ಉಸಿರು ಚೆಲ್ಲಿದ ಚಿನ್ನಾರಿ ಮುತ್ತನ "ಚಿನ್ನ": ನಟ ವಿಜಯ್ ರಾಘವೇಂದ್ರಗೆ ಮನ ಮೆಚ್ಚಿದ ಮಡದಿ ಸಿಕ್ಕಿದ್ದು ಹೇಗೆ..?

ಉಸಿರು ಚೆಲ್ಲಿದ ಚಿನ್ನಾರಿ ಮುತ್ತನ "ಚಿನ್ನ": ನಟ ವಿಜಯ್ ರಾಘವೇಂದ್ರಗೆ ಮನ ಮೆಚ್ಚಿದ ಮಡದಿ ಸಿಕ್ಕಿದ್ದು ಹೇಗೆ..?

Published : Aug 08, 2023, 02:43 PM IST

ವಯಸ್ಸಲ್ಲದ ವಯಸ್ಸಲ್ಲಿ ಉಸಿರು ಚೆಲ್ಲಿದ ಚಿನ್ನಾರಿ ಮುತ್ತನ ಚಿನ್ನ..!
ನಗುವಿನ ಒಡತಿ..ನಿಷ್ಕಲ್ಮಶ ಪ್ರೀತಿ..ತುಳುನಾಡ ದೈವ ಭಕ್ತೆ..!
ವಿಜಯ್ ರಾಘವೇಂದ್ರಗೆ ಸಿಕ್ಕಿದ್ದು ಹೇಗೆ ಮನ ಮೆಚ್ಚಿದ ಮಡದಿ..?

ವಯಸ್ಸು ಕೇವಲ 36-37 ಆಸುಪಾಸು. ಆದರ್ಶ ಪತ್ನಿ, ಆದರ್ಶ ಗೃಹಿಣಿ, ಚಿನ್ನಾರಿಮುತ್ತನ ಮನಮೆಚ್ಚಿದ ಮಡದಿ. ಈ ಆದರ್ಶ ದಂಪತಿಯ ಮೇಲೆ ಅದ್ಯಾರ ಕೆಟ್ಟ ದೃಷ್ಠಿ ಬಿತ್ತೋ ಏನೋ.. ಚಿನ್ನಾರಿ ಮುತ್ತನ ಚಿನ್ನ, ನಟ ವಿಜಯ್ ರಾಘವೇಂದ್ರ(Vijay raghavendra) ಅವರ ಮನ ಮೆಚ್ಚಿದ ಮುದ್ದಿನ ಮಡದಿ ಸ್ಪಂದನಾ ಸಪ್ತಸಾಗರದಾಚೆ, ವಯಸ್ಸಲ್ಲದ ವಯಸ್ಸಲ್ಲಿ ಉಸಿರು ಚೆಲ್ಲಿದ್ದಾರೆ. ಸ್ಯಾಂಡಲ್‌ವುಡ್‌ನ ಚಿನ್ನಾರಿ ಮುತ್ತ ಅಂತಾನೇ ಫೇಮಸ್ ಆಗಿರೋ ವಿಜಯ್ ರಾಘವೇಂದ್ರ ಅವರ ಪತ್ನಿ ಈ ಸ್ಪಂದನಾ(spandana). ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ಥಾಯ್ಲೆಂಡ್‌ನ ಬ್ಯಾಂಕಾಕ್‌ಗೆ ಪ್ರವಾಸಕ್ಕೆ ಅಂತ ಹೋಗಿದ್ದ ಸ್ಪಂದನಾ ಅಲ್ಲೇ ಅಕಾಲಿಕ ಮರಣಕ್ಕೀಡಾಗಿದ್ದಾರೆ. ರಾತ್ರಿ ಮಲಗಿದವರಿಗೆ ತೀವ್ರ ಹೃದಯಾಘಾತವಾಗಿದೆ(Heart attack). ಆ ಆಘಾತಕ್ಕೆ ಮಲಗಿದವರು ಮತ್ತೆ ಎದ್ದಿಲ್ಲ. ಹಾಗೇ ಇಹಲೋಕ ತ್ಯಜಿಸಿ ಬಿಟ್ಟಿದ್ದಾರೆ ಅಂತ ಅತ್ತಿಗೆಯ ಆಘಾತಕಾರಿ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ ವಿಜಯ್ ರಾಘವೇಂದ್ರ ಅವರ ಸಹೋದರ, ನಟ ಶ್ರೀಮುರುಳಿ. ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರದ್ದು ಆದರ್ಶ ದಾಂಪತ್ಯ. ಚಿನ್ನಾರಿ ಮುತ್ತ ಕನ್ನಡ ಚಿತ್ರರಂಗ ದೊಡ್ಮನೆಗೆ ಸೇರಿದವರು. ಅಂದ್ರೆ ವಿಜಯ್ ರಾಘವೇಂದ್ರ ಅವರ ತಂದೆ ಚಿನ್ನೇಗೌಡ್ರು, ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ಅವರ ಸ್ವಂತ ಸಹೋದರ. ಇನ್ನು ಸ್ಪಂದನಾ, ರಾಜ್ಯದ ಖ್ಯಾತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಅವರ ಒಬ್ಬಳೇ ಮಗಳು. ಗಂಡ-ಹೆಂಡತಿ ಹೀಗಿರ್ಬೇಕಪ್ಪಾ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಆಗಿದ್ದವರು ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ.

ಇದನ್ನೂ ವೀಕ್ಷಿಸಿ:  'ಚಿನ್ನಾರಿ ಮುತ್ತನ' ಬಾಳಲ್ಲಿ ಬಿರುಗಾಳಿ: ಅಡುಗೆ ಮಾಡೋದ್ರಲ್ಲಿ ಎಕ್ಸ್‌ಪರ್ಟ್‌ ಸ್ಪಂದನಾ !

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more