ಮತ್ತೆ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್..! 'UI' ಟೀಸರ್ ರಿಲೀಸ್ ಡೇಟ್ ಹೇಳಿ ಎಂದ ಉಪ್ಪಿ..!

Jan 3, 2024, 9:32 AM IST

ರಿಯಲ್ ಸ್ಟಾರ್ ಉಪೇಂದ್ರ ರಾಯಲ್ ಆಗಿ ಯುಐ ಸಿನಿಮಾ ಮಾಡುತ್ತಿದ್ದಾರೆ. ಉಪೇಂದ್ರ(Upendra) ನಿರ್ದೇಶನದಲ್ಲಿ ಬರುತ್ತಿರೋ ಸಿನಿಮಾ ಇದು. ಉಪೇಂದ್ರ ಡೈರೆಕ್ಷನ್ ಕ್ಯಾಪ್ ತೊಟ್ಟು ಎಂಟು ವರ್ಷ ಆಗಿದೆ. ಉಪ್ಪಿ ನಿರ್ದೇಶನದ ಸಿನಿಮಾ ಅಂದ್ರೆ ಸಹಜವಾಗೇ ಕುತೂಹಲ ಹೈ ವೋಲ್ಟೇಜ್ನಲ್ಲಿರುತ್ತೆ. ಈಗ ಯುಐ ಕೂಡ ಸಣ್ಣ ಸಣ್ಣ ಸ್ಯಾಂಪಲ್ಸ್ನಿಂದ ದೊಡ್ಡ ಎಕ್ಸ್ಪಟೇನ್ ಹುಟ್ಟುಹಾಕಿದೆ. ಉಪೇಂದ್ರ ಯುಐ ಸಿನಿಮಾಗೆ(UI Movie) ಕೈ ಇಟ್ಟಾಗಿನಿಂದ ತಲೆಗೆ ಹುಳ ಬಿಡ್ತಾನೆ ಇದ್ದಾರೆ. ಯುಐ ಪೋಸ್ಟರ್ ರಿಲೀಸ್ ಮಾಡುವಾಗ ಹಣೆ ಮೇಲೆ ಮೂರು ನಾಮ ಹಾಕಿಕೊಂಡ ಫೋಟೋ ಶೆರ್ ಮಾಡಿ ಫ್ಯಾನ್ಸ್ ತಲೆ ಕೆಡಿಸಿದ್ರು. ಯುಐ ಟೀಸರ್(Teaser) ಬಿಡುವಾಗ್ಲು ಕಾಲಿ ಟೀಸರ್ ತೋರ್ಸಿ ತಲೆ ಕೆಡಿಸಿದ್ರು. ಈಗ ಯುಐನ ಸಕೆಂಡ್ ಟೀಸರ್ ಬಿಡೋಕೆ ಪ್ಲಾನ್ ಮಾಡಿದ್ದಾರೆ ಉಪೇಂದ್ರ. ಸೋ ಈ ಟೀಸರ್ ನೋಡೋಕೆ ಈಗ್ಲು ಫ್ಯಾನ್ಸ್ ತಲೆ ಕೆಡಿಸಿಕೊಳ್ಳೊ ಹಾಗಾಗಿದೆ. ಯಾಕಂದ್ರೆ ಟೀಸರ್ ರಿಲೀಸ್ ಡೇಟ್ಅನ್ನ ನೀವೇ ಹೇಳಿ ಅಂತ ಫ್ಯಾನ್ಸ್ಗೆ ಕೇಳಿದ್ದಾರೆ ರಿಯಲ್ ಸ್ಟಾರ್.ಯುಐ ಟೀಸರ್ 2024 ಜನವರಿ ಅಂದ್ರೆ ಇದೇ ತಿಂಗಳು ರಿಲೀಸ್ ಆಗುತ್ತೆ. ಆದ್ರೆ ಡೇಟ್ ಮಾತ್ರ ಬಿಟ್ಟುಕೊಟ್ಟಿಲ್ಲ ಉಪ್ಪಿ. ಯುಐ ಸೆಕೆಂಡ್ ಟೀಸರ್ ರಿಲೀಸ್ ಡೇಟ್ಅನ್ನ ಉಪ್ಪಿ ಅಭಿಮಾನಿಗಳೇ ಗೆಸ್ ಮಾಡಿ ಹೇಳಬೇಕು. ಹಾಗೆ ಹೇಳಿದ 50 ಜನ ಫ್ಯಾನ್ಸ್ಗೆ ಯುಐ ಟೀಸರ್ ರಿಲೀಸ್ ಕಾರ್ಯಕ್ರಮದ ಟಿಕೆಟ್ಅನ್ನ ಫ್ರೀ ಆಗಿ ಕೊಡಲಾಗುತ್ತೆ. ಆ ಫ್ಯಾನ್ಸ್ಗಳನ್ನ ಉಪೇಂದ್ರ ಅವರೇ ಸೆಲೆಕ್ಟ್ ಮಾಡ್ತಾರೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಶತ್ರುಗಳ ಬಾಧೆ ಕಾಡಲಿದ್ದು, ಪರಿಹಾರಕ್ಕೆ ಆಂಜನೇಯ ಪ್ರಾರ್ಥನೆ ಮಾಡಿ