Dec 9, 2023, 2:49 PM IST
ದಶಕಗಳ ಕಾಲ ಬೆಳ್ಳೆ ತೆರೆ ಮೇಲೆ ನಟಿಸಿದ್ದ ನಟಿ ಲೀಲಾವತಿ(Leelavathi) ನಮ್ಮನ್ನೆಲ್ಲಾ ಅಗಲಿದ್ದಾರೆ. ಐದು ದಶಕಗಳ ಕಾಲ ಇವರು ನಟಿಸಿ, ನಮ್ಮನ್ನೆಲ್ಲಾ ರಂಜಿಸಿದ್ದಾರೆ. ದಕ್ಷಿಣ ಕನ್ನಡ(Dakshina kannada) ಜಿಲ್ಲೆಯ ಬೆಳ್ತಂಗಡಿಯಲ್ಲಿ ಇವರು ಜನಿಸಿದ್ದು, ಬಳಿಕ ರಂಗಭೂಮಿ ಪ್ರವೇಶಿದ್ರು. ನಂತರ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ರು. ದಿಗ್ಗಜ ನಟರ ಜೊತೆ ನಟಿಸಿದ್ದ ಲೀಲಾವತಿ ಮಮತೆಯ ಮೂರ್ತಿಯಾಗಿದ್ದರು. ಅಲ್ಲದೇ ಮಾತೃ ರೂಪಿಣಿಯಾಗಿ ಕಾಣಿಸಿಕೊಂಡಿದ್ದರು. ಡಾ. ರಾಜ್‌ಕುಮಾರ್ ಮತ್ತು ಲೀಲಾವತಿ ಜೋಡಿಯನ್ನು ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದರು. ಇವರನ್ನು 70ರ ದಶಕದ ನಂತರ ಜನ ತಾಯಿಯಾಗೆ ನೋಡಿದ್ದಾರೆ. ರಾಜ್ ಕುಮಾರ್ ಅವರಿಗೆ ತಾಯಿಯಾಗಿ, ಅತ್ತೆಯಾಗಿಯೂ ನಟಿಸಿ, ಪ್ರಬಲ ಪೈಪೋಟಿಯನ್ನು ನೀಡಿದ್ದರು.
ಇದನ್ನೂ ವೀಕ್ಷಿಸಿ: ಕನ್ನಡ ಚಿತ್ರರಂಗದ ದಿಗ್ಗಜ ನಟಿಯ ಯುಗಾಂತ್ಯ ! ಉಸಿರು ನಿಲ್ಲಿಸಿದ ಚಿತ್ರ ರಂಗದ ಮಹಾನ್ ಚೇತನ !