ಹುಚ್ಚ ಸಿನಿಮಾ ರೋಚಕ ಕಥೆ ಬಿಚ್ಚಿಟ್ಟ ನಿರ್ಮಾಪಕ ರೆಹಮಾನ್! ಸಿನಿಮಾಗಾಗಿ ರೀಯಲ್ ಆಗಿ ತಲೆ ಬೋಳಿಸಿಕೊಂಡಿದ್ದ ಸುದೀಪ್‌ !

ಹುಚ್ಚ ಸಿನಿಮಾ ರೋಚಕ ಕಥೆ ಬಿಚ್ಚಿಟ್ಟ ನಿರ್ಮಾಪಕ ರೆಹಮಾನ್! ಸಿನಿಮಾಗಾಗಿ ರೀಯಲ್ ಆಗಿ ತಲೆ ಬೋಳಿಸಿಕೊಂಡಿದ್ದ ಸುದೀಪ್‌ !

Published : Jul 08, 2024, 12:11 PM ISTUpdated : Jul 08, 2024, 12:12 PM IST

ಸದ್ಯ ಸ್ಯಾಂಡಲ್‌ವುಡ್ ಬಾದ್ ಷಾ ಕಿಚ್ಚ ಸುದೀಪ್ ನಟನೆಯ 'ಹುಚ್ಚ' ಸಿನಿಮಾ 23 ವರ್ಷ ಪೂರೈಸಿದೆ. ಈ ಟೈಂನಲ್ಲಿ ಹುಚ್ಚ ಸಿನಿಮಾದ ಬಗ್ಗೆ ಹಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನ ನಿರ್ಮಾಪಕ ರೆಹಮಾನ್ ಬಿಚ್ಚಿಟ್ಟಿದ್ದಾರೆ. 

ತಮಿಳಿನ ಸೂಪರ್ ಹಿಟ್ 'ಸೇತು' ಸಿನಿಮಾ ರೀಮೆಕ್ ಹುಚ್ಚ ಸಿನಿಮಾ(Huchcha movie). ಈ ಸಿನಿಮಾದ ರಿಮೇಕ್ ರೈಟ್ಸ್ ಮೊದಲು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಬಳಿ ಇತ್ತು. ಶಿಲ್ಪಾ ಶ್ರೀನಿವಾಸ್ ಅವರೇ ಹೀರೋ ಆಗಿ ಹುಚ್ಚ ಸಿನಿಮಾ ಮಾಡೋಕೆ ರೆಡಿಯಾಗಿದ್ರು. ಆದ್ರೆ ಈ ಸಿನಿಮಾ ನೋಡಿ ಥ್ರಿಲ್ ಆಗಿದ್ದ ನಿರ್ಮಾಪಕ ರೆಹಮಾನ್ (Producer Rehman) ಹುಚ್ಚ ರೈಟ್ಸ್ಅನ್ನ ಶಿಲ್ಪಾ ಶ್ರೀನಿವಾಸ್‌ರಿಂದ ಪಡೆದುಕೊಂಡಿದ್ರಂತೆ. ಆ ನಂತರ ಈ ಕಥೆಯನ್ನ ರಿಯಲ್ ಸ್ಟಾರ್ ಉಪೇಂದ್ರ, ಶಿವಣ್ಣನಿಗೆ ಹೇಳಿದ್ರಂತೆ. ಆದ್ರೆ ತಲೆ ಬೋಳಿಸೋ ಸೀನ್ ಇದ್ದಿದ್ರಿಂದ ಇಬ್ಬರೂ ಈ ಕತೆಗೆ ಒಪ್ಪಿರಲಿಲ್ಲ. ಬಳಿಕ ಉಪೇಂದ್ರ, ಶಿವಣ್ಣ ರಿಜೆಕ್ಟ್ ಮಾಡಿದ್ದ ಹುಚ್ಚ ಸಿನಿಮಾ ಕಥೆ ಸುದೀಪ್ ಬಳಿ ಬಂದಿತ್ತು. ಆ ಸ್ಟೋರಿ ಸುದೀಪ್(Sudeep) ಹುಡುಕಿಕೊಂಡು ಬರೋಕೆ ಕಾರಣ ಡಾಕ್ಟರ್ ರಾಜ್ ಕುಮಾರ್. ಮೈಸೂರಿನಲ್ಲಿ ರಾಜ್‌ಕುಮಾರ್ ಕಾರ್ಯಕ್ರಮ ಒಂದರಲ್ಲಿ ಸುದೀಪ್ ತಂದೆ ಸರೋವರ ಸಂಜೀವ್ ಅವರು ನಿರ್ಮಾಪಕ ರೆಹಮಾನ್ಗೆ ಸಿಕ್ಕಿದ್ರಂತೆ. ಆ ನಂತ್ರ ಏನೆಲ್ಲಾ ಆಯ್ತು ಅಂತ ನಿರ್ಮಾಪಕರೇ ಹೇಳ್ತಾರೆ ಕೇಳಿ. ಹುಚ್ಚ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್.. ಆದ್ರೆ ಈ ಸಿನಿಮಾಗೆ ನಿರ್ದೇಶಕರಾಗಿ ಮೊದಲು ಆಯ್ಕೆ ಆಗಿದ್ದು ನಿರ್ದೇಶಕ ಎಸ್, ಮಹೇಂದರ್.. ಕೊನೆಗೆ ಸುದೀಪ್ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ರೆ ಚನ್ನಾಗಿರುತ್ತೆ ಅಂತ ನಿರ್ಮಾಪಕರ ಬಳಿ ಕೇಳಿಕೊಂಡಿದ್ರು. ಆ ನಂತರ ಕಿಚ್ಚನ ಒತ್ತಡಕ್ಕೆ ಮಣಿದು ಹುಚ್ಚ ಸಿನಿಮಾಗೆ ಓಂ ಪ್ರಕಾಶ್ ರಾವ್ ಫಿಕ್ಸ್ ಆಗಿದ್ರಂತೆ.

ಇದನ್ನೂ ವೀಕ್ಷಿಸಿ:  ಪವಿತ್ರಾ ಗೌಡಳನ್ನ ಕಣ್ಣೆತ್ತಿಯೂ ನೋಡೋ ಹಾಗಿಲ್ಲ..! ಕುಟುಂಬಸ್ಥರ ಕಂಡೀಷನ್‌ಗೆ ಒಪ್ಪಿದ್ರಾ ದರ್ಶನ್‌..?

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more