ಚಿತ್ರರಂಗದಲ್ಲಿ ಡೈರೆಕ್ಟರ್ ಆರ್. ಚಂದ್ರು ಹೊಸ ಸಾಹಸ..! RC ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಆರಂಭ!

Jan 25, 2024, 10:33 AM IST

ಇಷ್ಟಕ್ಕೆ ನಿಲ್ಲದ ಆರ್. ಚಂದ್ರು ಸಾಹಸ ಕೊನೆಗೆ ಕಬ್ಜ ಅನ್ನೋ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆಲ್ಲುವಂತಾಯ್ತು. ಇದೀಗ ಈ ಸ್ಟಾರ್ ಡೈರೆಕ್ಟರ್ ಚಿತ್ರರಂಗದಲ್ಲಿ ಮತ್ತೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಡೈರೆಕ್ಟರ್ ಆರ್ ಚಂದ್ರು(Director R Chandru) ಈಗ ನಿರ್ಮಾಪಕ ಆಗುತ್ತಿದ್ದಾರೆ. ಹೊಸ ಟ್ಯಾಲೆಂಟ್‌ಗಳಿಂದ ಹಿಡಿದು ಬಿಗ್ ಬಜೆಟ್ ಸಿನಿಮಾಗಳ(Movies) ನಿರ್ಮಾಣ ಮಾಡಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ಕೊಡೋ ತಯಾರಿ ಮಾಡಿದ್ದಾರೆ. ಅದರ ಫಲವೇ ಆರ್ ಸಿ ಸ್ಟುಡಿಯೋಸ್(RC Studios) ನಿರ್ಮಾಣ ಸಂಸ್ಥೆ ಉದಯ. ಆರ್ ಸಿ ಅಂದ್ರೆ ಆರ್ ಚಂದ್ರು ಸ್ಟುಡಿಯೋಸ್ ಅಂತ ಅರ್ಥ. ಈ ನಿರ್ಮಾಣ ಸಂಸ್ಥೆಯನ್ನ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯನವರು ಲಾಂಚ್ ಮಾಡಿದ್ರು. ಆರ್ ಚಂದ್ರು ಸಾಹಸಗಳನ್ನೆ ಮಾಡ್ತಾ ಬಂದಿದ್ದಾರೆ. ತಾಜ್‌ ಮಹಲ್ ಚಿತ್ರದಿಂದ ಹಿಡಿದು ಕಬ್ಜ ವರೆಗೂ ನಡೆದಿದ್ದೆಲ್ಲ ಚಂದ್ರುರ ಸಾಹಸವೇ. ಇದೀಗ ಆರ್ ಚಂದ್ರು ಸ್ಟುಡಿಯೋಸ್ ಕಟ್ಟಿರೋ ಈ ಡೈರೆಕ್ಟರ್ ಆ ನಿರ್ಮಾಣ ಸಂಸ್ಥೆಯಲ್ಲಿ ಒಟ್ಟಿಗೆ ಐದು ಸಿನಿಮಾ ನಿರ್ಮಾಣ ಮಾಡೋದಾಗಿ ಅನೌನ್ಸ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಪ್ರೇಮ್ 'KD' ಅಡ್ಡದಿಂದ ಬಂತು ಭರ್ಜರಿ ಸುದ್ದಿ! ಸಿನಿಮಾ ರಂಗು ಹೆಚ್ಚಿಸಲು ಬಂದ ನೋರಾ ಫತೇಹಿ..!