'ಚಿನ್ನಾರಿ ಮುತ್ತನ' ಬಾಳಲ್ಲಿ ಬಿರುಗಾಳಿ: ಅಡುಗೆ ಮಾಡೋದ್ರಲ್ಲಿ ಎಕ್ಸ್‌ಪರ್ಟ್‌ ಸ್ಪಂದನಾ !

'ಚಿನ್ನಾರಿ ಮುತ್ತನ' ಬಾಳಲ್ಲಿ ಬಿರುಗಾಳಿ: ಅಡುಗೆ ಮಾಡೋದ್ರಲ್ಲಿ ಎಕ್ಸ್‌ಪರ್ಟ್‌ ಸ್ಪಂದನಾ !

Published : Aug 08, 2023, 01:11 PM IST

ಚಿನ್ನಾರಿ ಮುತ್ತನ ಬಾಳಲ್ಲಿ ಬಿರುಗಾಳಿ ಬೀಸಿದೆ..ಜೀವಕ್ಕೆ ಜೀವ.. ಪ್ರಾಣಕ್ಕೆ ಪ್ರಾಣವಾಗಿದ್ದ ಸ್ಪಂದನಾ ವಿಜಯನ ಬಾಳಲ್ಲಿ ಶೋಕಗೀತೆ ಹಾಡಿದ್ದಾಳೆ.ವಿಧಿಯಾಟಕ್ಕೆ ಶರಣಾದ ಸ್ಪಂದನಾ ಪತಿಯ ನೆನಪಿನ ಪುಟದಲ್ಲಿ ಚಿರನಿದ್ರೆಗೆ ಜಾರಿದ್ದಾಳೆ. 
 

ನಟ ವಿಜಯ್‌ ರಾಘವೇಂದ್ರ( Vijay raghavendra) ಮತ್ತು ಸ್ಪಂದನಾ(spandana) 2007 ಆಗಸ್ಟ್‌ 26ರಂದು ಸಪ್ತಪದಿ ತುಳಿದರು. ಅಂದಿನಿಂದ ನನಗೆ ನೀನು, ನಿನಗೆ ನಾನು ಎನ್ನುವಂತೆ ಅನ್ಯೋನತೆಯಲ್ಲಿ ಬದುಕುತ್ತಿದ್ದರು. ಕಳೆದ ವರ್ಷ ತಮ್ಮ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಮ್ಮ ENGAGEMENT ಆಗಿ ಇಂದಿಗೆ ಹದಿನೈದು ವರ್ಷಗಳು ಎಂದು ಬರೆದು ಕೊಂಡಿದ್ದ ವಿಜಯರ್ ರಾಘವೇಂದ್ರ "ಬೇರೆ ಏನು ಬೇಕು ನೀನು ಇರುವಾಗ" ಎಂದು ಪತ್ನಿ ಜೊತೆಗಿನ ಫೋಟೋ ಶೇರ್ ಮಾಡಿದ್ದರು. ಈ ಹಾಲು-ಜೇನಿನ ಜೋಡಿ ಇನ್ನೇನು 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕಾಲಿಡಲು ಕೇವಲ 19ದಿನಗಳು ಬಾಕಿ ಇತ್ತು. ಅಷ್ಟರಲ್ಲಾಗಲೇ ಸ್ಪಂದನಾ ವಿಜಯ್ ಜೊತೆಗಿನ ಬಾಳಪಯಣಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಪತ್ನಿಯೇ ಸರ್ವಸ್ವ ಎಂದುಕೊಂಡಿದ್ದ ಪತಿಗೆ ಒಮ್ಮೆ ಮದುವೆ ಆನಿವರ್ಸರಿಗೆ ಕೈಮೇಲೆ ಪತಿ ಹೆಸರು ಟ್ಯಾಟೂ(Tattoo) ಹಾಕಿಸಿಕೊಂಡು ಸರ್ಪ್ರೈಸ್ ಕೊಟ್ಟಿದ್ದರಂತೆ ಸ್ಪಂದನಾ. ಅಡುಗೆ ಮಾಡೋದ್ರಲ್ಲಿ ಎಕ್ಸ್ಪರ್ಟ್ ಆಗಿದ್ದರಂತೆ.. ಅದ್ರಲ್ಲೂ ನಾನ್ ವೆಜ್ ಅಡುಗೆ ಮಾಡೋದ್ರಲ್ಲಿ ಎತ್ತಿದ ಕೈ. ಅಡುಗೆ ಮನೆಗೆ ಪತಿಗೆ ಎಂಟ್ರಿನೇ ಕೊಡ್ತಿರಲಿಲ್ವಂತೆ. ಅಡುಗೆ ಶೋನಲ್ಲಿ ಕೂಡ ಸ್ಪಂದನಾ ಅವರು ಪತಿ ಜೊತೆ ಅತಿಥಿಯಾಗಿ ಭಾಗವಹಿಸಿದ್ದರು. 2016 ರಲ್ಲಿ ರವಿಚಂದ್ರನ್ ನಿರ್ದೇಶನದ ಅಪೂರ್ವ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಜೊತೆ ಅಭಿನಯಿಸಿ, ತೆರೆ ಮೇಲೂ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ವೀಕ್ಷಿಸಿ:  ನಾಳೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅಂತ್ಯಕ್ರಿಯೆ: ಬಿ.ಕೆ. ಹರಿಪ್ರಸಾದ್‌

03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
Read more