Sep 4, 2023, 8:56 AM IST
ಸೆಪ್ಟೆಂಬರ್ 18ರಂದು ವಿಘ್ನ ನಿವಾರಕ ಗಣೇಶ ಹಬ್ಬ. ಈ ಗಜಮುಖನ ಫೆಸ್ಟಿವಲ್ ಮುಗಿಯುತ್ತಿದ್ದಂತೆ ಸೆಪ್ಟೆಂಬರ್ 28ಕ್ಕೆ ಬೆಳ್ಳಿತೆರೆ ಮೇಲೆ ದೊಡ್ಡ ಹಬ್ಬವೊಂದು ನಡೆಯಬೇಕಿತ್ತು. ಅದು ಸಲಾರ್ ಹಬ್ಬ. ಇದು ಅಂತಿಂತಾ ಹಬ್ಬ ಅಲ್ಲ ಪ್ಯಾನ್ ಇಂಡಿಯಾ ಹಬ್ಬ ಆಗಬೇಕಿತ್ತು. ಆದ್ರೆ ಈಗ ಟಾಲಿವುಡ್ 'ಡಾರ್ಲಿಂಗ್' ಫ್ಯಾನ್ಸ್‌ಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಟಿಟೌನ್ ಡಾರ್ಲಿಂಗ್ ಪ್ರಭಾಸ್(Prabhas), ಸಲಾರ್ (Salaar) ಸಕ್ಸಸ್ ಕೊಡುತ್ತೆ ಅಂತ ಕಾಯ್ತಾ ಇದ್ರು. ಆದ್ರೆ ಸಲಾರ್ ರಿಲೀಸ್ ಡೇಟ್ ಬಿಡುಗಡೆ ಆಗೋದೇ ಡೌಟ್ ಆಗಿದೆ. ಎಲ್ಲ ಕೆಲಸದಲ್ಲೂ ಪರ್ಫೆಕ್ಟ್ ಆಗಿರೋ ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್(Prashant Neel) ಹೇಳಿದ ಡೇಟ್‌ಗೆ ಸಲಾರ್ ಚಾಪ್ಟರ್ 1 ತೆರೆಗೆ ತರೋದ್ರಲ್ಲಿ ಮಾತ್ರ ಎಡವುತ್ತಿದ್ದಾರೆ. ಅದಕ್ಕೆ ಕಾರಣ ಸಲಾರ್ ವರ್ಕ್ ಇನ್ನೂ ಕಂಪ್ಲೀಟ್ ಆಗಿಲ್ಲ. ಸಲಾರ್‌ನಲ್ಲಿ ಸಿಜಿ ವರ್ಕ್ ಹೆಚ್ಚಿರೋದ್ರಿಂದ ಅದರ ಕೆಲಸ ನಡೆಯುತ್ತಿದೆ. ಹೇಳಿದ ಟೈಂಗೆ ಸಿಜಿ ಕೆಲದ ಕಂಪ್ಲೀಟ್ ಮಾಡೋಕೆ ಆಗುತ್ತಿಲ್ಲವಂತೆ. ಸಲಾರ್ ಮೇಲೆ ಸಿನಿ ಪ್ರೇಕ್ಷಕರಿಗೆ ಭಾರಿ ಭರವಸೆ ಇದೆ. ಯಾಕಂದ್ರೆ ಇದು ಕರ್ನಾಟಕ ಪ್ರೈಡ್ ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್ ಕಲ್ಪನೆಯಲ್ಲಿ ಸಿದ್ಧವಾಗಿರೋ ಸಿನಿಮಾ. ಈ ಸಿನಿಮಾದಿಂದಾದ್ರು ಪ್ರಭಾಸ್‌ಗೆ ಬಿಗ್ ಸಕ್ಸಸ್ ಸಿಗುತ್ತೆ ಅಂತ ಡಾರ್ಲಿಂಗ್ ಫ್ಯಾನ್ಸ್ ಕಾಯುತ್ತಿದ್ದಾರೆ. ಈಗ ದಿಢೀರ್ ಅಂತ ಕೊನೆ ಕ್ಷಣದಲ್ಲಿ ಸಲಾರ್ ಬಿಡುಗಡೆ ಮುಂದೂಡಿದ್ದು ಸರಿ ಅಲ್ಲ ಇದಕ್ಕೆ ಚಿತ್ರತಂಡ ಕ್ಷಮೆ ಕೇಳಬೇಕು ಅಂತ ಪ್ರಭಾಸ್ ಪ್ಯಾನ್ಸ್ ಸೋಷಿಯಲ್ ಮೀಡಿಯಾ ಟ್ರೆಂಡ್ ಮಾಡುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: Today Horoscope: ಈ ದಿನದ 12 ರಾಶಿಗಳ ಭವಿಷ್ಯ ಹೀಗಿದ್ದು, ಮಿಥುನ ರಾಶಿಯವರಿಗೆ ಲಾಭದಾಯಕ ದಿನ