Feb 1, 2024, 8:42 AM IST
ಕಿಚ್ಚ ಹೀರೋ ಆಗಿದ್ದು 1997ರಲ್ಲಿ ಬಂದ ತಾಯವ್ವ ಸಿನಿಮಾದಿಂದ. ಆ ಸಿನಿಮಾ ಬಂದು 26 ವರ್ಷ ಆಗಬೇಗಿದೆ. ಆದ್ರೆ ಕಿಚ್ಚ ಮೊದಲು ಬಣ್ಣ ಹಚ್ಚಿ 28 ವರ್ಷ ಆಗಿದೆ. ನಟ ರೆಬೆಲ್ ಸ್ಟಾರ್ ಅಂಬರೀಷ್(Ambareesh) ಜೊತೆ ಬ್ರಹ್ಮ ಚಿತ್ರದಲ್ಲಿ ಸುದೀಪ್ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದ್ರು. ಬ್ರಹ್ಮ ಸಿನಿಮಾಗಾಗಿ ಕಿಚ್ಚ ಮೊದಲು ಬಣ್ಣ ಹಚ್ಚಿದ್ದು ಜನವರಿ 31,1996ರಲ್ಲಿ. ಆದ್ರೆ ಈ ಬ್ರಹ್ಮ ಸಿನಿಮಾ ರಿಲೀಸ್ ಆಗಲಿಲ್ಲ. ಈ ಸಿನಿಮಾವನ್ನ ನೆನೆದು ಸುದೀಪ್ ಭಾವುಕ ಪತ್ರ ಬರೆದಿದ್ದಾರೆ. ನಟ ಸುದೀಪ್(Sudeep) ಅವರ ತಂದೆ ಸಂಜೀವ್ ಅವರು ಹೋಟೆಲ್ ಉದ್ಯಮದಲ್ಲಿದ್ರು. ಗಾಂಧಿ ನಗರದಲ್ಲೂ ಒಂದು ಹೋಟೆಲ್ ಇತ್ತು. ಹೀಗಾಗಿ, ಚಿತ್ರರಂಗದವರ ಒಡನಾಟ ಕಿಚ್ಚನಿಗೆ ಬೆಳೆಯಿತು. ಸುದೀಪ್ ಶ್ರೀಮಂತಿಕೆಯಿಂದ ಬೆಳೆದಿದ್ರೂ ಕೂಡ ನಟನಾಗಲು ಸಿಕ್ಕಾಪಟ್ಟೆ ಸ್ಟ್ರಗಲ್ ಪಟ್ಟಿದ್ದಾರೆ. ನಿರ್ದೇಶಕ ನಿರ್ಮಾಪಕರ ಮನೆಗೆ ಅಲೆದಿದ್ದಾರೆ. ಅವಕಾಶ ಕೊಡಿ ಅಂತ ಕೇಳಿದ್ದಾರೆ. ಹಾಗೆ ಕೇಳಿಕೊಂಡ ಅವಕಾಶಗಳಲ್ಲೊಂದು ಪ್ರೇಮದ ಕಾದಂಬರಿ ಧಾರವಾಹಿ. ಸುದೀಪ್ ಹಾಗು ಅಂಬರೀಶ್ ನಟನೆಯ ಬ್ರಹ್ಮ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಂತಾಗ ಪ್ರೇಮದ ಕಾದಂಬರಿ ಅನ್ನೋ ಆರವಾಹಿಯಲ್ಲೂ 8 ಎಪಿಸೋಡ್‌ಗಳಲ್ಲಿ ನಟಿಸಿದ್ದಾರೆ.
ಸುದೀಪ್ ಇಂದು ಸೂಪರ್ ಸ್ಟಾರ್ ನೂರು ಕೋಟಿ ಕ್ಲಬ್ ಸೇರೋ ಸಿನಿಮಾಗಳನ್ನ ಕೊಡುತ್ತಿರೋ ಸೂಪರ್ ಸ್ಟಾರ್. ಭಾರತದ 100 ಜನ ದೊಡ್ಡ ಸ್ಟಾರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರೋ ಕನ್ನಡದ ಹೀರೋ. ಆದ್ರೆ ಕಿಚ್ಚನಿಗೂ ಒಂದುಷ್ಟು ಸಿನಿಮಾಗಳು ಸೋಲು ಅಂದ್ರೆ ಏನು ಅಂತ ತೋರಿಸಿವೆ. ಆದ್ರು ಮತ್ತೆ ಮತ್ತೆ ಗೆದ್ದು ಬಂದಿದ್ದಾರೆ ಸುದೀಪ್. ಸುದೀಪ್ ಸಿನಿ ರಂಗಕ್ಕೆ ಬಂದ ಹೊಸ್ತಿಲಲ್ಲಿ ಕನ್ನಡ ಚಿತ್ರರಂಗದ ಮಂದಿ ಸುದೀಪ್‌ರನ್ನ ಐರೆನ್ ಲೆಗ್ ಅಂತ ಕರೆದಿದ್ರು. ಆದ್ರು ಆ ಐರನ್ ಲೆಗ್ಅನ್ನೇ ಗೋಲ್ಡನ್ ಲೆಗ್ ಮಾಡಿಕೊಂಡ ಬಾದ್ ಷಾ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕನ್ನಡದ ಚಿತ್ರರಂಗದಲ್ಲಿ ಯಾರೂ ಮಾಡದ ಹಲವು ಸಾಧನೆಗಳನ್ನ ಮಾಡಿದ್ದಾರೆ. ಬಹುಭಾಷಾ ನಟನಾಗಿ ಬೆಳೆದಿದ್ದಾರೆ. ನಿರ್ಮಾಪಕರ ಡಾರ್ಲಿಂಗ್ ಆಗಿದ್ದಾರೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..