
ಪಿಎ ಪ್ರೊಡಕ್ಷನ್ಸ್ ಅನ್ನೋ ನಿರ್ಮಾಣ ಸಂಸ್ಥೆ ಹುಟ್ಟಿಹಾಕಿರೋ ಪುಷ್ಪ ಅರುಣ್ ಕುಮಾರ್ ತಮ್ಮ ಸಂಸ್ಥೆಯ ಚೊಚ್ಚಲ ಸಿನಿಮಾ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಈಗ ಗ್ಲೋಬಲ್ ಸ್ಟಾರ್. ಅಷ್ಟೇ ಅಲ್ಲ ತಮ್ಮದೇ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆ ಮೂಲಕ ಬಹುಕೋಟಿ ವೆಚ್ಚದ ಸಿನಿಮಾಗಳನ್ನ ನಿರ್ಮಾಣ ಮಾಡ್ತಾ ಇದ್ದಾರೆ. ಈ ನಡುವೆ ಯಶ್ ತಾಯಿ ಪುಷ್ಪ ಅರುಣ್ಕುಮಾರ್ ಕೂಡ ತಮ್ಮದೇ ನಿರ್ಮಾಣ ಸಂಸ್ಥೆ ಓಪನ್ ಮಾಡಿ ಹೊಸ ಚಿತ್ರ ನಿರ್ಮಾಣ ಮಾಡಿದ್ದಾರೆ. ಆದ್ರೆ ಅಮ್ಮ ಮಗನನ್ನ ಬಿಟ್ಟು ಬೇರೆ ಹೀರೋ ಜೊತೆ ಸಿನಿಮಾ ಮಾಡಿರೋದೇಕೆ...? ಈ ಬಗ್ಗೆ ಅಭಿಮಾನಿಗಳಿಗೆ ಕಾಡ್ತಾ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಅಕ್ಷಯ ತೃತಿಯ ಶುಭ ದಿನ ರಾಕಿಂಗ್ ಸ್ಟಾರ್ ಯಶ್ ತಾಯಿ ತಮ್ಮ ಹೊಸ ನಿರ್ಮಾಣ ಸಂಸ್ಥೆಯ ಶುಭ ಸುದ್ದಿ ಕೊಟ್ಟಿದ್ದಾರೆ.
ಪಿಎ ಪ್ರೊಡಕ್ಷನ್ಸ್ ಅನ್ನೋ ನಿರ್ಮಾಣ ಸಂಸ್ಥೆ ಹುಟ್ಟಿಹಾಕಿರೋ ಪುಷ್ಪ ಅರುಣ್ ಕುಮಾರ್ ತಮ್ಮ ಸಂಸ್ಥೆಯ ಚೊಚ್ಚಲ ಸಿನಿಮಾ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. ಪಿ.ಎ ಪ್ರೊಡಕ್ಷನ್ಸ್ ನಿಂದ ಕೊತ್ತಲವಾಡಿ ಅನ್ನೋ ಸಿನಿಮಾ ರೆಡಿಯಾಗಿದೆ. ಹೊಸ ಪ್ರತಿಭಾನ್ವಿತ ತಂತ್ರಜ್ಞರು ಕೆಲಸ ಮಾಡಿರೋ ಈ ಸಿನಿಮಾಗೆ ದಿಯಾ ಖ್ಯಾತಿಯ ಪ್ರಥ್ವಿ ಅಂಬಾರ್ ನಾಯಕ. ಇಷ್ಟು ದಿನ ಚಾಕ್ಲೇಟ್ ಹೀರೋ ಆಗಿ ಮಿಂಚ್ತಾ ಇದ್ದ ಪ್ರಥ್ವಿ ಕೊತ್ತಲವಾಡಿ ಮೂಲಕ ಮಾಸ್ ಹೀರೋ ಆಗಿ ಮಿಂಚಲಿದ್ದಾರೆ. ಆದ್ರೆ ಈ ಸಿನಿಮಾ ಅನೌನ್ಸ್ ಆದ ಮೇಲೆ ಯಶ್ ಫ್ಯಾನ್ಸ್ ನಡುವೆ ಒಂದು ಪ್ರಶ್ನೆ ಹುಟ್ಟಿಕೊಂಡಿದೆ. ಯಶ್ ತಾಯಿ ಬೇರೆ ಯಾರೋ ಹೀರೋ ಜೊತೆಗೆ ಯಾಕೆ ಸಿನಿಮಾ ಮಾಡಬೇಕು.
