
Real Star Upendra Launches I Am GOD Trailer in Mysuru ಮೈಸೂರಿನ ಲಲಿತಮಹಲ್ ಪ್ಯಾಲೇಸ್‌ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು 'I Am GOD' ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದರು.
ಮೈಸೂರು (ಅ.29): ಸಾಂಸ್ಕೃತಿಕ ನಗರಿ ಮೈಸೂರಿನ ಐತಿಹಾಸಿಕ ಲಲಿತಮಹಲ್ ಪ್ಯಾಲೇಸ್‌ನಲ್ಲಿ, ರಿಯಲ್ ಸ್ಟಾರ್ ಉಪೇಂದ್ರ ಅವರು 'I Am GOD' ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದೆ. ಉಪೇಂದ್ರ ಗರಡಿಯಲ್ಲೇ ಪಳಗಿರುವ ನಟ-ನಿರ್ದೇಶಕ ರವಿ ಗೌಡ ಅವರು ಈ ವಿಭಿನ್ನ ಕಥಾಹಂದರದ ಚಿತ್ರಕ್ಕೆ ಆಕ್ಷನ್-ಕಟ್ ಸಿನಿಮಾಗೆ ಹೇಳಿದ್ದಾರೆ.
ಐ ಯಾಮ್ ಗಾಡ್ ಶೀರ್ಷಿಕೆ ಇಡುವುದಕ್ಕೆ ಧೈರ್ಯ ಬೇಕು: ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು?
ಉಪೇಂದ್ರ ಅವರು ಚಿತ್ರದ ಟ್ರೈಲರ್‌ನೊಂದಿಗೆ ಎರಡು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಹಿರಿಯ ನಟ ಅವಿನಾಶ್, ನಟಿ ವಿಜೇತಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ, ಟ್ರೈಲರ್‌ಗೆ ಮೆಚ್ಚುಗೆ ಸೂಚಿಸಿದರು. ಈ ಬಹು ನಿರೀಕ್ಷಿತ ಸಿನಿಮಾ ನವೆಂಬರ್ 7 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.