ರಾಕಿಂಗ್ ಸ್ಟಾರ್ ರಂಗಿಗೆ ಇನ್ನೆಷ್ಟು ದಿನ ಕಾಯಬೇಕು ? ದಸರಾಗೆ ಅನೌನ್ಸ್ ಆಗುತ್ತಾ ರಾಕಿ 19ನೇ ಚಿತ್ರ?

ರಾಕಿಂಗ್ ಸ್ಟಾರ್ ರಂಗಿಗೆ ಇನ್ನೆಷ್ಟು ದಿನ ಕಾಯಬೇಕು ? ದಸರಾಗೆ ಅನೌನ್ಸ್ ಆಗುತ್ತಾ ರಾಕಿ 19ನೇ ಚಿತ್ರ?

Published : Sep 22, 2023, 09:43 AM IST

ಈ ವರ್ಷದ ಯುಗಾದಿ, ವರಮಹಾಲಕ್ಷ್ಮಿ ಮಾಡಿದ್ದಾಯ್ತು. ಆದ್ರೆ ಗಣೇಶ ಹಬ್ಬಕ್ಕೆ ನೋ ಎಕ್ಸ್ಕ್ಯೂಸ್, ಯಶ್19 ಅನೌನ್ಸ್ ಆಗುತ್ತೆ ಅಂತ ಆಸೆ ಪಟ್ಟಿದ್ದಷ್ಟೇ ಬಂತು. ಆದ್ರೆ ಯಶ್ 19 ಸುಳಿವೇ ಇಲ್ಲ. ಆದ್ರೆ ಈಗ ರಾಕಿಂಗ್ ಸ್ಟಾರ್ 19ನೇ ಸಿನಿಮಾ ಅನೌನ್ಸ್ಗೆ ವೇರಿ ಸೂನ್ ಅನ್ನೋ ಪೋಸ್ಟರ್ ಹರಿದಾಡ್ತಿದೆ. ಆ ದಿನ ಯಾವ್ದು ಅಂತ ಕೇಳಿದ್ರೆ ದಸರಾ ಹಬ್ಬ ಎನ್ನುತ್ತಿದ್ದಾರೆ ರಾಕಿಂಗ್ ಸ್ಟಾರ್ ಫ್ಯಾನ್ಸ್.

ಅಕ್ಟೋಬರ್‌ನಲ್ಲಿ ಯಶ್ 19(Yash 19) ಬಿಗ್ ಅನೌನ್ಸ್ಮೆಂಟ್ ಇದೆ. ಈ ಬಗ್ಗೆ ರಾಕಿ ಆಪ್ತ ಬಳಗವೇ ಎಲ್ಲಾ ಕಡೆ ಹೇಳಿಕೊಳ್ಳುತ್ತಿದ್ದಾರೆ. ಅದಕ್ಕೆ ಸರಿಯಾರಿ ಯಶ್ ಫ್ಯಾನ್ಸ್ ತಮ್ಮ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಕ್ಟೋಬರ್ ಬಿಗ್ ಅನೌನ್ಸ್ ಮೆಂಟ್ ಅಂತ ಟ್ರೆಂಡ್ ಮಾಡುತ್ತಿದ್ದಾರೆ. ಹೀಗಾಗಿ ಯಶ್ 19 ದಸರಾ(Dasara) ಧಮಾಕ ಪಕ್ಕಾ ಅಂತೆ. ಯಶ್(Yash) ಫ್ಯಾಮಿಲಿ ಜೊತೆ ಫೇವರಿಟ್ ಸ್ಪಾಟ್ ಗೋವಾದಲ್ಲಿ ಒಂದಷ್ಟು ದಿನ ಸ್ಪೆಂಡ್ ಮಾಡಿದ್ರು. ಗೋವಾದಲ್ಲಿ ಯಶ್ 19 ಶೂಟಿಂಗ್ ಆಗ್ತಿದೆ ಅಂತಲೂ ಹೇಳಿದ್ರು. ಆದ್ರೆ ಯಶ್ ನಿಜಕ್ಕು ಏನ್ ಮಾಡ್ತಿದ್ದಾರೆ ಅಂತ ಕೆದಕಿದ ನಮ್ಗೆ ರಾಕಿ ಈಗ ಫಾರಿನ್ನಲ್ಲಿದ್ದಾರೆ ಅನ್ನೋ ಉತ್ತರ ಸಿಕ್ಕಿದೆ. ಅದಕ್ಕೆ ಕಾರಣ ಯಶ್19 ಸಿನಿಮಾದ ವರ್ಕ್ ಅಂತೆ. ಯಶ್ 19 ಸಿನಿ ಮೇಲೆ ಈಗ ದೊಡ್ಡ ಕುತೂಹಲದ ಬೆಟ್ಟವೇ ಸೃಷ್ಟಿಯಾಗಿದೆ. ಕಾರಣ ಅದು ಗ್ಲೋಬಲ್ ಸಿನಿಮಾ ಅನ್ನೋದು. ಈಗ ಸಿಗ್ತಿರೋ ಮತ್ತೊಂದು ಎಕ್ಸ್ಕ್ಲ್ಯೂಸವ್ ಅಂದ್ರೆ ಈ ಸಿನಿಮಾದಲ್ಲಿ ತಮಿಳು, ತೆಲುಗು ಹಾಗು ಹಿಂದಿಯ ಬಿಗ್ ಸ್ಟಾರ್ಸ್ ಇರ್ತಾರೆ. ಜೊತೆಗೆ ಹಾಲಿವುಡ್ನ ಸ್ಟಾರ್ ಒಬ್ರು ನಟಿಸುತ್ತಾರಂತೆ. ರಾಷ್ಟ್ರ ಪ್ರಶಸ್ತಿ ವಿಜೇತೆ ಗೀತು ಮೋಹನ್ ದಾಸ್ ಯಶ್19 ಸಿನಿಮಾದಲ್ಲಿ ಗೋವಾ ಡ್ರಗ್ ಮಾಫಿಯಾ ಕತೆ ಹೇಳ್ತಿದ್ದಾರೆ. ಈ ಮೂವಿ  ಬಜೆಟ್ 100, 200ರಲ್ಲ. ಬರೋಬ್ಬರಿ 500 ಕೋಟಿಯಂತೆ. ಕೆಜಿಎಫ್ನಲ್ಲಿ 1250 ಕೋಟಿ ಗಳಿಸಿರೋ ರಾಕಿ ಗ್ಲೋಬಲ್ ಮಟ್ಟಕ್ಕೆ ಸಿದ್ಧವಾಗ್ತಿರೋ ಯಶ್19 ಸಿನಿಮಾದಿಂದ 5000 ಕೋಟಿ ಕಲೆಕ್ಷನ್ ಟಾರ್ಗೆಟ್ ಇಟ್ಟಿದ್ದಾರಂತೆ.

ಇದನ್ನೂ ವೀಕ್ಷಿಸಿ:  Today Horoscope: ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ? ಇಂದು ಈ ರಾಶಿಯವರಿಗೆ ಶುಭ ದಿನ

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
Read more