Jun 16, 2023, 1:24 PM IST
ಪ್ರಭಾಸ್ ಕೃತಿ ಸನೋನ್ ಅಭಿನಯದ ಬಿಗ್ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಜೂನ್ 16 ರಂದು ಬಿಡುಗಡೆಯಾಗಿದೆ. ಈ ಚಿತ್ರದ ಟಿಕೆಟ್ ಬೆಲೆ ಕೇಳಿದ್ರೆ ದಂಗಾಗಿ ಹೋಗ್ತೀರಿ.ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು, ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಬಹುತೇಕ ಕಡೆ ಫಸ್ಟ್ ಶೋ ಈಗಾಗಲೇ ಹೌಸ್ ಫುಲ್ ಆಗಿದೆ. ದೆಹಲಿ, ಮುಂಬೈ ಅಂತಹ ಮೆಟ್ರೋ ನಗರಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು ಟಿಕೆಟ್ ಬೆಲೆ ಕೂಡ ಗಗನಕ್ಕೇರಿದೆ. ಒಂದು ಟಿಕೆಟ್‌ನ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಆದಿಪುರುಷ್ ಟಿಕೆಟ್ ಬೆಲೆ ಬರೋಬ್ಬರಿ 2 ಸಾವಿರ ದಾಟಿದೆ. ಆದಿಪುರುಷ್ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾವಾಗಿದೆ.2ಸಾವಿರ ದಾಟಿದ್ರೂ ಅಭಿಮಾನಿಗಳು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ದೆಹಲಿ PVR, ವೇಗಾಸ್ LUXE, ದ್ವಾರಕಾ ಸೇರಿದಂತೆ ಅನೇಕ ಕಡೆ 1800 ರೂಪಾಯಿಯಿಂದ 2000 ರೂಪಾಯಿಗೆ ಮಾರಾಟವಾಗಿವೆ.
ಇದನ್ನೂ ವೀಕ್ಷಿಸಿ: Adipurush Twitter Review: ರಾಮನಾಗಿ ಪ್ರಭಾಸ್ ಇಷ್ಟವಾದ್ರ? ಫಸ್ಟ್ ಡೇ ಫಸ್ಟ್ ಶೋ ನೋಡಿದ ಫ್ಯಾನ್ಸ್ ಹೇಳಿದ್ದೇನು?