ಸದ್ಯ ಯಶ್ ಬಳಿ ಹಲವಾರು ಐಶಾರಾಮಿ ಕಾರುಗಳಿದ್ದು, ಯಶ್ ಇದೀಗ 4.50 ಕೋಟಿ ರೂಪಾಯಿ ಬೆಲೆ ಬಾಳುವ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ.
ಕೆಜಿಎಫ್ ಸಿನಿಮಾ ನಂತರ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ನಟ ಯಶ್ ಸದ್ಯ ದೇಶದ 50 ಪ್ರಭಾವಿ ಯುವಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಅದ್ಬುತವಾದ ನಟನೆ ಮೂಲಕ ಬಾಲಿವುಡ್ ನಟರಿಗೆ ಸಮನಾಗಿ ಮಿಂಚುತ್ತಿದ್ದಾರೆ. ಸದ್ಯ ಯಶ್ ಬಳಿ ಹಲವಾರು ಐಶಾರಾಮಿ ಕಾರುಗಳಿದ್ದು ಯಶ್ ಇದೀಗ 4.50 ಕೋಟಿ ಬೆಲ ಬಾಳುವ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಸದ್ಯ ಇದೇ ದುಬಾರಿ ಕಾರು ಎನ್ನಲಾಗಿದೆ. ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಒಟ್ಟು ಮೂರು ಬೆಂಝ್ ನಿರ್ಮಾಣದ ಕಾರುಗಳನ್ನು ಖರೀಸಿದ್ದರು. ಐಷಾರಾಮಿ ಸೌಲಭ್ಯದ ಇ-ಕ್ಲಾಸ್ ಸೆಡಾನ್ ಮತ್ತು ಜಿಎಲ್ಸಿ ಎಸ್ಯುವಿ ಖರೀದಿಸಿದ್ದರು. ಯಶ್ ಹೊಸಾ ಕಾರಿನ ವಿಡಿಯೋ ಇದೀಗ ಅಭಿಮಾನಿ ವಲಯದಲ್ಲಿ ಫುಲ್ ವೈರಲ್ ಆಗುತ್ತಿದೆ.
ಇದನ್ನೂ ವೀಕ್ಷಿಸಿ: ಬೇರ ಇಂದು ರಾಜ್ಯಾದ್ಯಂತ ಬಿಡುಗಡೆ: ಧರ್ಮ ಸಂಘರ್ಷ ಜೊತೆಗೆ ಹಲವು ಅಂಶಗಳ ಬಗ್ಗೆ ಸಿನಿಮಾದಲ್ಲಿ ಬಿತ್ತರ