Jun 2, 2023, 9:46 AM IST
ತುಂಬಾ ಎಕ್ಸ್ಪೆಕ್ಟೇಶನ್‌ಗಳ ಮಧ್ಯೆ ಭಾರತೀಯ ಚಿತ್ರರಂಗದ ಕಿಚ್ಚ ಸುದೀಪ್ ಹೊಸ ಸಿನಿಮಾ ಸ್ಟಾರ್ಟ್ ಮಾಡೇ ಬಿಟ್ಟಿದ್ದಾರೆ. ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ಜೊತೆ ಕಿಚ್ಚನ 46ನೇ ಮೂವಿ ಅನೌನ್ಸ್ ಆಗಿದೆ. ಆದ್ರೆ ಇಷ್ಟಕ್ಕೆ ಹೆಬ್ಬುಲಿ ಫ್ಯಾನ್ಸ್ ಸುಮ್ಮನಾಗ್ತಾರಾ.? ಕಂಡಿತಾ ಇಲ್ಲ. ಸಿನಿಮಾ ಏನೋ ಅನೌನ್ಸ್ ಮಾಡಿದ್ರಿ, ಪ್ರೊಡಕ್ಷನ್ ಯಾರಂತನೂ ಹೇಳಿದ್ರಿ, ಆದ್ರೆ ಯಾವ ಥರಾ ಸಿನಿಮಾ.? ಹೀರೋಯಿನ್ ಯಾರು.? ಡೈರೆಕ್ಟರ್‌ಗಳ ಬಗ್ಗೆ ಹೇಳೇ ಇಲ್ವಲ್ಲಾ ಅಂತ ಸುದೀಪ್‌ಗೆ ಪ್ರಶ್ನೆಗಳ ಸುರಿಮಳೆ ಕೇಳಿದ್ದಾರೆ. ಇದಕ್ಕೆಲ್ಲಾ ಈಗ ಒಂದಿಷ್ಟು ಉತ್ತರವೂ ಸಿಕ್ಕಿದೆ. ವಿಕ್ರಾಂತ್ ರೋಣ ಕಮರ್ಷಿಯಲ್ ಆಗಿ ಸಕ್ಸಸ್ ಆಯ್ತು. ಹಾಕಿದ ಬಂಡವಾಳದ ಜೊತೆ ಲಾಭನೂ ತಂದುಕೊಡ್ತು. ಆದ್ರೆ ಕಥೆಯ ವಿಷ್ಯದಲ್ಲಿ ಸುದೀಪ್ ಅಭಿಮಾನಿಗಳಿಗೆ ನೆಮ್ಮದಿ ಸಿಗ್ಲಿಲ್ಲ. ಕಿಚ್ಚ ಇನ್ನೂ ಹೊಸತನ್ನ ತೆರೆ ಮೇಲೆ ತರಬೇಕು ಅಂತ ಫ್ಯಾನ್ಸ್ ಕೇಳಿದ್ರು. ಹಾಗಾಗಿ ಪ್ರೇಕ್ಷಕರ ಮಹಾಪ್ರಭುಗಳ ಮಹಾ ಆದೇಶಕ್ಕೆ ತಲೆಬಾಗಿದ ಕಿಚ್ಚ, ಈ ಸಲ ವೆರೈಟಿ ಕೊಡೋಕೆ ಒಂದಲ್ಲ, ಎರಡಲ್ಲ ಇದನಒಟ್ಟೊಟ್ಟಿಗೆ ಮೂರ್ ಪ್ರಾಜೆಕ್ಟ್ ಶುರು ಮಾಡಿದ್ದಾರೆ ಈ ಮೂರು ಸಿನಿಮಾಗಳು ಕೂಡ ಒಂದಕ್ಕಿಂತ ಒಂದು ಡಿಫ್ರೆಂಟ್ ಮತ್ತು ದುಬಾರಿ ಎನ್ನಲಾಗ್ತಿದೆ.
ಇದನ್ನೂ ವೀಕ್ಷಿಸಿ: ಮಹೇಶ್ ಬಾಬು 28 ಸಿನಿಮಾ ಗ್ಲಿಂಪ್ಸ್ ರಿಲೀಸ್: ತೆರೆ ಮೇಲೆ ಸ್ಟಾರ್ ಡೈರೆಕ್ಟರ್, ಸ್ಟಾರ್ ಹೀರೋ ಮ್ಯಾಜಿಕ್!