May 30, 2023, 12:48 PM IST
ರಾಕಿಂಗ್ ಸ್ಟಾರ್ ಯಶ್, ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಿನಿಮಾ ರಂಗದಲ್ಲಿ ಒಂದೇ ಟ್ರ್ಯಾಕ್‌ನಲ್ಲಿರೋ ಹೀರೋಗಳು. ಯಾಕಂದ್ರೆ ಯಶ್ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಹಾಗೂ ಕೆಜಿಎಫ್2 ಮಾಡಿ ಗೆದ್ರು. ಈ ಸಿನಿಮಾಗಳ ಇನ್ಸ್ಪರೇಷನ್‌ನಿಂದ ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಮಾಡಿ ಸಕ್ಸಸ್ ಆದ್ರು. ಇನ್ನೇನು ಕೆಲವೇ ದಿನಗಳಲ್ಲಿ ಪುಷ್ಪ ಚಾಪ್ಟರ್2 ಕೂಡ ತೆರೆ ಮೇಲೆ ಬರಲಿದೆ. ಈ ಮಧ್ಯೆ ಯಶ್ ಹಾಗೂ ಅಲ್ಲು ಅರ್ಜುನ್ ಮಧ್ಯೆ ಆ ವಿಷಯದಲ್ಲಿ ಟಫ್ ಪೈಪೋಟಿ ಎದುರಾಗಿದೆ. ಸನ್ ಪಿಕ್ಚರ್ಸ್ ತಮಿಳು ಸಿನಿಮಾ ನಿರ್ಮಾಣ ಮಾಡೋ ದೊಡ್ಡ ಪ್ರೊಡಕ್ಷನ್ ಕಂಪೆನಿ. ಈ ನಿರ್ಮಾಣ ಸಂಸ್ಥೆ ರಾಜಾ ರಾಣಿ ಸಿನಿಮಾ ಖ್ಯಾತಿಯ ಅಟ್ಲಿ ಅವರ ಡೈರೆಕ್ಷನ್‌ನಲ್ಲಿ ಹೊಸ ಸಿನಿಮಾ ಮಾಡೋಕೆ ಹೊರಟಿದೆ. ಆ ಸಿನಿಮಾಗೆ ನಮ್ಮ ಯಶ್ ಮತ್ತು ತೆಲುಗಿನ ಅಲ್ಲು ಅರ್ಜುನ್ರನ್ನ ಆಯ್ಕೆ ಮಾಡಿಕೊಳ್ಳೋಕೆ ಪ್ಲಾನ್ ಮಾಡಿದೆ.
ಇದನ್ನೂ ವೀಕ್ಷಿಸಿ: ಮಂಡ್ಯದ ಗಂಡು ಅಂಬಿಗೆ 71ನೇ ಜನ್ಮದಿನ: ಅಪ್ಪನ ಹುಟ್ಟುಹಬ್ಬಕ್ಕೆ ಅಭಿಷೇಕ್ ರೆಬೆಲ್ ಟ್ರೀಟ್.!