ಕೆಜಿಎಫ್ ಕಿಂಗ್ ಯಶ್ ಜಾಗಕ್ಕೆ ಡಿವೈನ್ ಸ್ಟಾರ್ ಎಂಟ್ರಿ..! ರಾಕಿ ಭಾಯ್ ಅಚ್ಚು ಮೆಚ್ಚಿನ ಜಾಹೀರಾತು ಕಿತ್ತುಕೊಂಡ ರಿಷಬ್..!

ಕೆಜಿಎಫ್ ಕಿಂಗ್ ಯಶ್ ಜಾಗಕ್ಕೆ ಡಿವೈನ್ ಸ್ಟಾರ್ ಎಂಟ್ರಿ..! ರಾಕಿ ಭಾಯ್ ಅಚ್ಚು ಮೆಚ್ಚಿನ ಜಾಹೀರಾತು ಕಿತ್ತುಕೊಂಡ ರಿಷಬ್..!

Published : Jan 27, 2024, 10:05 AM IST

ರಾಕಿಂಗ್ ಸ್ಟಾರ್ ಯಶ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ.ಇಬ್ಬರು ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡುತ್ತಿರೋ ಸ್ಯಾಂಡಲ್‌ವುಡ್‌ನ ಮುಕುಟ ಮಣಿಗಳು. ಯಶ್ ಒಂದು ತೂಕ ಆದ್ರೆ ರಿಷಬ್ ಶೆಟ್ಟಿಯದ್ದು ಮತ್ತೊಂದು ತೂಕ. ಈ ಕಿಲಾಡಿ ಜೋಡಿ ಇಡೀ ಭರತೀಯ ಸಿನಿಮಾ ರಂಗವೇ ತಿರುಗಿ ನೋಡುವಂತೆ ಮಾಡಿದ್ದಾರೆ. 

ಕೆಜಿಎಫ್ ಸಿನಿಮಾ ಬಂದ ಮೇಲೆ ಯಶ್ ಜಾಹೀರಾತು ಲೋಕದಲ್ಲಿ ಮಿಂಚಿ ಮೆರೆದಾಡುತ್ತಿದ್ದಾರೆ. ದೊಡ್ಡ ದೊಡ್ಡ ಬ್ರ್ಯಾಂಡ್ ಕಂಪೆನಿಗಳು ಯಶ್ ಬೆನ್ನ ಹಿಂದೆ ಬಿದ್ದಿವೆ. ಆದ್ರೆ ರಾಕಿ ಮಾತ್ರ ಅಳೆದು ತೂಗಿ ತನಗಿಷ್ಟವಾದ ಜಾಹೀರಾತನ್ನ(Advertisement) ಆಯ್ಕೆ ಮಾಡಿಕೊಂಡಿದ್ರು ಅದರಲ್ಲೊಂದು ರಾಮ್ ರಾಜ್ ಬಟ್ಟೆ ಬ್ರ್ಯಾಂಡ್. ರಾಮ್ ರಾಜ್ (Ramraj) ಪಂಚೆಗಳು ಮತ್ತು ಶರ್ಟ್‌ಗಳು ಅಂತ ಯಶ್ ಜಾಹೀರಾತು ನೀಡುತ್ತಿದ್ದಂತೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಅಷ್ಟೆ ಅಲ್ಲ ಮಾರ್ಕೇಟ್ನಲ್ಲಿ ರಾಮ್ ರಾಜ್ ಪ್ರಾಡೆಕ್ಟ್ಗೆ ಭಾರಿ ಬೇಡಿಕೆ ಬಂದಿತ್ತು. ಇದೀಗ ಕೆಜಿಎಫ್ ಕಿಂಗ್ ಇದ್ದ ರಾಮರಾಜ್ ಜಾಗಕ್ಕೆ ಡಿವೈನ್ ಸ್ಟಾರ್ ರಿಷಬ್(Rishab shetty) ಎಂಟ್ರಿ ಆಗಿದ್ದಾರೆ. ರಾಕಿ ಭಾಯ್(Yash) ಅಚ್ಚು ಮೆಚ್ಚಿನ ರಾಮ್ ರಾಜ್ ಜಾಹೀರಾತನ್ನ ನಟ ರಿಷಬ್ ಶೆಟ್ಟಿ ಕಿತ್ತುಕೊಂಡಿದ್ದಾರೆ. ರಾಮ್ ರಾಜ್ ಬ್ರ್ಯಾಂಡ್ ರಿಷಬ್ ಶೆಟ್ಟಿ ಪಾಲಾಗಿದ್ದು ಯಾಕೆ ಗೊತ್ತಾ.? ಶೆಟ್ರು ಪಂಚೆ ಸ್ಟಾರ್ ಆಗಿದ್ದು. ಕಾಂತಾರ ಸಿನಿಮಾದಲ್ಲಿ ಕಾಡು ಬೆಟ್ಟದ ಶಿವನಾಗಿದ್ದ ರಿಷಬ್ ಇಡೀ ಸಿನಿಮಾ ಪಂಚೆಯಲ್ಲಿದ್ರು. ಈ ಸಿನಿಮಾ ವರ್ಕ್ ಶುರುವಾದ್ಮೇಲೆ ಎಲ್ಲಾ ಕಡೆ ಪಂಚೆಯಲ್ಲೇ ಓಡಾಡುತ್ತಿದ್ರು. ಇಡೀ ದೇಶ ವಿದೇಶವನ್ನ ಪಂಚೆ ತೊಟ್ಟೇ ಓಡಾಡಿದ್ರು. ಹೀಗಾಗಿ ರಿಷಬ್ಗೆ ರಾಮ್ ರಾಜ್ ಬಟ್ಟಿಗಳಿಗೆ ಬ್ರ್ಯಾಂಡ್ ಅಂಬಾಸೀಡರ್ ಆಗೋ ಅವಕಾಶ ಬಂದಿದೆ. ಈ ರಾಮ್ ರಾಜ್ ಬ್ರ್ಯಾಂಡ್ಗೆ ರಿಷಬ್ ಒಂದುವರೆ ಕೋಟಿ ಸಂಭಾವನೆ ಪಡೆದಿದ್ದಾರೆ ಅಂತ ಹೇಳಲಾಗ್ತಿದೆ.

ಇದನ್ನೂ ವೀಕ್ಷಿಸಿ:  Bachelor Party : ಬೆಳ್ಳಿತೆರೆ ಮೇಲೆ 'ಬ್ಯಾಚುಲರ್ ಪಾರ್ಟಿ' ಹಾವಳಿ..! ಹೇಗಿದೆ ಗೊತ್ತಾ ಯೋಗಿ-ದಿಗಂತ್ ಜೋಡಿ ಮೋಡಿ..?

24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
Read more