ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ 'ಕೆಜಿಎಫ್ 2' ಚಿತ್ರದ ಕೊನೆಯ ಶಾಟ್ ಮುಗಿದ ಭಾವುಕ ಕ್ಷಣ ಹೇಗಿತ್ತು? ಯಶ್- ಪ್ರಶಾಂತ್ ನೀಲ್ ಅಪರೂಪದ ವಿಡಿಯೋ ಇಲ್ಲಿದೆ.
ನಟ ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್‌ನ 'ಕೆಜಿಎಫ್ 2' (KGF 2) ಚಿತ್ರ ಈಗಾಗಲೇ ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದೆ. ಆದರೂ ಅದರ ಅಬ್ಬರ ಇನ್ನೂ ತಗ್ಗಿಲ್ಲ ಎಂದೆನ್ನಬಹುದು. 1000 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡುವ ಮೂಲಕ ಕೆಜಿಎಫ್ 2 ಚಿತ್ರ ಎಲ್ಲಾ ದಾಖಲೆಗಳನ್ನೂ ಮುರಿದು ಹಾಕಿದೆ. ಅಲ್ಲದೇ ಕೆಲ ದಿನಗಳ ಹಿಂದೆ ಅಷ್ಟೇ ಕೆಜಿಎಫ್ 2 ಚಿತ್ರವು ಅಮೇಜಾನ್ ಪ್ರೈಂ (Amazon Prime) ನಲ್ಲಿ ಬಿಡುಗಡೆಯಾಗಿದ್ದು, ಅಲ್ಲಿಯೂ ರೆಂಟ್ ಮೇಲೆ ನೀವು ಚಿತ್ರವನ್ನು ವೀಕ್ಷಿಸಬಹುದಾಗಿದೆ.
Yash: ಅಪ್ಪ ಸಿನಿಮಾದಲ್ಲಿ ರಾಕಿಂಗ್, ಮಕ್ಕಳು ಮನೆಯಲ್ಲಿ ರಾಕಿಂಗ್!
ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ, ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಪ್ರೇಕ್ಷಕರ ಮನಸೆಳೆದಿದೆ. ಈಗಾಗಲೇ ಅನೇಕ ದಾಖಲೆಗಳನ್ನು ಬರೆದಿರುವ ಚಿತ್ರ ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳೂ ಒಮ್ಮೆ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದೆ. ಹೀಗೆ ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ 'ಕೆಜಿಎಫ್ 2' ಚಿತ್ರದ ಕೊನೆಯ ಶಾಟ್ ಮುಗಿದ ಭಾವುಕ ಕ್ಷಣ ಹೇಗಿತ್ತು? ಯಶ್- ಪ್ರಶಾಂತ್ ನೀಲ್ ಅಪರೂಪದ ವಿಡಿಯೋ ಇಲ್ಲಿದೆ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies