
ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪಿಗಳ ಮೇಲೆ ಕೋರ್ಟ್ನಲ್ಲಿ ದೋಷಾರೋಪ ಹೊರೆಸಲಾಗ್ತಾ ಇದೆ. ಈ ನಡುವೆ ಎರಡೂವರೇ ತಿಂಗಳಿಂದ ಜೈಲಿನಲ್ಲಿರೋ ದಾಸನ ಸ್ಥಿತಿ ಏನಾಗಿದೆ ಅನ್ನೋ ಶಾಕಿಂಗ್ ವಿಷ್ಯ ಬೇರೆ ಹೊರಬಂದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪಿಗಳ ಮೇಲೆ ಕೋರ್ಟ್ನಲ್ಲಿ ದೋಷಾರೋಪ ಹೊರೆಸಲಾಗ್ತಾ ಇದೆ. ಈ ನಡುವೆ ಎರಡೂವರೇ ತಿಂಗಳಿಂದ ಜೈಲಿನಲ್ಲಿರೋ ದಾಸನ ಸ್ಥಿತಿ ಏನಾಗಿದೆ ಅನ್ನೋ ಶಾಕಿಂಗ್ ವಿಷ್ಯ ಬೇರೆ ಹೊರಬಂದಿದೆ. ಎರಡೂವರೇ ತಿಂಗಳು ಜೈಲು ಸಜೆಯಲ್ಲಿ ಕಳೆದ ಗಜ 10 ಕೆಜಿ ತೂಕ ಕಳೆದುಕೊಂಡಿದ್ದಾನಂತೆ. 20X30 ಕೋಣೆಯಲ್ಲಿ ದಾಸನಿಗೆ ಕ್ಷಣ ಕ್ಷಣ ನರಕ ದರ್ಶನವಾಗ್ತಾ ಇದೆ. ಯೆಸ್ ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಸೇರಿದ ದರ್ಶನ್, ಎರಡೂವರೆ ತಿಂಗಳು ಜೈಲು ಸಜಾ ಅನುಭವಿಸಿ ಆಗಿದೆ. ಆರಂಭದಲ್ಲಿ ದರ್ಶನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡೋದಕ್ಕೆ ಜೈಲು ಅಧಿಕಾರಿಗಳು ಮುಂದಾಗಿದ್ರು. ಆದ್ರೆ ದಾಸನ ಪರ ವಕೀಲರು ಕೋರ್ಟ್ನಲ್ಲಿ ಫೈಟ್ ಮಾಡಿ ಅದನ್ನ ತಪ್ಪಿಸಿದ್ರು.
ಆದ್ರೆ ಈ ಸಾರಿ ಪರಪ್ಪನ ಅಗ್ರಹಾರದಲ್ಲೂ ದಾಸನಿಗೆ ನರಕ ದರ್ಶನವಾಗ್ತಾ ಇದೆ. ಕಳೆದ ಸಾರಿ ರೌಡಿಗಳ ಜೊತೆ ಸೇರಿ ಪಾರ್ಟಿ ಮಾಡಿದ್ದ ದರ್ಶನ್ಗೆ ಈ ಸಾರಿ ಕಟ್ಟುನಿಟ್ಟಿನ ಟ್ರೀಟ್ಮೆಂಟ್ ನೀಡಲಾಗಿದೆ. ಜಸ್ಟ್ ದಿಂಬು, ಹಾಸಿಗೆಗೆ ನಾಲ್ಕಾರು ಬಾರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ನೋಡಿದ್ರೆ ದರ್ಶನ್ ಸ್ಥಿತಿ ಹೇಗಿದೆ ಅನ್ನೋದು ನಿಮಗೆ ಗೊತ್ತಾಗಿರಬಹುದು. ಹೌದು ಕಳೆದ ಎರಡೂವರೇ ತಿಂಗಳಲ್ಲಿ ದರ್ಶನ್ ತೂಕ ಹತ್ತು ಕೆಜಿ ಕಡಿಮೆಯಾಗಿದೆಯಂತೆ. ಕ್ವಾರಂಟೈನ್ ಸೆಲ್‌ನಲ್ಲಿರುವ ದರ್ಶನ್ ಮಾನಸಿಕ ಒತ್ತಡದಿಂದ ದಿನೇ ದಿನೇ ಸಣ್ಣ ಆಗ್ತಾ ಇದ್ದಾರಂತೆ. ಪರಪ್ಪನ ಅಗ್ರಹಾರದಲ್ಲಿ 20X30 ಅಳತೆಯ ಸೆಲ್ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ನ ಇರಿಸಲಾಗಿದೆ.
