Rachana Rai in Devil: ದರ್ಶನ್‌ರ 'ಡೆವಿಲ್'ಗೆ ಸಿಕ್ಕಳು ಸುಂದರಿ! ಯಾರೀ ಈ ತುಳು ನಾಡ ಕುವರಿ?

Rachana Rai in Devil: ದರ್ಶನ್‌ರ 'ಡೆವಿಲ್'ಗೆ ಸಿಕ್ಕಳು ಸುಂದರಿ! ಯಾರೀ ಈ ತುಳು ನಾಡ ಕುವರಿ?

Published : May 20, 2024, 11:35 AM IST

ವಾಮನ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತುಳುನಾಡ ಕುವರಿ ರಚನಾ ರೈ ಅವರು ನಟ ದರ್ಶನ್ ಅವರ ಡೆವಿಲ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ನಟನೆಯ 'ಡೆವಿಲ್' (Devil) ಸಿನಿಮಾಗೆ ನಾಯಕಿಯ ಆಯ್ಕೆಯಾಗಿದೆ. ವಾಮನ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತುಳುನಾಡ ಕುವರಿ ರಚನಾ ರೈ (Rachana Rai) ಅವರು ಡೆವಿಲ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೊನ್ನೆಯಷ್ಟೇ ದರ್ಶನ್ ಅಭಿಮಾನಿಗಳಿಗೆ ಸಿನಿಮಾ ತಂಡ ಖುಷಿ ವಿಚಾರ ನೀಡಿ, ಸಿನಿಮಾದ ಫಸ್ಟ್ ಲುಕ್  ರಿಲೀಸ್ ಆದ ಬೆನ್ನಲ್ಲೇ ಅದರ ತೆರೆ ಹಿಂದಿನ ಝಲಕ್ ಹೇಗಿತ್ತು ಎಂಬುದನ್ನು ಇದೀಗ ರಿವೀಲ್ ಮಾಡಿದ್ದಾರೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ. 

ಡೆವಿಲ್ ದಿ ಹೀರೋ ಚಿತ್ರಕ್ಕೆ ರಚನಾ ರೈ ಹೀರೋಯಿನ್ ಅನ್ನುವ ಮಾತನ್ನ, ಅಧಿಕೃತವಾಗಿಯೇ ಡೈರೆಕ್ಟರ್ ಮಿಲನ ಪ್ರಕಾಶ್ (Milan Prakash)  ಹೇಳಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ ಮೂಲಕ  ಈ ವಿಷಯವನ್ನ ತಿಳಿಸಿದ್ದು, ನಮ್ಮ ನೆಲೆದ ಪ್ರತಿಭೆ ಎನ್ನುವುದನ್ನೂ ಮಿಲನಾ ಪ್ರಕಾಶ್ ಹೇಳಿಕೊಂಡಿದ್ದಾರೆ. ‘ತಾರಕ್’ (Tarak)ನಂತರ ಡೆವಿಲ್ ಚಿತ್ರದ ಮೂಲಕ ಮತ್ತೆ ದರ್ಶನ್‌ಗೆ ಪ್ರಕಾಶ್ ವೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಶೂಟಿಂಗ್ ವೇಳೆ, ದರ್ಶನ್ ಕೈಗೆ ಪೆಟ್ಟಾದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತವಾಗಿತ್ತು. ಈಗ ಗುಣಮುಖರಾಗಿರುವ ದರ್ಶನ್ ಸದ್ಯದಲ್ಲೇ ಡೆವಿಲ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಈ ನಟಿ ಕೇವಲ ನಟಿ ಮಾತ್ರವಲ್ಲ ಬ್ಯಾಡ್ಮಿಂಟನ್ ಪ್ಲೇಯರ್‌, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ. ಓ‌ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ರಚನಾ ಸಕಲಕಲಾವಲ್ಲಭೆ.

ಇದನ್ನೂ ವೀಕ್ಷಿಸಿ:  ಸೀರಿಯಲ್‌ ವಿಲನ್‌ಗಳಿಬ್ಬರ ಲವ್‌ ಸ್ಟೋರಿ ಸಾವಿನಲ್ಲಿ ಅಂತ್ಯ! ಪವಿತ್ರಾ ಜೊತೆ ಚಂದುಗೆ ಅಕ್ರಮ ಸಂಬಂಧ?

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more