ಖುದ್ದು ಅವರ ಮಗನಿಗಿಂತ ಹೀರೋ ಬೇಕಾ ಅನ್ನೋದು. ರಾಕಿಂಗ್ ಸ್ಟಾರ್ ಯಶ್ ಈಗ ಗ್ಲೋಬಲ್ ಸ್ಟಾರ್. ಕೆಜಿಎಫ್ ಬಳಿಕ ಇಡೀ ವಿಶ್ವದಾದ್ಯಂತ ಯಶ್‌ಗೆ ಫ್ಯಾನ್ ಫಾಲೋವಿಂಗ್ ಹುಟ್ಟಿಕೊಂಡಿದೆ. ಯಶ್ ಮುಂದಿನ ಸಿನಿಮಾ ಬಗ್ಗೆ ವರ್ಲ್ಡ್ ವೈಡ್ ಬೆಟ್ಟದಷ್ಟು ನಿರೀಕ್ಷೆ ಇದೆ. ಅಂತೆಯೇ ಯಶ್ ತುಂಬಾನೇ ಸಮಯ ತೆಗೆದುಕೊಂಡು ಟಾಕ್ಸಿಕ್ ಚಿತ್ರವನ್ನ ರೆಡಿ ಮಾಡ್ತಾ ಇದ್ದಾರೆ. ಇನ್ನೂ ಟಾಕ್ಸಿಕ್ ಬಿಟ್ರೆ ಯಶ್ ಕಮಿಟ್ ಆಗಿರೋ ಇನ್ನೊಂದು ಪ್ರಾಜೆಕ್ಟ್ ಎಂದರೆ ರಾಮಾಯಣ. ಎರಡು ಭಾಗಗಳಲ್ಲಿ ಮೂಡಿಬರಲಿರೋ ರಾಮಾಯಣದಲ್ಲಿ ಯಶ್ ರಾವಣನಾಗಿ ಮಿಂಚ್ತಾ ಇದ್ದಾರೆ. ಜೊತೆಗೆ ಈ ಎಪಿಪ್ ಸಿನಿಮಾಗೆ ಸಹನಿರ್ಮಾಪಕ ಕೂಡ ಆಗಿದ್ದಾರೆ.
ಈ ಎರಡೂ ಕೂಡ ದೊಡ್ಡ ಬಜೆಟ್ನ ದೊಡ್ಡ ಕ್ಯಾನ್ವಾಸ್ನ ಸಿನಿಮಾಗಳು. ಈ ಎರಡೂ ಸಿನಿಮಾಗಳು ತೆರೆಗೆ ಬರೋದು 2026 ಮತ್ತು 2027ರಲ್ಲಿ. ಈ ನಡುವೆ ಯಶ್ ತಾವು ಕನ್ನಡ ಸಿನಿರಂಗಕ್ಕಾಗಿ ಒಂದಿಷ್ಟು ಸಣ್ಣ ಬಜೆಟ್ನ ಒಳ್ಳೋಳ್ಳೆ ಸಿನಿಮ ಮಾಡ್ತಿನಿ ಅಂತ ಪ್ರಾಮೀಸ್ ಮಾಡಿದ್ರು. ಅದನ್ನ ಈಡೇರಿಸ್ತಾ ಇರೋದು ತಾಯಿಯ ಮೂಲಕ. ಹೌದು ಯಶ್ KGF ಬಳಿಕ ತುಂಬಾ ಗ್ಯಾಪ್ ತೆಗೆದುಕೊಂಡ್ರು. ದೊಡ್ಡ ಹೀರೋಗಳು ಹೀಗೆ ಸಿಕ್ಕಾಪಟ್ಟೆ ಸಮಯ ತೆಗೆದುಕೊಂಡು ಸಿನಿಮಾ ಮಾಡಿದ್ರೆ ಚಿತ್ರರಂಗದ ಗತಿಯೇನು ಅನ್ನೋ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರ ಕೊಡಲಿಕ್ಕೆ ಅಂತಾನೇ ಯಶ್ ತಮ್ಮ ತಾಯಿಯ ಮೂಲಕ ಸಣ್ಣ ಬಜೆಟ್ನ ಒಳ್ಳೆಯ ಕಂಟೆಂಟ್ ಉಳ್ಳ ಚಿತ್ರಗಳನ್ನ ನಿರ್ಮಿಸಲಿದ್ದಾರೆ.
ಹೌದು ಖುದ್ದು ತಾಯಿ ನಿರ್ಮಾಣ ಸಂಸ್ಥೆ ಹುಟ್ಟಿಹಾಕಿದ್ದಾರೆ. ಮೊದಲ ಚಿತ್ರ ನಿರ್ಮಿಸಿದ್ದಾರೆ. ಹೀಗಿರೋವಾಗ ಯಶ್ ಒಂದು ಪೋಸ್ಟ್ ಮಾಡಿ ಅಮ್ಮನ ಪ್ರಯತ್ನಕ್ಕೆ ಶುಭ ಹಾರೈಸಿಲ್ಲವಲ್ಲ ಅಂತ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಇದಕ್ಕೂ ಒಂದು ಕಾರಣ ಇದೆ. ತಮ್ಮ ತಾಯಿ ನಿರ್ಮಾಣದ ಸಿನಿಮಾಗಳು ಕಂಟೆಂಟ್ನಿಂದ ಸುದ್ದಿ ಮಾಡಲಿ. ತಮ್ಮ ಹೆಸರಿನಿಂದ ಅಲ್ಲ ಅನ್ನೋದು ಯಶ್ ಅನಿಸಿಕೆ. ಅಂತೆಯೇ ಎಲ್ಲವನ್ನೂ ಚಿತ್ರತಂಡಕ್ಕೆ ವಹಿಸಿಕೊಟ್ಟು ತಾವು ದೂರವೇ ಇದ್ದಾರೆ. ಸದ್ಯ ಅಮ್ಮನ ನಿರ್ಮಾಣದ ಚಿತ್ರಕ್ಕೆ ದೂರದಿಂದಲೇ ಹರಸಿರೋ ಯಶ್ ಮುಂದಿನ ದಿನಗಳಲ್ಲಿ ಬೆಂಬಲಕ್ಕೆ ನಿಲ್ಲೋದ್ರಲ್ಲಿ ಡೌಟೇ ಇಲ್ಲ. ಅಮ್ಮನ ಸಿನಿಮಾಗೆ ಹೀರೋ ಬೇರೆ ಯಾರಾದ್ರೆ ಏನಂತೆ.. ಅಮ್ಮನಿಗೆ ಮಗನೇ ಅಲ್ವಾ ಹೀರೋ.