KGF Chapter 2: ರಾಕಿ ಭಾಯ್ ಸಿನಿಮಾ ಹಿಂದಿರೋ ಸೀಕ್ರೆಟ್ ಸೂಪರ್ ಸ್ಟಾರ್ಸ್ ಯಾರು ಗೊತ್ತಾ?

KGF Chapter 2: ರಾಕಿ ಭಾಯ್ ಸಿನಿಮಾ ಹಿಂದಿರೋ ಸೀಕ್ರೆಟ್ ಸೂಪರ್ ಸ್ಟಾರ್ಸ್ ಯಾರು ಗೊತ್ತಾ?

Published : Apr 10, 2022, 06:59 PM ISTUpdated : Apr 11, 2022, 01:45 PM IST

ರಾಕಿಂಗ್ ಸ್ಟಾರ್ ಯಶ್ ಹೇಳಿದ್ರು ಕೆಜಿಎಫ್ ರಿಯಲ್ ಹೀರೋಸ್ ಸ್ಟೋರಿ. ಹಾಗಾದರೆ ಯಾರು ಆ ಸೀಕ್ರೆಟ್ ಸ್ಟಾರ್ಸ್..? ಇಲ್ಲಿದೆ ನೋಡಿ ತೂಫಾನ್ ಹಿಂದಿನ ಸೀಕ್ರೆಟ್ ಕಹಾನಿ.

ಇಡೀ ವಿಶ್ವವೇ 'ಕೆಜಿಎಫ್ 2' (KGF Chapter 2) ವೀಕ್ಷಿಸಲು ತುದಿಗಾಲಲ್ಲಿ ನಿಂತು ಕಾಯ್ತಾ ಇದೆ. ಅಭಿಮಾನಿಗಳು ಹಬ್ಬ ಆಚರಿಸೋಕೆ ಸಿದ್ಧವಾಗಿದ್ದಾರೆ. ಕನ್ನಡ ಅಷ್ಟೆ ಅಲ್ಲ. ಸಾಗರದಾಚೆಗೂ ಕನ್ನಡ ಕಂಪು ಹರಡಿದ್ದು, ದಶ ದಿಕ್ಕುಗಳಲ್ಲಿ ಕೆಜಿಎಫ್ ಸುನಾಮಿ, ಬಿರುಗಾಳಿ ಅನುಭವಿಸೋಕೆ ಪ್ರೇಕ್ಷಕರು ಚಾತಕ ಪಕ್ಷಿಯ ಹಾಗೆ ಕಾಯ್ತಾ ಇದ್ದಾರೆ. ಹೌದು! ವೀಕ್ಷಕ ಕೋಟಿ ಕಾಯ್ತಿದ್ದ ಸಿನಿಮಾ. ಸಪ್ತಸಾಗರದಾಚೆಗೂ ಕನ್ನಡ ಕಂಪು ಹಬ್ಬಿಸಿದ ಮೂವಿ. ಕಾಲಿವುಡ್ ಬಾಲಿವುಡ್ ಬಿಡಿ, ಹಾಲಿವುಡ್‌ನಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿರೋ ಏಕೈಕ ಸಿನಿಮಾ ಕೆಜಿಎಫ್ 2. ವರ್ಲ್ಡ್ ಮೊಸ್ಟ್ ವಾಂಟೆಡ್ ಸಿನಿಮಾ ಕೆಜಿಎಫ್ ಚಾಪ್ಟರ್ ಬರ್ತಿರೋದೇ ದಾಖಲೆ ಮಾಡೋಕೆ ಅನ್ನೋ ಹಾಗೆ ಮುನ್ನುಗ್ತಾನೇ ಇದೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ, ವಸಿಷ್ಠ ಸಿಂಹ ನಟಿಸಿರೋ ಚಿತ್ರವಿದು. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಆಗಿರೋ ಕಾರಣ ನಿರೀಕ್ಷೆಯೂ ಭಯಂಕರ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಎಂದ ಮೇಲೆ ಭರ್ಜರಿ ಪ್ರಚಾರವೂ ಸಹಜ. 

KGF 2 ತೆರೆಗಪ್ಪಳಿಸುವ ಮುನ್ನವೇ ಯಶ್‌ ಮುಂದಿನ ಸಿನಿಮಾ ರಿವೀಲ್?

ಹೀಗಾಗಿಯೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ ಕೆಜಿಎಫ್ ಚಾಪ್ಟರ್ 2. ರಿಲೀಸ್ ಆಗುವ ಮೊದಲೇ ವಿದೇಶದಲ್ಲಿ ಅತೀ ಹೆಚ್ಚು ಬುಕ್ಕಿಂಗ್ ಆದ ಸಿನಿಮಾ ಎಂಬ ದಾಖಲೆ ಬರೆದಿರೋದು ಕೆಜಿಎಫ್. ಅಮೆರಿಕವೊಂದರಲ್ಲೇ ವಾರಕ್ಕೂ ಮೊದಲೇ 2 ಕೋಟಿ ಬಿಸಿನೆಸ್ ಆಗಿದೆ.  'ಕೆಜಿಎಫ್ ಚಾಪ್ಟರ್ 2' ತೆರೆಗೆ ಬರೋಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಚಿತ್ರ ಸೃಷ್ಟಿ ಮಾಡಿರುವ ಹೈಪ್ ನೋಡಿದರೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಲಕ್ಷಣಗೊಚರವಾಗಿದೆ. 'ಕೆಜಿಎಫ್: ಚಾಪ್ಟರ್‌ ಕೂಡ ದೊಡ್ಡ ಮಟ್ಟದಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಈಗ ಎರಡನೇ ಚಾಪ್ಟರ್ ತೆರೆಗೆ ಬರುತ್ತಿದೆ. ಈಗಾಗಲೇ ಟ್ರೇಲರ್ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಆನ್‌ಲೈನ್ ಟಿಕೆಟ್ ಬುಕಿಂಗ್ ಆರಂಭವಾಗಲಿದೆ. ಅಭಿಮಾನಿಗಳು ಸಿನಿಮಾ ಟಿಕೆಟ್ ಕಾಯ್ದಿರಿಸೋಕೆ ಕಾದು ಕೂತಿದ್ದಾರೆ. 'ಕೆಜಿಎಫ್ ಚಾಪ್ಟರ್ 2' ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. 

KGF Chapter 2: ಯಶ್ ಸಿನಿಮಾದ 'ಗಗನ ನೀ..' ಸಾಂಗ್ ರಿಲೀಸ್!

ಹಿಂದಿ ಚಿತ್ರರಂಗದಿಂದ ಸಿನಿಮಾಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಚಿತ್ರತಂಡದವರು ಹಿಂದಿಯಲ್ಲಿ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ, ಬಾಲಿವುಡ್ ಅಂಗಳದಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದೆ. ಈಗಾಗಲೇ ಮುಂಬೈ, ಕೊಚ್ಚಿ, ಚೆನ್ನೈ ಮೊದಲಾದ ಕಡೆಗಳಲ್ಲಿ 'ಕೆಜಿಎಫ್: ಚಾಪ್ಪರ್ 2' ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಚೆನ್ನೈನಲ್ಲಿ ತಮಿಳು ಹಾಗೂ ಹಿಂದಿ ವರ್ಷನ್‌ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅದೇ ರೀತಿ ಕೇರಳದ ಕೊಚ್ಚಿಯಲ್ಲಿ, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದ್ದು, ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಮುಂಬೈ ಹಾಗೂ ದೆಹಲಿಯಲ್ಲಿ ಕೂಡ ಟಿಕೆಟ್ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಕೆಜಿಎಫ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇವರನ್ನೂ ಮೀರಿ ಪಂಚ ಪಾಂಡವರು ಈ ಸಿನಿಮಾವನ್ನ ಇನ್ನಷ್ಟು ಅಚ್ಚು ಕಟ್ಟಾಗಿ ಬರುವಂತೆ ಮಾಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿರೋ ಪ್ರತಿಯೊಬ್ಬರು ಅತಿರಥ ಮಹಾರಥರೇ. ಹಾಗಾದರೆ ಕೆಜಿಎಫ್ ಟೀಂ ಬಗ್ಗೆ ಯಶ್ ಏನ್ ಹೇಳ್ತಾರೆ ನೀವೇ ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more