ದರ್ಶನ್ ಜತೆ ಅನು, ಜಗದೀಶ್, ಪ್ರದೋಶ್, ನಾಗರಾಜ್, ಲಕ್ಷ್ಮಣ್ ಇದ್ದಾರೆ. ದರ್ಶನ್ ಸೆಲ್ನಲ್ಲಿ ಟಿವಿ ಇಲ್ಲ, ಎರಡು ಕ್ಯಾಮರಾಗಳನ್ನ ಅಳವಡಿಕೆ ಮಾಡಲಾಗಿದೆ. ದರ್ಶನ್ ಅಂಡ್ ಗ್ಯಾಂಗ್ ಪ್ರತಿ ನಡೆಯನ್ನೂ ಕ್ಯಾಮೆರಾದಲ್ಲಿ ದಾಖಲು ಮಾಡಲಾಗ್ತಾ ಇದೆ. ಬ್ಯಾರಕ್‌ನಲ್ಲಿ ಕೆಲಸ ಮಾಡುವ ನಾಲ್ವರಿಗೆ ಬಾಡಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಶಿಫ್ಟ್ ವೈಸ್ನಲ್ಲಿ ಜೈಲು ಸಿಬ್ಬಂದಿ ಭದ್ರತೆ ಕೆಲಸ ನಿರ್ವಹಿಸ್ತಾ ಇದ್ದಾರೆ. ಶಿಫ್ಟ್ ಮುಗಿಯುವವರೆಗೂ ಬಾಡಿಕ್ಯಾಮರಾ ಕಾರ್ಯ ನಿರ್ವಹಿಸುತ್ತೆ. ಶಿಫ್ಟ್ ಮುಗಿದ ಬಳಿಕ ರೆಕಾರ್ಡ್ ಆದ ವಿಡಿಯೋ ಅಪ್ಲೋಡ್ ಮಾಡಲಾಗುತ್ತೆ. ಸೋ ಯಾವುದೇ ಕಾರಣಕ್ಕೂ ದರ್ಶನ್ಗೆ ಹೆಚ್ಚಿನ ಸೌಲತ್ತು ಸಿಗೋದಕ್ಕೆ ಸಾಧ್ಯವೇ ಇಲ್ಲದಂಥಾ ಪರಿಸ್ಥಿತಿ ಜೈಲಿನಲ್ಲಿದೆ. ಇನ್ನೂ ಹಾಸಿಗೆ ಮತ್ತು ದಿಂಬಿನ ಬೇಡಿಕೆ ತಿರಸ್ಕೃತಗೊಂಡಿದ್ದು ದರ್ಶನ್ನ ಚಿಂತೆಗೆ ತಳ್ಳಿದೆ. ಜೈಲು ಎಂಥವರನ್ನೂ ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದು ಹೈರಾಣು ಮಾಡಿಬಿಡುತ್ತೆ.
ಜೈಲಿನ ಒಂಟಿತನ ಮಾನಸಿಕವಾಗಿ ಕುಗ್ಗಿಸುತ್ತೆ. ಈ ಹಿಂದೆ ದರ್ಶನ್ , ನಾನು ಇಲ್ಲಿಯೇ ಸಾಯಬೇಕಾ ಅಂತ ಕೂಗಾಡಿದ್ದ ವಿಷ್ಯ ಸುದ್ದಿಯಾಗಿತ್ತು. ಖಂಡಿತ ಸ್ವಾಂತಂತ್ರ ಕಳೆದುಕೊಂಡ ವ್ಯಕ್ತಿ ಹಾಗೆ ಮಾನಸಿಕವಾಗಿ ಸ್ಥಿಮಿತ ಕಳೆದುಕೊಳ್ತಾನೆ. ದರ್ಶನ್ ವಿಚಾರದಲ್ಲೂ ಆದೇ ಆಗ್ತಾ ಇದೆ. ಹೊರಗಿದ್ದಾಗ ಜಿಮ್ ಮಾಡ್ತಾ, ಶೂಟಿಂಗ್ಗೆ ಹೋಗ್ತಾ, ಸೊಗಸಾದ ಊಟ ಮಾಡ್ತಾ, ಸಂಜೆ ಪಾರ್ಟಿ ಮಾಡ್ತಾ ಖುಷಿ ಖುಷಿಯಾಗಿ ಇದ್ದ ದರ್ಶನ್ ದೇಹ ಮತ್ತು ಮನಸ್ಸು ಬಂಧಿಖಾನೆಯಲ್ಲಿ ಕುಗ್ಗಿ ಹೋಗಿವೆ. ಬೆನ್ನುನೋವು ಬೇರೆ ಬೆನ್ನು ಬಿದ್ದಿರೋದ್ರಿಂದ ದರ್ಶನ್ ದೈಹಿಕವಾಗಿಯೂ ಬಳಲಿದಂತೆ ಕಾಣ್ತಾ ಇದೆ. ಜೊತೆಗಾರರ ಜೊತೆಗೆ ಹೆಚ್ಚು ಬೆರೆಯದೇ ದಾಸ ಒಬ್ಬಂಟಿಯಾಗೇ ಇರ್ತಾನಂತೆ. ಈ ನಡುವೆ ದರ್ಶನ್ ತೂಕ ಗಣನೀಯವಾಗಿ ಕಡಿಮೆ ಆಗಿದೆ. 20X30 ಜೈಲು ಕೋಣೆ ದಾಸನಿಗೆ ನರಕ ದರ್ಶನ ಮಾಡಿಸ್ತಾ ಇದೆ.