ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ಕುಮಾರ್ ನಿರ್ಮಾಣ ಮಾಡಿರೋ ಕೊತ್ತಲವಾಡಿ ಸಿನಿಮಾ ಇದೇ ವಾರಾಂತ್ಯ ತೆರೆಗೆ ಬರ್ತಾ ಇದೆ. ಈ ನಡುವೆ ಕೊತ್ತಲವಾಡಿ ಸಿನಿಮಾ ಟೀಂ ಅಸಲಿ ಕೊತ್ತಲವಾಡಿಗೆ ವಿಸಿಟ್ ಕೊಟ್ಟಿದ್ದಾರೆ.
ಕೊತ್ತಲವಾಡಿಗೆ ಭೇಟಿ ಕೊಟ್ಟ ಕೊತ್ತಲವಾಡಿ ಸಿನಿಮಾ ಟೀಂ. ಯೆಸ್ ರಾಕಿಂಗ್ ಯಶ್ ರಾಯಿ ಪುಷ್ಪ ಅರುಣ್ಕುಮಾರ್ ನಿರ್ಮಾಣ ಮಾಡಿರೋ ಕೊತ್ತಲವಾಡಿ ಸಿನಿಮಾ ಶುಕ್ರವಾರ ತೆರೆಗೆ ಬರ್ತಾ ಇದೆ. ಸದ್ಯ ಕೊತ್ತಲವಾಡಿ ಸಿನಿಮಾ ಟೀಂ ಕೊತ್ತಲವಾಡಿ ಗ್ರಾಮಕ್ಕೆ ಬೇಟಿ ಕೊಟ್ಟಿದ್ದಾರೆ.
ಕೊತ್ತಲವಾಡಿ ಅನ್ನೋ ಹೆಸರಲ್ಲಿ ಚಾಮರಾನಗರ ಜಿಲ್ಲೆಯಲ್ಲಿ ಒಂದು ಗ್ರಾಮ ಇದೆ. ಇಲ್ಲಿಯೇ ಸಿನಿಮಾ ತಂಡ ಶೂಟಿಂಗ್ ಕೂಡ ಮಾಡಿದೆ. ಈ ಊರಿನ ಹೆಸರಲ್ಲಿ ಒಂದು ಸ್ಪಾರ್ಕ್ ಅದನ್ನೇ ಸಿನಿಮಾ ಟೈಟಲ್ ಆಗಿಟ್ಟುಕೊಂಡಿದೆ. ತಮ್ಮ ಊರಿನ ಹೆಸರಲ್ಲಿ ಸಿನಿಮಾ ಬರ್ತಾ ಇರೋದು ಈ ಊರಿನ ಜನಕ್ಕೂ ಖುಷಿ ಕೊಟ್ಟಿದೆ. ಸದ್ಯ ಈ ಊರಿನ ದೇಗುಲದಲ್ಲಿ ಪೂಜೆ ಸಲ್ಲಿಸಿ ಸಿನಿಮಾ ಗೆಲ್ಲಲಿ ಅಂತ ಪ್ರಾರ್ಥಿಸಿದೆ ಕೊತ್ತಲವಾಡಿ ಸಿನಿಮಾ ಟೀಂ