May 6, 2023, 5:28 PM IST
ತಮಿಳು ಕಿರುತೆರೆ ನಟಿ ಶಾಲಿನಿ ಡಿವೋರ್ಸ್ ವಿಚಾರವಾಗಿ ಸಾಕಷ್ಟು ಸುದ್ದಿ ಆಗಿದ್ದಾರೆ. ಅರೇ ಅದ್ಯಾಕಪ್ಪ ಅಂದ್ರೆ, ವಿಚ್ಚೇದನ ಸಿಕ್ಕ ಸಂಭ್ರಮದಲ್ಲಿ ಅವರು ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳು ವೈರಲ್ ಆಗಿವೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಶಾಲಿನಿಯ ಡಿವೋರ್ಸ್ ಫೋಟೋಶೂಟ್ ಪರ- ವಿರುದ್ಧ ದೊಡ್ಡ ಚರ್ಚೆಯೇ ನಡೆಯುತ್ತಿದೆ. ರಿಯಾಜ್ ಪ್ರೇಮದ ಬಲೆಗೆ ಬಿದ್ದು,ಆತನನ್ನು ನಟಿ ಶಾಲಿನಿ ಮದುವೆ ಆಗಿಬಿಟ್ಟಿದ್ದಳು. ರಿಯಾಜ್ಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಶಾಲಿನಿ, ತನ್ನ ಹೆಸರನ್ನು ಸಾರಾ ಮೊಹ್ಮದ್ ರಿಯಾಜ್ ಎಂದು ಬದಲಿಸಿಕೊಂಡಿದ್ದಳು. ಆದ್ರೆ ಮದುವೆಯಾದ ಸ್ವಲ್ಪ ದಿನಕ್ಕೆ ಆತ ನಟಿಗೆ ಕಷ್ಟ ಕೊಡಲು ಆರಂಭಿಸಿದ. ಹಾಗಾಗಿ ನಟಿ ಆತನಿಂದ ಡೈವೋರ್ಸ್ ಪಡೆದುಕೊಂಡಿದ್ದಾರೆ. ಅಲ್ಲದೇ ಈ ವಿಷಯವನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ.