vuukle one pixel image

ಡಿವೈನ್ ಸ್ಟಾರ್ ರಿಷಬ್ ಹೆಗಲೇರಿತು ಮತ್ತೊಂದು ಹೆಗ್ಗಳಿಕೆ! ಯಾರೂ ಮಾಡದ ರೆಕಾರ್ಡ್ ಸೃಷ್ಟಿಸಿದ ಕಾಡು ಬೆಟ್ಟ ಶಿವ..!

Dec 16, 2023, 9:41 AM IST


ಕಾಂತಾರದಿಂದ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಆದ್ರು. 16 ಕೋಟಿ ಬಜೆಟ್‌ನ ಕಾಂತಾರ(Kantara) 450 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿತ್ತು. ಕರ್ನಾಟಕದಲ್ಲಿ(Karnataka) ಅತಿ ಹೆಚ್ಚು ಟಿಕೆಟ್‌ಗಳು ಸೇಲ್ ಆದ ಮೊದಲ ಕನ್ನಡ ಸಿನಿಮಾ ಕಾಂತಾರ ಆಯ್ತು. ಟಿವಿಯಲ್ಲೂ ಅತಿ ಹೆಚ್ಚು ರೇಟಿಂಗ್ ತಂದುಕೊಟ್ಟ ಸಿನಿಮಾ ಕಾಂತಾರ ಅನ್ನೋ ಹೆಗ್ಗಳಿಕೆ ಪಡೀತು. ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡದ ಸಿನಿಮಾ ಕಾಂತಾರ ಆಯ್ತು. ಇಷ್ಟೆ ಅಲ್ಲ ಇನ್ನು ಹತ್ತು ಹಲವು ರೆಕಾರ್ಡ್‌ಗಳು(Record) ಕಾಂತಾರ ಹೆಸರಲ್ಲಿವೆ. ಈಗ ಆ ರೆಕಾರ್ಡ್‌ಗಳ ಲಿಸ್ಟ್‌ಗೆ ಮತ್ತೊಂದು ರೆಕಾರ್ಡ್ ಸೇರಿದೆ. ಆ ರೆಕಾರ್ಡ್ ಈಗ ಡಿವೈನ್ ಸ್ಟಾರ್ ರಿಷಬ್(Rishabh Shetty) ಹೆಗಲೇರಿದೆ. ಈ ವರ್ಷ ಒಟಿಟಿಯ ನೆಟ್ಫ್ಲಿಕ್ಸ್(Netflix) ಅತಿ ಹೆಚ್ಚು ವೀಕ್ಷೆಣೆ ಕಂಡ ಸಿನಿಮಾಗಳ ಲಿಸ್ಟ್ ಒಂದನ್ನ ರಿಲೀಸ್ ಮಾಡಿದೆ. ನೆಟ್ ಫಿಕ್ಸ್ ಅಂದ್ರೆ ವರ್ಲ್ಡ್ ವೈಡ್ ಸಿನಿಮಾಗಳ ದೊಡ್ಡ ಪ್ರಪಂಚ. ಇಲ್ಲಿ ವಿಶ್ವ ಸಿನಿ ಜಗತ್ತು ಸಿಗುತ್ತೆ. ಆದ್ರೆ ಅವರಿಗೆಲ್ಲಾ ಕಾಂಪೀಟ್ ಮಾಡಿರೋ ಏಕೈಕಾ ಹೀರೋ ರಿಷಬ್ ಶೆಟ್ಟಿ ಅದು ಹೇಗೆ ಗೊತ್ತಾ.? ನೆಟ್ಫಿಕ್ಸ್ನಲ್ಲಿ ಜನವರಿಯಿಂದ ಜೂನ್‌ವರೆಗೂ ಅತಿ ಹೆಚ್ಚು ಗಂಟೆಗಳ ಕಾಲ ವೀಕ್ಷಣೆ ಕಂಡ ಮೊದಲ ಸಿನಿಮಾ ಕಾಂತಾರ ಆಗಿದೆ. ಕಾಂತಾರ ಸಿನಿಮಾ ಬರೋಬ್ಬರಿ 68 ಲಕ್ಷ ನಿಮಿಷಗಳ ಕಾಲ ನೆಟ್ಫಿಕ್ಸ್ನಲ್ಲಿ ಪ್ರದರ್ಶನ ಆಗಿದೆ. ಈ ಮೂಲಕ ಒಟಿಟಿಯಲ್ಲೂ ಕಾಂತಾರ ದೊಡ್ಡ ರೆಕಾರ್ಡ್ ಬರೆದಿದೆ. ಈ ಮೂಲಕ ಬರೀ ಪರಭಾಷಾ ಸಿನಿಮಾಗಳಿಂದಲೇ ತುಂಬಿರೋ ನೆಟ್ಪ್ಲಿಕ್ಸ್ ಇನ್ಮುಂದೆ ಕನ್ನಡ ಸಿನಿಮಾಗಳ ಕಡೆಗೂ ಬೆರಗುಗಣ್ಣಿನಿಂದ ನೋಡುವಂತಾಗಿದೆ. 

ಇದನ್ನೂ ವೀಕ್ಷಿಸಿ:  ಹುಟ್ಟು ಹಬ್ಬದ ದಿನವೇ ಸಿಎಂ ಆದ ಭಜನ್ ಲಾಲ್ ಶರ್ಮಾ..? ಯಾರು ಇವರು, ಹಿನ್ನೆಲೆ ಏನು ?