ಹೊಸ ವರ್ಷದ ಹೊಸ್ತಿಲಲ್ಲಿ ಸಂಜು ವೆಡ್ಸ್ ಗೀತಾ 2 ಸಾಂಗ್ ರಿಲೀಸ್..!

Dec 31, 2023, 8:47 AM IST

2011ರಲ್ಲಿ ಬಂದ ಸಂಜು ವೆಡ್ಸ್ ಗೀತಾ ಸಿನಿಮಾವನ್ನ ನಿರ್ದೇಶಕ ನಾಗಶೇಖರ್(Nagashekar) ಎಮೋಷನಲ್ ಆಗಿ ಕಟ್ಟಿಕೊಟ್ಟಿದ್ರು. ಈ ಸಿನಿಮಾದ ಕಥೆ ಎಷ್ಟು ಗಟ್ಟಿಯಾಗಿತ್ತೋ ಹಾಡುಗಳು ಪ್ರೇಮಿಗಳನ್ನ ಪ್ರೀತಿಯ ಕಡಲಲ್ಲಿ ತೇಲಿಸಿ ಬಟ್ಟಿದ್ವು. ಸಂಜು ವೆಡ್ಸ್ ಗೀತಾ ಬಾಕ್ಸಾಫೀಸ್‌ನಲ್ಲೂ ದೊಡ್ಡ ಸಕ್ಸಸ್ ಆಗಿದೆ. ಆ ಕಾಲಕ್ಕೆ ಈ ಸಿನಿಮಾ 4 ಕೋಟಿ ಕಲೆಕ್ಷನ್ ಮಾಡಿದೆ. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಫಿಲ್ಮ್‌ಫೇರ್ ಪ್ರಶಸ್ತಿಗಳು ಈ ಸಿನಿಮಾಗೆ ಸಿಕ್ಕಿವೆ. 2017 ರಲ್ಲಿ ಬಂಗಾಳಿ ಭಾಷೆಯಲ್ಲಿ ತೋಮೇಕ್ ಚಾಯ್ ಎಂದು ರಿಮೇಕ್ ಕೂಡ ಆಗಿತ್ತು. ಇದೀಗ ರಮ್ಯಾ ಶ್ರೀನಗರ ಕಿಟ್ಟಿಯ(Srinagara Kitty) ಸಂಜು ವೆಡ್ಸ್ ಗೀತಾ ಸಿನಿಮಾ ನೆಕ್ಟ್ಸ್ ವರ್ಷನ್ ಬರುತ್ತಿದೆ. ಈ ಭಾರಿ ಸಂಜು ಶ್ರೀನಗರ ಕಿಟ್ಟಿಯಾದ್ರೆ ಗೀತಾ ಆಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದಾರೆ. ಇನ್ನೇನು ಹೊಸ ವರ್ಷ ಬಂದೇ ಬಿಡ್ತು. ಈ ನ್ಯೂ ಈಯರ್‌ನನ್ನ ಕನ್ನಡ ಸಿನಿ ಪ್ರೇಕ್ಷಕರು ಲವ್ ಸಾಂಗ್ ಕೇಳ್ತಾ ವೆಲ್ಕಮ್ ಮಾಡಿಕೊಳ್ಳಬಹುದು. ಯಾಕಂದ್ರೆ ಒನ್ಸ್ ಅಗೈನ್ ನಾಗಶೇಕರ್ ನಿರ್ದೇಶನದಲ್ಲಿ ಸಿದ್ಧವಾಗ್ತಿರೋ ಸಂಜು ವೆಡ್ಸ್ ಗೀತಾ 2(Sanju Weds Geetha 2) ಸಿನಿಮಾದ ಪ್ರೇಮಗೀತೆ ರಿಲೀಸ್ ಆಗಿದೆ. ಸಂಜು ವೆಡ್ಸ್ ಗೀತಾ ಪಾರ್ಟ್ ಒನ್ ಸಿನಿಮಾ ಹಾಡುಗಳು ಎಂದಿಗೂ ಎವರ್ ಗ್ರೀನ್. ನರ್ದೇಶಕ ನಾಗಶೇಖರ್ ಯಾವ್ ಸಿನಿಮಾ ಬಂದ್ರು ಹಾಡುಗಳು ಸೂಪರ್ ಹಿಟ್ ಆಗ್ತಾವೆ. ಈಗ ಸಂಜ ವೆಡ್ಸ್ ಗೀತಾ ಪಾರ್ಟ್2 ಹಾಡುಗಳು ಒಂದೊಂದಾಗೆ ರಿವೀಲ್ ಆಗ್ತಿದ್ದು, ಈ ಬಂದಿರೋ ಲವ್ ಸಾಂಗ್ ಪ್ರೇಮಿಗಳ ಆಂಥೇಮ್ ಆಗ್ತಿದೆ. ಅಂತಹ ಅದ್ಭುತ ಮೆಲೋಡಿ ಲವ್ ಟ್ರ್ಯಾಕ್ ಈ ಸಾಂಗ್.

ಇದನ್ನೂ ವೀಕ್ಷಿಸಿ:  News Hour: 84 ಸೆಕೆಂಡ್‌ನಲ್ಲಿಯೇ ಮುಗಿಯಲಿದೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ!