ಹಬ್ಬ ಕಾರ್ನಿವಲ್ ಫೆಸ್ಟಿವಲ್: ವಿದ್ಯುತ್ ದೀಪಾಲಂಕಾರ..ಫಿಲ್ಮ್‌ಸಿಟಿ ಝಗಮಗ