Sep 4, 2023, 12:01 PM IST
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ನೋಡಿ ಕಣ್ಣು ಒದ್ದೆ ಮಾಡಿಕೊಂಡು ಬಂದವರು ಅದೆಷ್ಟೋ ಮಂದಿ. ಆಗಲೂ ತೆರೆಮೇಲೆ ಜಾದು ಮಾಡಿದ್ದು ಇದೇ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಹೇಮಂತ್ ಎಂ ರಾವ್. ಈಗ 'ಸಪ್ತ ಸಾಗರದಾಚೆ ಎಲ್ಲೋ'(Sapta Sagaradaache Ello) ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕಳೆದ ಶುಭ ಶುಕ್ರವಾರ ತೆರೆ ಕಂಡಿರೋ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಭಾಕ್ಸಾಫಿಸ್ ಕಲೆಕ್ಷನ್ನಲ್ಲಿ ಶುಭ ಸುದ್ದಿ ಇದೆಯಾ ಅಂತ ನೀವ್ ಕೇಳಿದ್ರೆ ಅದಕ್ಕೆ ಉತ್ತರ ಎಸ್ಅನ್ನೋದಷ್ಟೆ ಸಿಗುತ್ತೆ. ಯಾಕಂದ್ರೆ ಎಂದಿನಂತೆ ರಕ್ಷಿತ್ ಶೆಟ್ಟಿ(Rakshit shetty) ಸಿನಿಮಾ ವೀಕೆಂಡ್ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಪ್ತ ಸಾರಗದಾಚೆ ಎಲ್ಲೋ ಪ್ರ್ಯೂರ್ ಲವ್ ಸ್ಟೋರಿ(Love story) ಸಿನಿಮಾ. ಈ ಚಿತ್ರಕ್ಕೆ ಮೊದಲ ದಿನ ಸಿಕ್ಕಿರೋ ರಿಯಾಕ್ಷನ್ ನೋಡಿ, ಬಾಕ್ಸಾಫೀಸ್‌ನಲ್ಲಿ ರಕ್ಷಿತ್ ಹೊಸ ರೆಕಾರ್ಡ್ ಮಾಡ್ತಾರೆ ಅನ್ನೋ ಟಾಕ್ ಶುರುವಾಗಿದೆ. ಯಾಕಂದ್ರೆ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್, ಪ್ರೀ ಪೇಯ್ಡ್ ಶೋ ಎಲ್ಲಾ ಸೇರಿ ಕರ್ನಾಟಕದಾದ್ಯಂತ ಮೊದಲ ದಿನ ಒಟ್ಟು 3 ಕೋಟಿ 60 ಲಕ್ಷ ಗಳಿಸಿತ್ತು. ಇದೇ ಟ್ರೆಂಡ್ ಎರಡನೇ ದಿನ ಮತ್ತು ಮೂರನೇ ದಿನವಾದ ಇಂದು ಕೂಡ ಇದೆ. ಹೀಗಾಗಿ ಗಾಂಧಿನಗರದ ಬಾಕ್ಸಾಫೀಸ್ ಪಂಡಿತರ ಒಂದು ವರಧಿ ಪ್ರಕಾರ ಈ ಸಿನಿಮಾ ಮೂರು ದಿನದಲ್ಲಿ ಒಟ್ಟು 10 ಕೋಟಿ ಕಲೆಕ್ಷನ್ ಮುಟ್ಟಿದೆಯಂತೆ.
ಇದನ್ನೂ ವೀಕ್ಷಿಸಿ: ಏನಿದು ಒಂದು ರಾಷ್ಟ್ರ.. ಒಂದು ಚುನಾವಣೆ..? ವಿಪಕ್ಷಗಳಿಂದ ವಿರೋಧ ಯಾಕೆ?