ಸಿನಿ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯಲು ಹೊಸ ಪ್ಲ್ಯಾನ್‌:  ಇಷ್ಟ ಆದ್ರೆ ಮಾತ್ರ ಇಂಟರ್‌ವಲ್‌ನಲ್ಲಿ ಟಿಕೆಟ್‌ ಖರೀದಿಸಿ!

ಸಿನಿ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯಲು ಹೊಸ ಪ್ಲ್ಯಾನ್‌: ಇಷ್ಟ ಆದ್ರೆ ಮಾತ್ರ ಇಂಟರ್‌ವಲ್‌ನಲ್ಲಿ ಟಿಕೆಟ್‌ ಖರೀದಿಸಿ!

Published : Jul 09, 2024, 10:06 AM IST

ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರದೇ ಬಣಗುಡುತ್ತಿರೋ ಥಿಯೇಟರ್ಸ್. ಇದಕ್ಕೆ ಇಲ್ಲೊಬ್ಬ ನಿರ್ದೇಶಕ, ನಿರ್ಮಾಪಕ ಹೊಸ ಪ್ಲ್ಯಾನ್‌ವೊಂದನ್ನು ಮಾಡಿದ್ದಾರೆ. ಅರ್ಧ ಸಿನಿಮಾವನ್ನ ಉಚಿತವಾಗಿ ತೋರಿಸಲು ನಾಕ್ ಔಟ್ ಚಿತ್ರತಂಡ ಪ್ಲ್ಯಾನ್‌ ಮಾಡಿದೆ. ಮೊದಲಾರ್ಧ ಇಷ್ಟವಾದ್ರೆ ಇಂಟರ್‌ವಲ್‌ನಲ್ಲಿ ಟಿಕೆಟ್ ತೆಗೆದುಕೊಂಡು ಇನ್ನರ್ಧ ಸಿನಿಮಾ ನೋಡಿ ಎನ್ನುತ್ತಿದ್ದಾರೆ.

ಚಿತ್ರರಂಗದ ಇತಿಹಾಸದಲ್ಲೆ ಇದೇ ಮೊದಲು ಹೊಸ ಪ್ರಯೋಗ ಮಾಡಲು ನಾಕ್ ಔಟ್( Knock Out movie) ಚಿತ್ರತಂಡ ಮುಂದಾಗಿದೆ. ಜುಲೈ 19ರಂದು ನಾಕ್‌ಔಟ್‌ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ತಂಡ ಹೊಸ ಪ್ಲ್ಯಾನ್ ಮಾಡಿದೆ. ಅದುವೇ ಅರ್ಥ ಸಿನಿಮಾ ಉಚಿತವಾಗಿ ನೋಡಿ, ಇನ್ನರ್ಧ ಬೇಕಿದ್ರೆ ಟಿಕೆಟ್‌ (Ticket) ಖರೀದಿಸಿ ಎಂದು. ಇದರ ಅರ್ಥ ಏನೆಂದರೆ ಟಿಕೆಟ್ ಖರೀದಿಸಿ ಸಿನಿಮಾ ಚೆನ್ನಾಗಿಲ್ಲ ಅಂತ ಹೊರ ಬಂದು ಬೇಸರ ಮಾಡಿಕೊಳ್ಳುವ ಬದಲು. ಫಸ್ಟ್‌ ಹಾಫ್‌ ಸಿನಿಮಾ ನೋಡಿದ ಮೇಲೆ ಏನೋ ಇಂಟ್ರೆಸ್ಟಿಂಗ್ ಆಗಿದೆ ಅಂತ ಎರಡನೇ ಭಾಗ ನೋಡಲು ಮುಂದಾಗುವವರು ಟಿಕೆಟ್‌ ಖರೀದಿಸಬೇಕಾಗುತ್ತದೆ.'ಚಿತ್ರ ಗುಣಮಟ್ಟವನ್ನು ಮೊದಲರ್ಧ ಸಿನಿಮಾದಲ್ಲಿ ನಿರ್ಧರಿಸುವ ಪ್ರೇಕ್ಷಕರು ಉಚಿತವಾಗಿ ಸಿನಿಮಾ ನೋಡಬಹುದು. ನಂತರ ಸೆಕೆಂಡ್ ಹಾಫ್‌ ಸಿನಿಮಾ ನೋಡಬೇಕು ಅನಿಸಿದರೆ ಮಾತ್ರ ಟಿಕೆಟ್ ಕೊಂಡು ನೋಡಬಹುದು. ಪ್ರಮುಖ ಚಿತ್ರಮಂದಿರಗಳಲ್ಲಿ ಮಾತ್ರ ಈ ವ್ಯವಸ್ಥೆ ಸೀಮಿತ' ಎಂದು ನಿರ್ದೇಶಕ ಅಂಬರೀಶ್(Director Ambarish) ಹೇಳಿದ್ದಾರೆ. ಈ ಚಿತ್ರದಲ್ಲಿ ಪೃಥ್ವಿ ಹಾಗೂ ರಚನಾ ಇಂದರ್‌ ನಟಿಸಿದ್ದಾರೆ. ಈ ಚಿತ್ರಕ್ಕೆ ವಿ.ರವಿಕುಮಾರ್ ಹಾಗೂ ಶಂಶುದ್ದೀನ್‌ ಎ ಬಂಡವಾಳ ಹಾಕಿದ್ದಾರೆ. ಇದೊಂದು ಹ್ಯೂಮರ್ ಡಾರ್ಕ್‌ ಕಾಮಿಡಿ ಜಾನರ್‌ನ ಚಿತ್ರವಾಗಿದ್ದು ನಾಯಕ ಆಂಬ್ಯುಲೆನ್ಸ್‌ ಚಾಲಕನಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರತಿಯೊಬ್ಬ ಆಂಬ್ಯುಲೆನ್ಸ್‌ ಚಾಲಕರಿಗೆ ಅರ್ಪಿಸುತ್ತಿದ್ದಾರೆ. ಚಿತ್ರತಂಡದ ಈ ಪ್ಲ್ಯಾನ್ ನಿಜ್ಕಕೂ ವರ್ಕ್ ಆಗು್ತತಾ ಕಾದು ನೋಡಬೇಕು.

ಇದನ್ನೂ ವೀಕ್ಷಿಸಿ:  ಟ್ರೆಂಡಿಂಗ್‌ನಲ್ಲಿ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ..! ನಟ ಗಣೇಶ್ ಸಿನಿ ಖರಿಯರ್‌ನ ಬಿಗ್ ಬಜೆಟ್ ಚಿತ್ರ..!

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more