Nov 28, 2023, 6:51 PM IST
ಬೆಂಗಳೂರು (ನ.28): ವಯೋಸಹಜ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದಿರುವ ಹಿರಿಯ ನಟಿ ಲೀಲಾವತಿ ಅವರ ನಿವಾಸಕ್ಕೆ ಮಂಗಳವಾರ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಭೇಟಿ ನೀಡಿದರು. ಈ ವೇಳೆ ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಡಾ.ರಾಜ್‌ಕುಮಾರ್ ಅವರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಲೀಲಾವತಿ ಅವರ ತಲೆಯನ್ನು ನೇವರಿಸಿದ ಶಿವರಾಜ್ ಕುಮಾರ್, 'ನಾನು ಶಿವಣ್ಣ ಬಂದಿದ್ದೀನಿ..' ಎಂದು ಹೇಳಿದ್ದಾರೆ. ಮನೆಯೊಂದ ಹೊರಬರುವ ಸಮಯದಲ್ಲಿ ವಿನೋದ್ ರಾಜ್ ಅವರ ಕೈ ಹಿಡಿದು ಶಿವರಾಜ್ ಕುಮಾರ್ ಆಗಮಿಸಿದ್ದಾರೆ.
ನಟ ಅರ್ಜುನ್ ಸರ್ಜಾ ಲೀಲಾವತಿ ಮಾತನಾಡಿಸುವಾಗ ಗಳಗಳನೇ ಅತ್ತ ವಿನೋದ್‌ರಾಜ್!
ಇನ್ನು ಶಿವರಾಜ್ ಕುಮಾರ್ ದಂಪತಿಗಳು ಮನೆಯ ಒಳಗೆ ಬಂದಾಗ ನಟ ವಿನೋದ್ ರಾಜ್, ಗೀತಾ ಶಿವರಾಜ್‌ಕುಮಾರ್ ಅವರ ಕಾಲಿಗೆ ಬಿದ್ದು ನಮಸ್ಕಾರ ಪಡೆದುಕೊಂಡರು. ಈ ವಿಡಿಯೋ ವಿಶೇಷವಾಗಿತ್ತು.