ಬಾಕ್ಸ್‌ ಆಫೀಸ್‌ನಲ್ಲಿ ವಿಕ್ರಾಂತ್‌ ರೋಣ ಅಬ್ಬರ: ಫಸ್ಟ್ ಡೇ ಕಿಚ್ಚನ ಕಲೆಕ್ಷನ್ ಎಷ್ಟು ಕೋಟಿ?

ಬಾಕ್ಸ್‌ ಆಫೀಸ್‌ನಲ್ಲಿ ವಿಕ್ರಾಂತ್‌ ರೋಣ ಅಬ್ಬರ: ಫಸ್ಟ್ ಡೇ ಕಿಚ್ಚನ ಕಲೆಕ್ಷನ್ ಎಷ್ಟು ಕೋಟಿ?

Published : Jul 30, 2022, 03:09 PM IST

ವಿಕ್ರಾಂತ್ ರೋಣ ಸಿನಿಮಾ ಮೂಲಕ ಬಾಕ್ಸಾಫೀಸ್ ರೂಲ್ ಮಾಡುತ್ತಿರೋ ಕಿಚ್ಚ ಕರ್ನಾಟದಲ್ಲಿ ನಯಾ ರೆಕಾರ್ಡ್ ಬರೆದಿದ್ದಾರೆ. ಕಿಚ್ಚನ ಕರಿಯರ್‌ನಲ್ಲಿ ಬಿಗ್ಗೆಸ್ಟ್ ಓಪನಿಂಗ್ ಪಡೆದ ಸಿನಿಮಾ ವಿಕ್ರಾಂತ್ ರೋಣ ಕರ್ನಾಟಕ ಒಂದರಲ್ಲೇ ಮೊದಲ ದಿನ 325 ಸಿಂಗಲ್ ಸ್ಕ್ರೀನ್, ಹಾಗೂ 70 ಮಲ್ಟಿಫೆಕ್ಸ್ ಸ್ಕ್ರೀನ್ಸ್ ಗಳಲ್ಲಿ‌ ಒಟ್ಟು ಸುಮಾರು 2500 ಪ್ರದರ್ಶನ ಕಂಡಿದೆ. 

ವಿಕ್ರಾಂತ್ ರೋಣ ಸಿನಿಮಾ ಮೂಲಕ ಬಾಕ್ಸಾಫೀಸ್ ರೂಲ್ ಮಾಡುತ್ತಿರೋ ಕಿಚ್ಚ ಕರ್ನಾಟದಲ್ಲಿ ನಯಾ ರೆಕಾರ್ಡ್ ಬರೆದಿದ್ದಾರೆ. ಕಿಚ್ಚನ ಕರಿಯರ್‌ನಲ್ಲಿ ಬಿಗ್ಗೆಸ್ಟ್ ಓಪನಿಂಗ್ ಪಡೆದ ಸಿನಿಮಾ ವಿಕ್ರಾಂತ್ ರೋಣ ಕರ್ನಾಟಕ ಒಂದರಲ್ಲೇ ಮೊದಲ ದಿನ 325 ಸಿಂಗಲ್ ಸ್ಕ್ರೀನ್, ಹಾಗೂ 70 ಮಲ್ಟಿಫೆಕ್ಸ್ ಸ್ಕ್ರೀನ್ಸ್ ಗಳಲ್ಲಿ‌ ಒಟ್ಟು ಸುಮಾರು 2500 ಪ್ರದರ್ಶನ ಕಂಡಿದೆ. ಈ ಎಲ್ಲಾ ಲೆಕ್ಕಾಚಾರದ ಮೇಲೆ ಫಸ್ಟ್ ಡೇ ಕರ್ನಾಟಕ ಒಂದರಲ್ಲೇ 22 ಕೋಟಿ ಗಳಿಸಿದೆ ಅಂತ ಅಂದಾಜಿಸಲಾಗಿದೆ. 

ಹೊರ ರಾಜ್ಯಗಳಲ್ಲೂ ವಿಕ್ರಾಂತ್ ರೋಣನಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಉತ್ತಮ ಗಳಿಕೆಯತ್ತ ಮುನ್ನುಗ್ಗುತ್ತಿರೋ ವಿಕ್ರಾಂತ್ ರೋಣ ಉತ್ತರ ಭಾರತದಲ್ಲಿ ಒಟ್ಟು 690 ಸ್ಕ್ರೀನ್‌ ಗಳಲ್ಲಿ ಬಿಡುಗಡೆ ಆಗಿ 2500ಕ್ಕೂ ಹೆಚ್ಚು ಶೋಸ್ ಗಳಾಗಿವೆ. ಈ ಆಧಾರದ ಮೇಲೆ ಬಾಲಿವುಡ್ನಲ್ಲಿ ವಿಕ್ರಾಂತ್ ರೋಣ 11 ಕೋಟಿ ಕಲೆಕ್ಷನ್ ಮಾಡಿದೆಯಂತೆ!

ಇನ್ನು ಆಂಧ್ರ ಮತ್ತು ತೆಲಂಗಾಣದಲ್ಲಿ 350 ಸ್ಕ್ರೀನ್ ಗಳಲ್ಲಿ ವಿ.ಆರ್ ಮೂವಿ ತೆರೆ ಕಂಡಿದ್ದು 7 ರಿಂದ 8 ಕೋಟೆ ವಹಿವಾಟು ಮಾಡಿದೆಯಂತೆ. ಹಾಗೆ ತಮಿಳಿನಲ್ಲಿ 180 ಸ್ಕ್ರೀನ್ಸ್ ಗಳಲ್ಲಿ ತೆರೆಕಂಡ ಕಿಚ್ಚನ ಈ ಸಿನಿಮಾ 2 ಕೋಟಿ ಕಲೆಕ್ಷನ್ ಮಾಡಿದ್ರೆ ಕೇರಳದಲ್ಲಿ 110 ಸ್ಕ್ರೀನ್ ಗಳಲ್ಲಿ‌ ಪ್ರದರ್ಶನ ಕಂಡಿದ್ದು, ಇಲ್ಲೂ ಉತ್ತಮ ಓಪನಿಂಗ್ ಪಡಿದು ಫಸ್ಟ್ ಡೇ ಭಾರತದಾಧ್ಯಂತ ವಿಕ್ರಾಂತ್ ರೋಣ ಸಿನಿಮಾ 42 ಕೋಟಿ ಗಳಿಸಿದೆ ಅಂತ ಹೇಳಲಾಗ್ತಿದೆ. 
 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!